Breaking News

ಕಳ್ಳತನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೈಲ್ವೆ ಮಹತ್ವದ ನಿರ್ಧಾರ..!

30 ನಿಮಿಷ ಮುಂಚೆ ಬ್ಲಾಂಕೆಟ್ ವಾಪಸ್ ಕೊಡಬೇಕು....

SHARE......LIKE......COMMENT......

ನವದೆಹಲಿ: 

ಸಾರ್ವಜನಿಕ ವಸ್ತುಗಳ ಕಳ್ಳತನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೈಲ್ವೆ ಮಹತ್ವದ ನಿರ್ಧಾರ ಕೈಗೊಂಡಿದೆ. ರೈಲ್ವೆ ಇಲಾಖೆಯಲ್ಲಿ ಪ್ರಯಾಣಿಕರ ಸೌಲಭ್ಯಕ್ಕಾಗಿ ಇರಿಸಲಾದ ವಸ್ತುಗಳು ಎಗ್ಗಿಲ್ಲದೇ ಕಳ್ಳತನವಾಗುತ್ತಿದೆ.

2018 ರಲ್ಲಿ 79,350 ಹ್ಯಾಂಡ್ ಟವಲ್ ಗಳು, 27,545 ಬೆಡ್ ಶೀಟ್ ಗಳು, 21,050 ಪಿಲ್ಲೋ ಕವರ್, 2,150 ಪಿಲ್ಲೋಗಳು 2,065 ಬ್ಲಾಂಕೆಟ್ ಗಳು ಕಳ್ಳತನವಾಗಿದ್ದು ರೈಲ್ವೆ ಇಲಾಖೆಯ ಬ್ಲಾಂಕೆಟ್ ಸೇರಿದಂತೆ ಇತರ ವಸ್ತುಗಳ ಕಳ್ಳತನಕ್ಕೆ ಕಡಿವಾಣ ಹಾಕಲು ಇಲಾಖೆ ಮುಂದಾಗಿದ್ದು ಇನ್ನು ಮುಂದೆ 30 ನಿಮಿಷಗಳಷ್ಟು ಪ್ರಯಾಣ ಬಾಕಿ ಇರುವಾಗಲೇ ಬ್ಲಾಂಕೆಟ್ ನ್ನು ವಾಪಸ್ ಪಡೆಯುವ ಕ್ರಮ ಅಳವಡಿಸಿಕೊಳ್ಳಲಿದೆ……