Breaking News

ನೈಋತ್ಯ ಮೂಲೆಯಿಂದ ಮನೆಗೆ ಕೌಟುಂಬಿಕ ಸೌಖ್ಯ..!

SHARE......LIKE......COMMENT......

ವಾಸ್ತು ಟಿಪ್ಸ್:

ನೈಋತ್ಯ ಮೂಲೆಯ ಸಮತೋಲನ ಸಿದ್ಧಿಯಿಂದ ಕುಟುಂಬದಲ್ಲಿ, ಜೀವನದಲ್ಲಿ ಉತ್ತಮವಾದ ನೆಮ್ಮದಿ ಪರಸ್ಪರ ತಿಳುವಳಿಕೆ ಸಂತೋಷಗಳನ್ನು ಸಂಪಾದಿಸಿಕೊಳ್ಳ ಬಹುದು. ದೇಹಾರೋಗ್ಯದ ವಿಚಾರದಲ್ಲಿ ಲವಲವಿಕೆ ಉತ್ಸಾಹ ಪರಿಪಕ್ವ ಸಕಾರಾತ್ಮಕ ಸ್ಪಂದನಗಳು ಸಾಧ್ಯ.  ಹೀಗಾಗಿ ನೈರುತ್ಯ ದಿಕ್ಕಿನ ಪರಿಣಾಮಗಳು ವಾಸ್ತು ಶಾಸ್ತ್ರದಲ್ಲಿ ಅತಿ ಮುಖ್ಯವಾದ ಘಟಕಗಳಾಗಿ ವಿಂಗಡಿಸಲ್ಪಟ್ಟಿವೆ.

*ಸಾಲದ ತೊಂದರೆಗಳೀಂದ ತಪ್ಪಿಸಿಕೊಳ್ಳಲು ಕೂಡಾ ಇದು ಸಂಪನ್ನತೆಯನ್ನು ನಿರ್ಮಿಸಬಹುದಾದ ಅಂಶವಾಗಿದೆ.
ಮನೆಯ ನೈಋತ್ಯ ಮೂಲೆಯು ಇತರ ಯಾವುದೇ ಭಾಗಗಳಿಗಿಂತ ಹೆಚ್ಚು ಎತ್ತರದಲ್ಲಿ ಇರುವುದು ಸೂಕ್ತ.

*ಮನೆಯ ಸುತ್ತಲೂ ಕಟ್ಟುವ ಗಡಿ ಗೋಡೆಯ ವಿಚಾರದಲ್ಲೂ ನೈಋತ್ಯ ಭಾಗದ ಗಡಿಗೋಡೆ ಇತರ ದಿಕ್ಕಿಗಿಂತಲೂ ತುಸು ಹೆಚ್ಚೇ ಎತ್ತರವನ್ನು ಕಾಯ್ದುಕೊಳ್ಳುವುದು ಸೂಕ್ತ. ವಿಷಮತೆಗಳನ್ನು ತಂದೊಡ್ಡುವ ಸ್ಪಂದನಗಳನ್ನು ತಡೆದು ಒಳ್ಳೆಯ ಪರಿಣಾಮಗಳನ್ನು ನಿರೀಕ್ಷಿಸಬಹುದು.  ಇದರಿಂದ ಮನೆಯ ಜನರಿಗೆ ಒಳ್ಳೆಯ ಭವಿಷ್ಯಕ್ಕೆ ಇದು ಸಕಾರಾತ್ಮಕವಾಗಿ ಇರುತ್ತದೆ.

*ಕಬ್ಬಿಣದ ಪೆಟ್ಟಿಗೆಯ ಕುರಿತಂತೆ ಎಚ್ಚರ ಬೇಕೇ ಬೇಕು. ಉತ್ತರ ಅಥವಾ ಪೂರ್ವ ದಿಕ್ಕುಗಳಿಗೆ ಮುಖ ಮಾಡುವಂತೆ ಈ  ಪೆಟ್ಟಿಗೆಗಳನ್ನು ಕೂಡಿಸಬೇಕು. ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳನ್ನು ಒಳಗೊಳ್ಳುವ ಮೂಲೆ ಭಾಗವೇ ನೈಋತ್ಯ    ದಿಕ್ಕಾಗಿದೆ. ಅಷ್ಟ ದಿಕ್ಕ ಪಾಲಕರಲ್ಲಿ ಒಬ್ಬರಾದ ನಿಋತನ ಆಳ್ವಿಕೆಗೊಳಪಟ್ಟ ದಿಕ್ಕು ಇದು.

