ಬೆಂಗಳೂರು:
ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾಗೆ ಕೊರೋನಾ ಪಾಸಿಟಿವ್ ಬಂದ ಹಿನ್ನಲೆ , ಜಮೀರ್ ಅಹ್ಮದ್ ಖಾನ್ ಕೊರೋನಾ ಟೆಸ್ಟ್ಗೆ ಒಳಗಾಗಿದ್ದರು. ಕಾರ್ಪೊರೇಟರ್ ಇಮ್ರಾನ್ ಪಾಷಾಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಜಮೀರ್ಗೆ ಟೆಸ್ಟ್ ಮಾಡಿಸಲಾಗಿತ್ತು. ಇಮ್ರಾನ್ ಪಾಷಾ ಜತೆ ಕ್ಷೇತ್ರದಲ್ಲಿ ಜಮೀರ್ ಅಹ್ಮದ್ ಖಾನ್ ಸುತ್ತಾಡಿದ್ದರು. ಗಂಟಲು ದ್ರವ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ. ಈ ಹಿಂದೆಯೂ ಜಮೀರ್ ಅಹ್ಮದ್ ಖಾನ್ಗೆ ಕೊರೋನಾ ಟೆಸ್ಟ್ ನಡೆದಿತ್ತು. ಆಗಲೂ ವರದಿ ನೆಗೆಟಿವ್ ಬಂದಿತ್ತು……