Breaking News

ರಚಿತಾ ಅಭಿನಯದ ‘100’, ‘ಏಕ್ ಲವ್ ಯಾ’, ತೆಲುಗಿನ ‘ಸೂಪರ್ ಮಚ್ಚಿ’ ಚಿತ್ರಗಳು ಬಿಡುಗಡೆಗೆ ಸಜ್ಜು..!

ಹುಟ್ಟುಹಬ್ಬಕ್ಕೆ ಫಸ್ಟ್​ಲುಕ್​ಗಳ ಉಡುಗೊರೆ....

SHARE......LIKE......COMMENT......

ಬೆಂಗಳೂರು:

ರಚಿತಾ ಅಭಿನಯದ ‘100’, ‘ಏಕ್ ಲವ್ ಯಾ’, ತೆಲುಗಿನ ‘ಸೂಪರ್ ಮಚ್ಚಿ’ ಚಿತ್ರಗಳು ಬಿಡುಗಡೆಗೆ ಸಜ್ಜಾಗುತ್ತಿವೆ. ಈ ಮಧ್ಯೆ, ಧನಂಜಯ್ ಜತೆಗೆ ‘ಮಾನ್ಸೂನ್ ರಾಗ’, ಪ್ರಜ್ವಲ್ ದೇವರಾಜ್ ಜತೆಗೆ ‘ವೀರಂ’, ತಮಿಳಿನ ‘ಕೊಲಮಾವು ಕೋಕಿಲ’ ರೀಮೇಕ್, ‘ಏಪ್ರಿಲ್’ ಚಿತ್ರಗಳನ್ನು ರಚಿತಾ ಒಪ್ಪಿಕೊಂಡಿದರು. ರಚಿತಾ ಸಿನಿಮಾ ಪಟ್ಟಿಗೆ ಇನ್ನೂ ಎರಡು ಚಿತ್ರಗಳು ಹೊಸದಾಗಿ ಸೇರ್ಪಡೆಯಾಗಿವೆ. ಈ ಪೈಕಿ ಮೊದಲನೆಯದು ‘ಲಿಲ್ಲಿ’. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಈ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಆಗಿದ್ದು, ಶನಿವಾರ ರಚಿತಾ ಹುಟ್ಟುಹಬ್ಬದ ಅಂಗವಾಗಿ ಮೊದಲ ಪೋಸ್ಟರ್ ಬಿಡುಗಡೆ ಆಗಿದೆ. ಭೂತ-ವರ್ತಮಾನ-ಭವಿಷ್ಯದ ಸುತ್ತ ಈ ಚಿತ್ರ ಸುತ್ತಲಿದ್ದು, ನವೆಂಬರ್​ನಿಂದ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ. ವಿಜಯ್ ಗೌಡ ಈ ಚಿತ್ರದ ನಿರ್ದೇಶಕರು. ಇದಲ್ಲಿದೆ ‘ಮ್ಯಾಟ್ನಿ’ ಎಂಬ ಸತೀಶ್ ನೀನಾಸಂ ಅಭಿನಯದ ಚಿತ್ರಕ್ಕೂ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸತೀಶ್ ಮತ್ತು ರಚಿತಾ ರಾಮ್ ‘ಅಯೋಗ್ಯ’ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ಅಭಿನಯಿಸಿದ್ದರು. ಈಗ ‘ಅಯೋಗ್ಯ’ದ ಜನಪ್ರಿಯ ಜೋಡಿ, ‘ಮ್ಯಾಟ್ನಿ’ಗೆ ಹೊರಟು ನಿಂತಿರುವುದು ವಿಶೇಷ. ಈ ಚಿತ್ರವನ್ನು ಮನೋಹರ್ ಕಾಂಪಳ್ಳಿ ನಿರ್ದೇಶನ ಮಾಡುತ್ತಿದ್ದಾರೆ…….