*ಜೀವ ತತ್ವಕ್ಕೆ ಬೇಕಾದ ನೀರಿನ ವಿಚಾರವನ್ನು ನಿಯಂತ್ರಿಸುವ ಮೂಲೆ ಇದು. ಮನೆಯ ಕುರಿತಾದ ಮಹಡಿಯ ಮೆಟ್ಟಿಲುಗಳನ್ನು ಕೂಡಾ ನೈಋತ್ಯಕ್ಕೆ ಸಮಾವೇಶಗೊಳಿಸುವಂತೆ ರಚನೆ ಇರಬೇಕು. ಈ ರೀತಿಯ ಮಹಡಿ ಮೆಟ್ಟಿಲುಗಳು ಯಶಸ್ಸನ್ನು ಸಂಪಾದಿಸುವ ಎತ್ತರಕ್ಕೆ ತನ್ನ ಸ್ಪಂದನವನ್ನು ಕ್ರೋಢೀಕರಿಸಿಕೊಳ್ಳುತ್ತದೆ. ಅನುಮಾನವಿಲ್ಲ. ಮನೆಗೆ ಬೇಕಾದ ನೀರನ್ನು ಹಿಡಿದಿಡುವ ತೊಟ್ಟಿ ಅಥವಾ ವಾಟರ್‌ ಟ್ಯಾಂಕ್‌ ನೈಋತ್ಯ ಮೂಲೆಯಲ್ಲಿ ಕೂಡಿಸುವುದು ಒಳ್ಳೆಯದು.

*ನೀರಿನ ಸಂಬಂಧವಾದ ಸಲಿಲತೆ ಒದಗದೆ ಇರುವ ನೀರಿನ ಕುರಿತಾದ ಒರತೆಗೆ ಇದು ಶುಭದಾಯಕ. ಒಂದೊಮ್ಮೆ ನಿರ್ವಾಹವಿಲ್ಲದೆ ಅನಿವಾರ್ಯವಾಗಿ ಅಗ್ನಿಮೂಲೆಯಲ್ಲಿ ಅಥವಾ ವಾಯುವ್ಯದಲ್ಲಿ ನೀರಿನ ತೊಟ್ಟಿ ಇಡುವ ಅನಿವಾರ್ಯತೆ ಒದಗಿದಲ್ಲಿ, ಅಂತ ನೀರಿನ ತೊಟ್ಟಿಗಿಂತಲೂ ಎತ್ತರ ಹೊಂದುವ ಹಾಗೆ ನೈಋತ್ಯ ಮೂಲೆಯಲ್ಲಿ ಗೋಡೆಯ ಎತ್ತರ ಕಾಯ್ದುಕೊಳ್ಳಬೇಕು. ಜೊತೆಗೆ ನೈಋತ್ಯ ಮೂಲೆಯ ನೇರವಾದ ಕೋನವನ್ನು ಹೊದಿರಬೇಕೇ ವಿನಾ ಅಂಕುಡೊಂಕಾಗಿ ಇರಕೂಡದು. ಹೀಗೇನಾದರೂ ಆದರೆ ಮುಖ್ಯವಾಗಿ ರಕ್ತ ಪರಿಚಲನೆಗೆ ಸಂಬಂಧಿಸಿ ಏರುಪೇರುಗಳು ಮನೆಯ ಜನರಲ್ಲಿ ಉಂಟಾಗಬಹುದು. ಅಂತರ್ಗತ ಭೂಜಲ ಮನೆಯ ಪರಿಧಿಯಲ್ಲಿ ಒಣಗಿ ಬಿಡಬಹುದು.

