Breaking News

ಬಾಯಿ ರುಚಿ ತಣಿಸೋ ಐಸ್ ಕ್ರೀಂ ಜೀವ ತೆಗೆಯುತ್ತದೆ..!

ಐಸ್ ಕ್ರೀಂ ಚಪ್ಪರಿಸಿ ತಿನ್ನುವ ಮುನ್ನ ಎಚ್ಚರ....

SHARE......LIKE......COMMENT......
ಬೆಂಗಳೂರು: 

ಸಿಲಿಕಾನ್ ಸಿಟಿಯಲ್ಲಿ ಐಸ್ ಕ್ರೀಂಪಾರ್ಲರಿಗೆ ಹೋಗಿ ತಿನ್ನುವ ಟ್ರೆಂಡ್ ನಷ್ಟೇ ಜೋರಾಗಿ ಗಾಡಿಯಲ್ಲಿ ಬರುವ ಐಸ್ ಕ್ರೀಂ ತಿನ್ನುವ ಟ್ರೆಂಡ್ ಸಹ ಪ್ರಾರಂಭವಾಗಿದೆ. ಆದರೆ ಇದು ಅಪಾಯಕಾರಿ. ಶಾಲಾ ಕಾಲೇಜು, ಪಾರ್ಕ್, ಶಾಪಿಂಗ್ ಮಾಲ್ ಹಾಗೂ ಸೆಂಟರ್ ಗಳ ಮುಂದೆ ಹೀಗೆ ಎಲ್ಲ ಕಡೆ ಐಸ್ ಕ್ರೀಂ ಗಾಡಿಯವರು ಕಾಣಸಿಗುತ್ತಾರೆ. ಕಂಡ ತಕ್ಷಣ ವಿವಿಧ ಬಗೆಯ ಐಸ್ ಕ್ರೀಂಗಳನ್ನು ತಿನ್ನಲು ಬಯಸುತ್ತೇವೆ. ಆದರೆ ಟೇಸ್ಟಿ ಎಂದು ತಿನ್ನುವ ಐಸ್ ಕ್ರೀಂ ಗಾಡಿಗಳತ್ತ ಅಥವಾ ಗಾಡಿಗಳಲ್ಲಿನ ಕ್ರೀಂ, ಅದಕ್ಕೆ ಬಳಸುವ ನೀರು, ಪಾಚಿ ಕಟ್ಟಿರುವ ಬಾಕ್ಸ್ ನೋಡಿದರೆ ಖಂಡಿತಾ ಐಸ್ ಕ್ರೀಂ ತಿನ್ನುವ ಗೋಜಿಗೆ ಹೋಗಲ್ಲ. ಐಸ್ ಕ್ರೀಂ ನೋಡಿದರೇನೆ ವಾಕರಿಕೆ ಬರುವಂತೆ ಅನ್ನಿಸುತ್ತದೆ. ಈ ಐಸ್ ಕ್ರೀಂಗೆ ಬಳಸುವ ನೀರಿನಿಂದಲೇ ನಿಮಗೆ ರೋಗ ಬರುತ್ತದೆ.

ಐಸ್ ಕ್ರೀಂನ್ನು ಕೋನ್‍ಗೆ ಹಾಕುವ ಚಮಚದೊಳಗೆ ಕೂಡ ಗಲೀಜು ತುಂಬಿರುತ್ತದೆ.ಬೆಂಗಳೂರಿನ ಎಂಜಿ ರಸ್ತೆ, ಜಯನಗರದ ಸೇರಿದಂತೆ ವಿವಿಧ ಪ್ರತಿಷ್ಠಿತ ಪ್ರದೇಶಗಳಲ್ಲಿ ಈ ದೃಶ್ಯಗಳು ಕಂಡುಬಂದಿವೆ. ಇಂತಹ ಏರಿಯಾದಲ್ಲೇ ಈ ರೀತಿಯಾದರೆ ಇನ್ನು ಗಲ್ಲಿಗಳಲ್ಲಿ ಇನ್ಯಾವ ರೀತಿಯ ಐಸ್ ಕ್ರೀಂ ಸಿಗುತ್ತವೆ ಎಂಬುದನ್ನು ನೀವೇ ಊಹಿಸಿಕೊಳ್ಳಿ. ಈ ಐಸ್ ಕ್ರೀಂ ತಿಂದರೆ ನಿಮ್ಮ ಹೊಟ್ಟೆ ಕೆಡುವುದು, ಆರೋಗ್ಯ ಹದಗೆಡುವುದು ಮಾತ್ರವಲ್ಲ, ಕ್ರೀಂಗಳಿಗೆ ಕಲರ್ ಬರಲು ವಿವಿಧ ರೀತಿಯ ಕೆಮಿಕಲ್ ಸುರಿಯುತ್ತಾರೆ . ಹೀಗಾಗಿ ನೀವು ಇಷ್ಟಪಟ್ಟು ತಿನ್ನುವ ಐಸ್ ಕ್ರೀಂ ನಿಮ್ಮ ಆರೋಗ್ಯ ಕೆಡಿಸಬಹುದು. ಕಂಡ ಕಂಡಲ್ಲಿ ಐಸ್ ಕ್ರೀಂ ತಿನ್ನುವ ಮುನ್ನ ಎಚ್ಚರ ವಹಿಸಿ. ಇಲ್ಲದಿದ್ದಲ್ಲಿ ನಿಮ್ಮ ಆರೋಗ್ಯ ಹದಗೆಡುವುದು ಪಕ್ಕಾ……