ಧರ್ಮ-ಜ್ಯೋತಿ:
ಸ್ವಂತ ಮನೆ ಪ್ರತಿಯೊಬ್ಬರ ಕನಸು. ಮನೆಯ ನಿರ್ಮಾಣದ ವೇಳೆ ಎಂಜಿನಿಯರ್ ನಿಂದ ಹಿಡಿದು ಮನೆಯ ಒಳಾಂಗಣ ಸೌಂದರ್ಯದವರೆಗೆ ಎಲ್ಲ ಸಣ್ಣ ಪುಟ್ಟ ವಿಷಯಗಳ ಬಗ್ಗೆ ಗಮನ ಹರಿಸ್ತಾರೆ. ಆದ್ರೆ, ಮನೆಯ ವಾಸ್ತು ಬಗ್ಗೆ ಮಾತ್ರ ಅನೇಕರು ಹೆಚ್ಚಾಗಿ ಗಮನ ನೀಡುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ವಾಸ್ತು ಸರಿಯಿರದೆ ಹೋದಲ್ಲಿ ಆರ್ಥಿಕ ಸಮಸ್ಯೆಯ ಜೊತೆಗೆ ಆರೋಗ್ಯ ಸಮಸ್ಯೆಗಳು ಶುರುವಾಗುತ್ತವೆಯಂತೆ. ಹೊಸ ಮನೆಗೆ ಪ್ರವೇಶ ಮಾಡಿದ ನೀವೂ ಕೂಡ ಆರ್ಥಿಕ ಸಮಸ್ಯೆ ಅಥವಾ ಆರೋಗ್ಯ ಸಮಸ್ಯೆಯಿಂದ ಬಳಲ್ತಾ ಇದ್ದರೆ ಇದಕ್ಕೆ ವಾಸ್ತುದೋಷ ಕಾರಣವೇ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಮನೆ ಕಟ್ಟುವ ಮೊದಲೇ ವಾಸ್ತು ಪ್ರಕಾರ ಮನೆ ನಿರ್ಮಾಣಕ್ಕೆ ಆಧ್ಯತೆ ನೀಡಿ.
ಮನೆ ಕಟ್ಟುವ ಮುನ್ನ ಈ ವಿಚಾರದ ಬಗ್ಗೆ ಗಮನವಿರಲಿ
ಹೊಸ ಮನೆ ನಿರ್ಮಾಣಕ್ಕೆ ಹಳೆ ಮನೆಯ ವಸ್ತುಗಳನ್ನು ಬಳಸಬೇಡಿ. ಅನೇಕರು ಹಣ ಉಳಿಸುವ ಉದ್ದೇಶದಿಂದ ಹಳೆ ಮನೆಯ ವಸ್ತುಗಳನ್ನು ಬಳಸ್ತಾರೆ. ಇದು ನಕಾರಾತ್ಮಕ ಶಕ್ತಿ ಮನೆ ಪ್ರವೇಶಕ್ಕೆ ಕಾರಣವಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಹೆಡ್ ಪಂಪ್ ಅಥವಾ ಅಂಡರ್ ಗ್ರೌಂಡ್ ನೀರಿನ ಟ್ಯಾಂಕನ್ನು ವಾಸ್ತು ಪ್ರಕಾರವೇ ನಿರ್ಮಾಣ ಮಾಡಬೇಕು. ಉತ್ತರ-ಪೂರ್ವ ದಿಕ್ಕಿನಲ್ಲಿ ಇದು ಇದ್ದರೆ ಒಳ್ಳೆಯದು. ಇಷ್ಟೇ ಅಲ್ಲ ಒಳಾಂಗಣದಲ್ಲಿಯೂ ವಾಸ್ತುವಿಗೆ ಗಮನ ನೀಡಬೇಕಾಗುತ್ತದೆ. ಬೆಡ್ ರೂಂ, ಡ್ರಾಯಿಂಗ್ ರೂಂ, ಕಿಚನ್ ಎಲ್ಲ ರೂಮುಗಳನ್ನು ವಾಸ್ತು ಪ್ರಕಾರ ಕಟ್ಟಿಸಿಕೊಳ್ಳಬೇಕು. ವಾಸ್ತು ತಜ್ಞರ ಸಲಹೆ ಪಡೆದು ಮನೆ ನಿರ್ಮಾಣ ಮಾಡಿದಲ್ಲಿ ಪಟ್ಟ ಶ್ರಮಕ್ಕೆ ಫಲ ಸಿಗುತ್ತದೆ. ಮನೆ ಕಟ್ಟಿದ ನೆಮ್ಮದಿ ಸಿಗುತ್ತದೆ. ಇಲ್ಲವಾದ್ರೆ ಹೊಸ ಮನೆ ಪ್ರವೇಶ ಮಾಡಿಯೂ ಕಿರಿಕಿರಿ, ಹಣದ ಸಮಸ್ಯೆಯಿಂದ ಮುಕ್ತಿ ಹೊಂದಲು ಸಾಧ್ಯವಾಗುವುದಿಲ್ಲ.