*ಈ ದಿಕ್ಕಿನಲ್ಲಿ ಬಾವಿಗಳು ಇರಬಾರದು. ನೀರಿನ ಕೊಳಾಯಿಯನ್ನು ಕೂಡಾ ಕೂಡಿಸಬಾರದು. ಇದರಿಂದ ವಿಧವಿಧವಾದ ಹಾನಿಗೆ ಎಡೆ ಮಾಡಿಕೊಡುವುದನ್ನು ಮನೆಯ ಜನವೇ ನಿನಿರ್ಮಿಸಿದಂತಾಗುತ್ತದೆ. ವಿಶೇಷವಾಗಿ ಮಕ್ಕಳು ಮತ್ತು ಸ್ತ್ರೀಯರಿಗೆ ತೊಂದರೆ ಎದುರಾಗುವ ವಿಚಾರ ತಲೆದೋರುತ್ತದೆ. ನಿರಂತರವಾದ ರೋಗ ರುಜಿನಗಳಿಗೆ ವ್ಯಾಧಿಗಳಿಗೆ ಅವಕಾಶವಾಗಿ ಆಯಸ್ಸಿನ ಮೇಲೂ ಪರಿಣಾಮ ಬೀರುತ್ತದೆ. ಈ ಮೂಲೆಯಲ್ಲಿ ಚರಂಡಿಗಳು ಹಾಳು ಗುಂಡಿಗಳು ಸರ್ವಥಾ ಇರಕೂಡದು. ದಕ್ಷಿಣ ಮತ್ತು ಪಡುವಣ ದಿಕ್ಕುಗಳಲ್ಲಿ ಕೂಡಾ ಈ ಕ್ರಮವನ್ನು ಅನುಸರಿಸಬೇಕು…..

*ಒಟ್ಟಿನಲ್ಲಿ ನೈಋತ್ಯ ಮೂಲೆಯ ಸಮತೋಲನ ಸಿದ್ದಿಯಿಂದ ಕುಟುಂಬ ಜೀವನದಲ್ಲಿ ಉತ್ತಮವಾದ ನೆಮ್ಮದಿ ಪರಸ್ಪರ ತಿಳುವಳಿಕೆ ಸಂತೋಷಗಳನ್ನು ಸಂಪಾದಿಸಿಕೊಳ್ಳಬಹುದು. ದೇಹಾರೋಗ್ಯದ ವಿಚಾರದಲ್ಲಿ ಲವಲವಿಕೆ ಉತ್ಸಾಹ ಪರಿಪಕ್ವ ಸಕಾರಾತ್ಮಕ ಸ್ಪಂದನಗಳು ಸಾಧ್ಯ.  ಹೀಗಾಗಿ ನೈರುತ್ಯ ದಿಕ್ಕಿನ ಪರಿಣಾಮಗಳು ವಾಸ್ತು ಶಾಸ್ತ್ರದಲ್ಲಿ ಅತಿ ಮುಖ್ಯವಾದ ಘಟಕಗಳಾಗಿ ವಿಂಗಡಿಸಲ್ಪಟ್ಟಿವೆ. ಸಾಲದ ತೊಂದರೆಗಳೀಂದ ತಪ್ಪಿಸಿಕೊಳ್ಳಲು ಕೂಡಾ ಇದು ಸಂಪನ್ನತೆಯನ್ನು ನಿರ್ಮಿಸಬಹುದಾದ ಅಂಶವಾಗಿದೆ. ವಿಶೇಷವಾಗಿ ಸ್ತ್ರೀಯರ ಪಾಳಿನ ನೆಮ್ಮದಿಗೆ, ವಿಶೇಷ ಗಟ್ಟಿತನ ದೊರಕುತ್ತದೆ. ಇದರಿಂದಾಗಿಯೇ ಗಂಡಸರ ಪಾಲಿನ ನೆಮ್ಮದಿ, ಮಾನಸಿಕ ಶಾಂತಿ, ಅಂತರ್ಗತ ಉತ್ಸಾಹಗಳಿಗೆ ದಾರಿ ಸಿಗುತ್ತದೆ……