Breaking News

ಮನೆಯಲ್ಲಿ ಸುಃಖ ಶಾಂತಿ ನೆಲಸಲು ಏನು ಮಾಡಬೇಕು..?

ಜೀವನದಲ್ಲಿ ಯಶಸ್ಸು ಸಿಗಬೇಕಾದರೆ ಯಾವ ಆಚಾರ ಪಾಲಿಸಬೇಕು....

SHARE......LIKE......COMMENT......

ಧರ್ಮ-ಜ್ಯೋತಿ:

ಆರೋಗ್ಯ ವೃದ್ಧಿ ಮಾಡುತ್ತೆ ದೀಪ:

ಏನೇ ಬಂದ್ರೂ ಅದು ದೇವರ ಅನುಗ್ರಹದಿಂದ ಎನ್ನುತ್ತಾರೆ. ದೇವರ ಮನೆಯಲ್ಲಿ ದೀಪ ಬೆಳಗ್ತಾರೆ. ಪ್ರಕಾಶಮಾನವಾಗಿರುವ ದೀಪ ಕೂಡ ದೇವರ ಸ್ವರೂಪವಾಗಿರುತ್ತದೆ. ಕೇವಲ ದೇವರ ಮನೆಯಲ್ಲಿ ದೀಪ ಬೆಳಗಿದ್ರೆ ಸಾಲದು, ದೀಪ ಬೆಳಗಲು ಕೆಲವು ನಿಯಮಗಳಿವೆ. ಅದ್ರಲ್ಲೂ ದೀಪದ ಜ್ವಾಲೆ ಯಾವ ದಿಕ್ಕಿನಲ್ಲಿದೆ ಎಂಬುದು ಮಹತ್ವ ಪಡೆಯುತ್ತದೆ. ದೀಪವನ್ನ ಸಂಜೆ ಸಮಯದಲ್ಲಿ ಮನೆಯ ಮುಂದೆ ಹಾಗೂ ದೇವರ ಕೋಣೆಯಲ್ಲಿ ಹಚ್ಚುವುದರಿಂದ ನಕಾರತ್ಮಕ ಶಕ್ತಿ ದೂರವಾಗಿ ಸಕರಾತ್ಮಕ ಶಕ್ತಿ ಹೆಚ್ಚುತ್ತದೆ ಮನೆಯ ಸಮೃದ್ಧಿ ಹಾಗೂ ಪ್ರಗತಿಗಾಗಿ ಪ್ರತಿದಿನ ಮನೆಯಲ್ಲಿ ತುಪ್ಪದ ದೀಪ ಬೆಳಗಬೇಕು. ಇದು ಮನೆಯಲ್ಲಿ ಧನಾತ್ಮಕ ಅಂಶವನ್ನು ವೃದ್ಧಿ ಮಾಡುತ್ತದೆ. ದೀಪದ ಜ್ವಾಲೆಗಳು ಪೂರ್ವದ ಕಡೆಗಿದ್ದರೆ ರೋಗಗಳು ಬರುವುದಿಲ್ಲ. ಆಯಸ್ಸು ವೃದ್ಧಿಯಾಗುತ್ತದೆ ಹಾಗೂ ದುಷ್ಟ ಶಕ್ತಿಗಳ ಪರಿಣಾಮ ಕಡಿಮೆಯಾಗುತ್ತದೆ.

ಸಂಜೆ ವೇಳೆ ಈ ಕೆಲಸವನ್ನ ಮಾಡಬೇಡಿ:

ಪ್ರತಿ ಕೆಲಸಕ್ಕೂ ಒಂದು ಸಮಯವಿದೆ. ಅದರಲ್ಲೂ ಕೆಲವೊಂದು ಕೆಲಸವನ್ನು ಯಾವುದೇ ಕಾರಣಕ್ಕೂ ಸಂಜೆ ಮಾಡಬಾರದು. ಹಾಗೆ ಮಾಡಿದ್ರೆ ಲಕ್ಷ್ಮಿ ಜೊತೆಗೆ ಎಲ್ಲ ದೇವಾನುದೇವತೆಗಳು ಮನೆ ತೊರೆದು ಹೋಗುತ್ತವೆ ಎಂದು ಶಾಸ್ತ್ರ ಹೇಳುತ್ತದೆ. ಶಾಸ್ತ್ರದ ಪ್ರಕಾರ ಯಾವ ಕೆಲಸವನ್ನು ಸಂಜೆ ಮಾಡಬಾರದು ಎಂಬುವುದನ್ನು ನೋಡುವುದಾದರೆ.