ಮನೆಯಲ್ಲಿ ಯಾವ ವಸ್ತುಗಳನ್ನ ಇಟ್ಟರೆ ಅಷ್ಟಐಶ್ವರ್ಯ ಫಲಿಸುತ್ತೆ
ಹಿಂದು ಧರ್ಮದಲ್ಲಿ ಕುಬೇರ ಧನ ವೃದ್ಧಿ ಮಾಡ್ತಾನೆಂದು ನಂಬಲಾಗಿದೆ. ಹಾಗೆ ಚೀನಾದಲ್ಲಿ ಲಾಫಿಂಗ್ ಬುದ್ಧನಿಗೆ ಕುಬೇರನ ಸ್ಥಾನ ನೀಡಲಾಗಿದೆ. ಲಾಫಿಂಗ್ ಬುದ್ಧ, ಸುಖ ಹಾಗೂ ಧನವೃದ್ಧಿ ಮಾಡ್ತಾನೆಂದು ಅಲ್ಲಿಯವರ ನಂಬಿಕೆ. ಅನೇಕರ ಮನೆಯಲ್ಲಿ ಹಾಗಾಗಿಯೇ ಲಾಫಿಂಗ್ ಬುದ್ಧನನ್ನು ಇಡಲಾಗಿದೆ. ಆದ್ರೆ ಎಲ್ಲೆಂದರಲ್ಲಿ ಲಾಫಿಂಗ್ ಬುದ್ದನನ್ನು ಇಡುವುದರಿಂದ ಧನ ವೃದ್ಧಿಯಾಗುವುದಿಲ್ಲ. ದಿಕ್ಕು ಹಾಗೂ ಸ್ಥಳ ಇದರ ಮೇಲೆ ಪರಿಣಾಮ ಬೀರುತ್ತದೆ. ಮನೆಯ ಮುಖ್ಯದ್ವಾರದ ಎದುರು ಲಾಫಿಂಗ್ ಬುದ್ದನನ್ನು ಇಡಬೇಕು. ಮನೆಯೊಳಗೆ ಪ್ರವೇಶ ಮಾಡುವ ಶಕ್ತಿಗಳಿಗೆ ಈ ಲಾಫಿಂಗ್ ಬುದ್ಧ ಶುಭ ಕೋರುತ್ತದೆ. ಹಾಗಾಗಿ ಮನೆಯ ಮುಖ್ಯದ್ವಾರದ ಬಳಿ ಇಡುವುದು ಒಳ್ಳೆಯದು. ಮನೆಯಿಂದ ಹೊರಗೆ ಹೋಗುವ ಹಾಗೂ ಒಳಗೆ ಬರುವ ವ್ಯಕ್ತಿಗಳಿಗೆ ಕಾಣುವಂತೆ ಲಾಫಿಂಗ್ ಬುದ್ಧನನ್ನು ಇಡಬೇಕು. ಎಷ್ಟೇ ದುಡಿದ್ರೂ ಕೈನಲ್ಲಿ ಹಣ ನಿಲ್ಲೋದಿಲ್ಲ, ಆರ್ಥಿಕ ಸಮಸ್ಯೆ ಎದುರಾಗ್ತಿದೆ ಎನ್ನುವವರು ಎರಡೂ ಕೈನಲ್ಲಿ ಕಮಂಡಲ ಹಿಡಿದಿರುವ ಲಾಫಿಂಗ್ ಬುದ್ಧನನ್ನು ಮನೆಯಲ್ಲಿಡಿ.
ಈ 3 ವಸ್ತುಗಳನ್ನು ಮನೆಯ ಮುಖ್ಯ ದ್ವಾರದಲ್ಲಿ ಇಡಬೇಡಿ
1. ಮುಖ್ಯವಾಗಿ ಮನೆಯ ದ್ವಾರದ ಬಳಿ ಮುಳ್ಳಿನ ಗಿಡಗಳನ್ನು ಇಡಬಾರದು. ಈ ಗಿಡಗಳಲ್ಲಿ ನಕಾರಾತ್ಮಕ ಶಕ್ತಿ ಅಡಗಿರುತ್ತದೆ. ಹಾಗಾಗಿ ಮನೆಯನ್ನು ಧನಾತ್ಮಕ ಶಕ್ತಿಗಳು ಪ್ರವೇಶ ಮಾಡುವುದಿಲ್ಲ. ದೇವಾನುದೇವತೆಗಳು ಕೂಡ ಮನೆಯೊಳಗೆ ಬರುವುದಿಲ್ಲ.
2. ಮನೆಯ ಮುಖ್ಯ ದ್ವಾರದ ಬಳಿ ಮುರಿದ ಖುರ್ಚಿಗಳನ್ನು ಇಡಬಾರದು. ಇದರ ಮೇಲೆ ಕುಳಿತವರು ಬೀಳುವ ಸಾಧ್ಯತೆ ಇರುತ್ತದೆ. ಶಾಸ್ತ್ರಗಳ ಪ್ರಕಾರ ಮುರಿದ ಖುರ್ಚಿಗಳನ್ನು ಮುಖ್ಯ ದ್ವಾರದ ಬಳಿ ಇಟ್ಟರೆ ಮನೆಯಲ್ಲಿ ಅಶಾಂತಿ ನೆಲೆಸುತ್ತದೆ.
3. ಮನೆಯಲ್ಲಿ ಹಾಳಾದ ಪೊರಕೆಯನ್ನು ಎಲ್ಲೋ ಮೂಲೆಯಲ್ಲಿ ಇಟ್ಟಿರುತ್ತಾರೆ. ಇದು ಒಳ್ಳೆಯದಲ್ಲ. ಹಾಳಾದ ಪೊರಕೆ ಮುಖ್ಯ ದ್ವಾರದ ಬಳಿಯಂತೂ ಇರಲೇಬಾರದು. ಹಾಗೆ ಮಾಡಿದರೆ ದೇವಾನುದೇವತೆಗಳು ಮನೆಯೊಳಗೆ ಪ್ರವೇಶ ಮಾಡುವುದಿಲ್ಲ……