Breaking News

ಯಲ್ಲಾಪುರದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ..!

44 ವರ್ಷಗಳ ನಂತರ ಮಹತ್ವಪೂರ್ಣ ನಿರ್ಣಯ....

SHARE......LIKE......COMMENT......

ಕುಮಟಾ:

ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಲ್ಲಾಪುರದಲ್ಲಿ ನಡೆಸಲು ಜಿಲ್ಲಾ ಕಾರ್ಯಕಾರಿ ಸಮಿತಿ ತೀರ್ವನಿಸಿದೆ. ಈ ಮೂಲಕ 44 ವರ್ಷಗಳ ನಂತರ ಯಲ್ಲಾಪುರದಲ್ಲಿ ಜಿಲ್ಲಾ ಸಮ್ಮೇಳನ ನಡೆಯಲಿದೆ.

ಇಲ್ಲಿನ ಜಿಲ್ಲಾ ಕಸಾಪ ಕಾರ್ಯಾಲಯದ ಸಭಾಭವನದಲ್ಲಿ ಜಿಲ್ಲಾಧ್ಯಕ್ಷ ಅರವಿಂದ ರ್ಕಕೋಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ಮಹತ್ವಪೂರ್ಣ ನಿರ್ಣಯ ಕೈಗೊಳ್ಳಲಾಯಿತು. ಸದ್ಯದಲ್ಲಿಯೇ ಯಲ್ಲಾಪುರದಲ್ಲಿ ಸಭೆ ಕರೆದು ಸಮ್ಮೇಳನದ ಸ್ವಾಗತ ಸಮಿತಿ ರಚಿಸುವ ಕುರಿತು ರ್ಚಚಿಸಲಾಯಿತು.

ಜಿಲ್ಲಾ ಸಮ್ಮೇಳನವನ್ನು ಕುಮಟಾದಲ್ಲಿ ನಡೆಸಲು ಅವಕಾಶ ನೀಡಬೇಕೆಂದು ಕುಮಟಾ ತಾಲೂಕು ಕಸಾಪ ಅಧ್ಯಕ್ಷ ಡಾ. ಶ್ರೀಧರ ಉಪ್ಪಿನಗಣಪತಿ ಅವರು ಒತ್ತಾಯಿಸಿದರು. ಆದರೆ ಯಲ್ಲಾಪುರ ತಾಲೂಕು ಕಸಾಪ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಅವರು ಮಾತನಾಡಿ, ನಮ್ಮ ತಾಲೂಕಿಗೆ 44 ವರ್ಷಗಳಿಂದ ಜಿಲ್ಲಾ ಸಮ್ಮೇಳನ ನಡೆಸಲು ಅವಕಾಶ ಸಿಗಲಿಲ್ಲ. ಹಿಂದಿನ ಅವಧಿಯಲ್ಲೂ ಸಮ್ಮೇಳನ ನಡೆಸಲು ಅವಕಾಶ ನೀಡುವಂತೆ ಕೋರಿದ್ದೆ. ಹಾಗಾಗಿ ಪ್ರಸ್ತುತ ಸಮ್ಮೇಳನವನ್ನು ಯಲ್ಲಾಪುರದಲ್ಲಿ ನಡೆಸಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರಲ್ಲದೆ ಜಿಲ್ಲಾಧ್ಯಕ್ಷರಿಗೆ ಲಿಖಿತ ಮನವಿ ಸಲ್ಲಿಸಿದರು. ನಂತರ ಕಾರ್ಯ ಕಾರಣಿ ಸಮಿತಿಯ ಸದಸ್ಯರೆಲ್ಲ ರ್ಚಚಿಸಿ, ಈ ನಿರ್ಣಯ ಕೈಗೊಂಡರು.

ಕಳೆದ ವರ್ಷ ಹಳಿಯಾಳದ ತೇರಗಾಂವ್​ನಲ್ಲಿ ನಡೆದ 20ನೇ ಜಿಲ್ಲಾ ಸಮ್ಮೇಳನದ ಜಮಾ ಖರ್ಚು ಕುರಿತಂತೆ ಪರಿಶೀಲಿಸಿದಾಗ, ಸುಮಾರು 3 ಲಕ್ಷ ರೂ. ಕೊರತೆಯಾಗಿರುವುದನ್ನು ಜಿಲ್ಲಾಧ್ಯಕ್ಷರ ಗಮನಕ್ಕೆ ತರಲಾಯಿತು. ಸಮ್ಮೇಳನಕ್ಕೆ ದಾಂಡೇಲಿಯ ಕಾಗದ ಕಾರ್ಖಾನೆ, ಕೈಗಾ ಮತ್ತು ಕದ್ರಾ ವಿದ್ಯುಸ್ಥಾವರ ಮತ್ತಿತರ ನಿರೀಕ್ಷಿತ ಮೂಲಗಳಿಂದ ದೇಣಿಗೆ ಬಾರದ ಕಾರಣ ಈ ಕೊರತೆ ಉಂಟಾಗಿದೆ. ಭರವಸೆ ನೀಡಿದ ದಾನಿಗಳನ್ನು ಮತ್ತೊಮ್ಮೆ ಸಂರ್ಪಕಿಸಿ, ಕೊರತೆಯ ಬಜೆಟ್ ಅನ್ನು ಸರಿಪಡಿಸಿಕೊಳ್ಳಲು ನಿರ್ಣಯಿಸಲಾಯಿತು.

ನ.4 ಮತ್ತು 11 ರಂದು ನಡೆಯಲಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಮಾರಂಭ ಮತ್ತು ಸಾಹಿತ್ಯ ಸಾರಥ್ಯ ಪ್ರಶಸ್ತಿ ಪ್ರದಾನ ಸಮಾರಂಭ ಪರಿಣಾಮಕಾರಿಯಾಗಿ ನಡೆಸಬೇಕು. ಅಲ್ಲದೆ, ಕಾರವಾರದಲ್ಲಿ ಕನಕ ಅಧ್ಯಯನ ಪೀಠದ ಸಹಯೋಗದಲ್ಲಿ ಜಿಲ್ಲಾ ಕಸಾಪ ಕಾಲೇಜ್ ವಿದ್ಯಾರ್ಥಿಗಳಿಗೆ ಕನಕದಾಸರ ಸಾಹಿತ್ಯ ಕುರಿತಂತೆ ಶಿಬಿರ ನಡೆಸಲು ತೀರ್ವನಿಸಲಾಯಿತು.

ಡಿ.1 ಮತ್ತು 2 ರಂದು ಸಿದ್ದಾಪುರದಲ್ಲಿ ಹಿರಿಯ ಮಿಮರ್ಶಕ ಟಿ.ಪಿ.ಅಶೋಕ ಅವರ ಮಾರ್ಗದರ್ಶನದಲ್ಲಿ ನಡೆಯಲಿರುವ ಕಥಾ ಕಮ್ಮಟಕ್ಕೆ ಜಿಲ್ಲೆಯ ಎಲ್ಲ ಭಾಗದ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ ಕೊಡುವ ಉದ್ದೇಶದಿಂದ ಪ್ರತಿ ತಾಲೂಕಿನಿಂದ 2 ಆಸಕ್ತ ಉದಯೋನ್ಮುಖ ಕಥೆಗಾರರನ್ನು ಆಯ್ಕೆ ಮಾಡಿ ಕಮ್ಮಟಕ್ಕೆ ಕಳುಹಿಸಲು ಎಲ್ಲ ತಾಲೂಕು ಅಧ್ಯಕ್ಷರಿಗೆ ಸೂಚಿಸಲಾಯಿತು……