Breaking News

ಪ್ರೇತಾತ್ಮಕ ಶಕ್ತಿಯನ್ನ ತಡೆಯುವ ಶಕ್ತಿ ಉಪ್ಪಿಗಿದೆಯಾ..?

ಋಣಾತ್ಮಕ ಶಕ್ತಿಗೂ ಉಪ್ಪಿಗೂ ಇರುವ ಸಂಬಂಧವೇನು....

SHARE......LIKE......COMMENT......

ಧರ್ಮ-ಜ್ಯೋತಿ:

ಉಪ್ಪಿಗಿಂತ ರುಚಿ ಬೇರೆಯಿಲ್ಲ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಆಹಾರಕ್ಕೊಂದೆ ಅಲ್ಲ, ಸೌಂದರ್ಯ ವೃದ್ಧಿಗೂ ಉಪ್ಪು ಒಳ್ಳೆಯದು. ಇಷ್ಟೇ ಅಲ್ಲ, ವಾಸ್ತು ಶಾಸ್ತ್ರದಲ್ಲಿಯೂ ಉಪ್ಪಿಗೆ ಮಹತ್ವದ ಸ್ಥಾನವಿದೆ. ಉಪ್ಪಿನ ಬಳಕೆಯಿಂದ ದೇಹದಲ್ಲಿ ಶಕ್ತಿ ವೃದ್ಧಿಯಾಗುವ ಜೊತೆಗೆ ಮನೆಗೆ ಧನಾತ್ಮಕ ಶಕ್ತಿಗಳ ಪ್ರವೇಶವಾಗುತ್ತದೆ. ರಾಹು- ಕೇತುಗಳ ಅಡ್ಡ ಪರಿಣಾಮಗಳನ್ನು ತಪ್ಪಿಸಲು ಉಪ್ಪನ್ನು ಬಳಸಲಾಗುತ್ತದೆ. ದೃಷ್ಟಿ ಬಿದ್ದಾಗ ಉಪ್ಪಿನ ಮೂಲಕ ದೃಷ್ಟಿ ತೆಗೆಯಲಾಗುತ್ತದೆ. ಮನೆಯಲ್ಲಿರುವ ಸ್ವಲ್ಪ ಉಪ್ಪನ್ನು ತೆಗೆದುಕೊಂಡು ದೃಷ್ಟಿ ತೆಗೆದು ಅದನ್ನು ಹೊರಗೆ ಅಥವಾ ನೀರಿಗೆ ಹಾಕುವುದರಿಂದ ದೃಷ್ಟಿ ಹೋಗುತ್ತದೆ.

ವಾಸ್ತು ದೋಷದ ಸಮಸ್ಯೆ ಇದ್ದರೆ ಗ್ಲಾಸಿನ ಬಟ್ಟಲಿನಲ್ಲಿ ಉಪ್ಪನ್ನು ಹಾಕಿ ಶೌಚಾಲಯ ಮತ್ತು ಸ್ನಾನ ಗೃಹದಲ್ಲಿಡಿ. ಉಪ್ಪು ಹಾಗೂ ಗಾಜು ರಾಹುವಿನ ವಸ್ತುವಾಗಿರುವುದರಿಂದ ನಕಾರಾತ್ಮಕ ಅಂಶಗಳು ಒಟ್ಟಿಗೆ ಸೇರಿ ಧನಾತ್ಮಕ ಪ್ರಭಾವವುಂಟಾಗುತ್ತದೆ. ಮನೆಯ ಯಾವುದೇ ಭಾಗದಲ್ಲಿ ಗ್ಲಾಸಿನ ಬಟ್ಟಲಿನಲ್ಲಿ ಉಪ್ಪನ್ನು ಇಡಿ. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಪ್ರವೇಶವಾಗುತ್ತದೆ. ಉಪ್ಪನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ, ಮನೆಯ ಮುಖ್ಯ ದ್ವಾರದ ಮೇಲಿಡುವುದರಿಂದ ಮನೆಗೆ ನಕಾರಾತ್ಮಕ ಶಕ್ತಿಯ ಪ್ರವೇಶವಾಗುವುದಿಲ್ಲ. ಕಚೇರಿಯ ಮುಖ್ಯ ದ್ವಾರದ ಬಳಿಯೂ ಹೀಗೆ ಮಾಡುವುದರಿಂದ ಲಾಭವಾಗುತ್ತದೆ.

ರಾತ್ರಿ ನೀರಿಗೆ ಸ್ವಲ್ಪ ಉಪ್ಪು ಬೆರೆಸಿ ಕೈ ಕಾಲು ತೊಳೆಯುವುದರಿಂದ ಚಿಂತೆ ದೂರವಾಗುತ್ತದೆ. ಸುಖವಾದ ನಿದ್ರೆ ಬರುತ್ತದೆ. ರಾಹು,ಕೇತುಗಳ ಅಶುಭ ಪರಿಣಾಮಗಳು ನಷ್ಟವಾಗುತ್ತವೆ. ವಾರಕ್ಕೊಮ್ಮೆ ಉಪ್ಪು ನೀರಿನಲ್ಲಿ ಮಕ್ಕಳಿಗೆ ಸ್ನಾನ ಮಾಡಿಸುವುದರಿಂದ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಡಿಮೆಯಾಗುತ್ತವೆ. ಉಪ್ಪು ನೀರನ್ನು ಮನೆಯ ಎಲ್ಲ ಕೋಣೆಗೆ ಸಿಂಪಡಿಸಿ. ಇದರಿಂದ ನಕಾರಾತ್ಮಕ ಶಕ್ತಿ ಹೋಗಿ ಸಕಾರಾತ್ಮಕ ಶಕ್ತಿ ಮನೆಯಲ್ಲಿ ನೆಲೆಸುತ್ತದೆ……