ಸಂಜೆ ತುಳಸಿ ಗಿಡಕ್ಕೆ ನೀರು ಹಾಕಬಾರದು. ಹಾಗೆ ಅದರ ಎಲೆಗಳನ್ನು ಕೀಳಬಾರದು. ಬದಲಾಗಿ ತುಳಸಿ ಗಿಡದ ಬಳಿ ದೀಪ ಬೆಳಗಬೇಕು. ಸಂಜೆ ಹೊತ್ತಲ್ಲಿ ಮನೆಯನ್ನು ಸ್ವಚ್ಛಗೊಳಿಸಬಾರದು. ಕಸಬರಿಗೆ ಉಪಯೋಗಿಸಿದರೆ, ಸಕಾರಾತ್ಮಕ ಅಂಶ ಮನೆಯಿಂದ ಹೊರಹೋಗುತ್ತದೆ. ನಕಾರಾತ್ಮಕ ಅಂಶ ಮಾತ್ರ ಉಳಿದುಬಿಡುತ್ತದೆ. ಬೇರೆಯವರನ್ನು ನಿಂದಿಸುವುದು, ಕೆಟ್ಟ ಪದ ಉಪಯೋಗಿಸಿ ಬೈಯುವುದು ಮಾಡಬಾರದು. ಅದರಲ್ಲೂ ಸಂಜೆ ಸಮಯದಲ್ಲಿ ಇದರಿಂದ ದೂರ ಇರುವುದು ಒಳ್ಳೆಯದು. ಓದಲು ಬೆಳಗಿನ ಸಮಯ ಬಹಳ ಉಪಯುಕ್ತ. ಹಾಗೆ ಸಂಜೆ ಸಮಯದಲ್ಲಿ ಅಧ್ಯಯನ ಮಾಡಬಾರದು ಎನ್ನುತ್ತದೆ ಶಾಸ್ತ್ರ.

ಜೀವನದಲ್ಲಿ ಯಶಸ್ಸು ಸಿಗಬೇಕಾದ್ರೆ ಈ ಕೆಲಸ ಮಾಡಿ:

ಖುಷಿ ಹಾಗೂ ಸಮೃದ್ಧಿಗಾಗಿ ಕೆಲವರು ಸಾಕಷ್ಟು ಪರಿಶ್ರಮ ಪಡ್ತಾರೆ. ಎಷ್ಟೇ ಕೆಲಸ ಮಾಡಿದ್ರೂ ಪ್ರತಿಫಲ ಸಿಗೋದಿಲ್ಲ. ನಮ್ಮ ಹಿಂದಿರುವ ಕೆಲವು ದುಷ್ಟ ಶಕ್ತಿಗಳು ನಮ್ಮ ಯಶಸ್ಸಿಗೆ ಅಡ್ಡಿಯುಂಟು ಮಾಡುತ್ತಿರುತ್ತವೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕೆಂದಾದಲ್ಲಿ ಕೆಲಸದ ಜೊತೆಗೆ ಕೆಲವೊಂದು ಪದ್ಧತಿಗಳನ್ನು ರೂಢಿಸಿಕೊಳ್ಳಬೇಕು. ವಾಸ್ತುದೋಷ ನಿವಾರಣೆಗೆ ಸಹಾಯವಾಗುವ ಕೆಲಸಗಳನ್ನು ಮಾಡುತ್ತ ಬಂದ್ರೆ ಯಶಸ್ಸು ನಮ್ಮನ್ನರಸಿ ಬರುತ್ತದೆ.

