Breaking News

ಉದ್ಯೋಗ ಭಾಗ್ಯದತ್ತ ಹೊಸಹೆಜ್ಜೆ..!

10 ತಿಂಗಳಲ್ಲಿ 1,277ಜನರಿಗೆ ಉದ್ಯೋಗಾವಕಾಶ....

SHARE......LIKE......COMMENT......

ಹುಬ್ಬಳ್ಳಿ:

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ನೋಂದಣಿ, ಮಾಹಿತಿ ಮೂಲಕ ಮಹತ್ವದ ವೇದಿಕೆಯಾಗಿದ್ದ ಉದ್ಯೋಗ ವಿನಿಮಯ ಕಚೇರಿ ಇದೀಗ ಹಲವು ಹೊಸತನಗಳನ್ನು ಅಳವಡಿಸಿಕೊಂಡಿದೆ. ತರಬೇತಿ ಜತೆಗೆ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗವಕಾಶಕ್ಕೆ ಮುಂದಾಗಿದೆ. ಕಳೆದ 10 ತಿಂಗಳಲ್ಲಿ ಧಾರವಾಡ ಜಿಲ್ಲೆಯಲ್ಲಿ 1,277 ಜನರಿಗೆ ಉದ್ಯೋಗವಕಾಶ ಕಲ್ಪಿಸಲಾಗಿದೆ.

ಸರಕಾರಿ ಉದ್ಯೋಗ ನೇಮಕ ಕುಸಿತದಿಂದ ಉದ್ಯೋಗ ವಿನಿಮಯ ಕಚೇರಿ ಇದ್ದೂ ಇಲ್ಲದ ಸ್ಥಿತಿಗೆ ತಲುಪಿತ್ತಾದರೂ, ಇದೀಗ ಖಾಸಗಿ ರಂಗಕ್ಕೆ ಮಾನವ ಸಂಪನ್ಮೂಲ ನೀಡುವ ಉದ್ಯೋಗ ಮೇಳ, ವೃತ್ತಿಪರ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ತರಬೇತಿ ನೀಡುತ್ತಿರುವುದರಿಂದ ಉದ್ಯೋಗ ಆಕಾಂಕ್ಷಿಗಳು ಮತ್ತೆ ಉದ್ಯೋಗ ವಿನಿಮಯ ಕಚೇರಿ ನೋಂದಣಿಗೆ ಆಸಕ್ತಿ ತೋರಿದ್ದಾರೆ.

ನವನಗರದ ಕುವೆಂಪು ರಸ್ತೆಯಲ್ಲಿರುವ ಕಚೇರಿಯಲ್ಲಿ ವಿವಿಧ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಗೆ ಅಗತ್ಯವಾದ ವ್ಯವಸ್ಥಿತ ತರಬೇತಿ ಹಾಗೂ ತರಗತಿ ಕೊಠಡಿಗಳು, ಕಂಪ್ಯೂಟರ್‌ ತರಬೇತಿಗೆ ಪೂಕರ ವ್ಯವಸ್ಥೆಯಿದೆ.

ನೋಂದಣಿಯಿಂದ ಹಿಡಿದು ಇಲ್ಲಿ ದೊರೆಯುವ ಯಾವುದೇ ಸೇವೆಗೆ ಶುಲ್ಕವಿಲ್ಲ. ಕಾಲ ಕಾಲಕ್ಕೆ ಆಯೋಜಿಸುವ ತರಬೇತಿ, ಕಾರ್ಯಾಗಾರ, ಉದ್ಯೋಗ ಮೇಳವನ್ನು ಆಕಾಂಕ್ಷಿಗಳು ಸದುಪಯೋಗ ಪಡೆಯಬೇಕು. ಆಪೇಕ್ಷಿಸುವ ಯಾವುದೇ ಕಾಲೇಜುಗಳಿಗೆ ತೆರಳಿ ವೃತ್ತಿ ಮಾರ್ಗದರ್ಶನ ನೀಡಲು ಸಿದ್ಧರಿದ್ದೇವೆ. ಅರ್ಹರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಮುಖ ಸ್ಥಳಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಅಗತ್ಯ ಮಾರ್ಗದರ್ಶನ, ತರಬೇತಿ ಕೊಡಿಸಲಾಗುತ್ತಿದೆ.ಎಂದುಹಿರಿಯ ಸಹಾಯಕ ನಿರ್ದೇಶಕಿ ಸಾಧನಾ ಪೋಟೆ ತಿಳಿಸಿದರು….