ಪ್ರತಿದಿನ ಆಹಾರ ತಯಾರಿಸುವಾಗ ಮೊದಲ ರೊಟ್ಟಿಯನ್ನು ಆಕಳಿಗೆ ತೆಗೆದಿಡಿ. ಹೀಗೆ ಮಾಡುವುದರಿಂದ ಸಂಸಾರಿಕ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಹಣ ಸಂಬಂಧಿ ಸಮಸ್ಯೆ ಕಾಡುವುದಿಲ್ಲ.

ದೇವರಿಗೆ ಹಾಕಿದ ಹೂಗಳು ತುಂಬಾ ಸಮಯ ಅಲ್ಲಿರುವುದು ಒಳಿತಲ್ಲ. ಇದರಿಂದ ನಕಾರಾತ್ಮಕ ಶಕ್ತಿ ಪ್ರವೇಶ ಮಾಡುತ್ತದೆ. ಹಾಗಾಗಿ ಬೆಳಿಗ್ಗೆ ದೇವರಿಗೆ ಹಾಕಿದ ಹೂವನ್ನು ರಾತ್ರಿ ತೆಗೆಯಿರಿ.

ಮನೆಯಲ್ಲಿ ಸುಃಖ ಶಾಂತಿ ನೆಲಸಲು ಏನು ಮಾಡಬೇಕು:

ಸ್ವಂತ ಮನೆ ಹೊಂದುವುದು ಪ್ರತಿಯೊಬ್ಬರ ಕನಸು. ಸುಖ, ದುಃಖ, ಕಷ್ಟದ ನಡುವೆ ತಲೆ ಎತ್ತಿದ ಸ್ವಂತ ಮನೆ ಎಂದ್ರೆ ಎಲ್ಲರಿಗೂ ಇಷ್ಟ. ಮನೆಯಲ್ಲಿ ಯಾವುದೇ ತೊಂದರೆ ಬರದಿರಲಿ ಎಂದು ಎಲ್ಲರೂ ಬಯಸ್ತಾರೆ. ಆದ್ರೆ ಕೆಲವೊಮ್ಮೆ ದುಷ್ಟ ಶಕ್ತಿಗಳು ಮನೆಯೊಳಗೆ ಪ್ರವೇಶ ಮಾಡಿರುತ್ತವೆ. ಇದರಿಂದಾಗಿ ಮನೆಯವರು ಜಗಳ, ಆರೋಗ್ಯ ಸಮಸ್ಯೆ, ಹಣಕಾಸಿನ ತೊಂದರೆ ಹೀಗೆ ಒಂದಲ್ಲ ಒಂದು ಸಮಸ್ಯೆ ಎದುರಿಸಬೇಕಾಗುತ್ತದೆ. ಅನೇಕ ಪ್ರಯತ್ನ ಮಾಡಿದ್ರೂ ಮನೆ ಪರಿಸ್ಥಿತಿ ಬದಲಾಗದಾಗ ವಾಸ್ತುವಿನ ಮೊರೆ ಹೋಗುವುದು ಒಳಿತು. ಮನೆ ಬದಲಿಸುವಾಗ ಅಥವಾ ಕಟ್ಟುವಾಗ ವಾಸ್ತುವಿನ ಕೆಲ ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಮನೆಯ ಮುಖ್ಯ ಬಾಗಿಲುಗಳು ಒಂದೇ ದಿಕ್ಕಿನಲ್ಲಿರಲಿ. ಮನೆಯ ಮುಂದೆ ಅಥವಾ ಹಿಂದೆ ತುಳಸಿ ಸಸಿಯೊಂದಿರಲಿ. ಮನೆಯ ಮುಂದೆ ಅಥವಾ ಪಕ್ಕದಲ್ಲಿ ಮೂರು ರಸ್ತೆಗಳು ಕೂಡಿರದಂತೆ ನೋಡಿಕೊಳ್ಳಿ.

ಮನೆಯ ಒಳಗೆ ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆ ಇರಬೇಕು. ಈಶಾನ್ಯದಲ್ಲಿ ದೇವರ ಮನೆ, ನೈರುತ್ಯದಲ್ಲಿ ಶೌಚಾಲಯ, ದಕ್ಷಿಣದಲ್ಲಿ ಇತರ ಸಾಮಾನುಗಳನ್ನು ಇಡುವ ಕೋಣೆ ಇರಲಿ……