ಬೆಂಗಳೂರು:
ಇಡೀ ರಾಜ್ಯದಲ್ಲೇ ಬೆಂಗಳೂರು ಕೊರೋನಾ ಹಾಟ್ಸ್ಪಾಟ್ ಆಗಿ ಬದಲಾಗುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ರೋಗಿಗಳಿಗೆ ಕೊರೋನಾ ಆಸ್ಪತ್ರೆಗಳಲ್ಲಿ ಬೆಡ್ಗಳು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಕೆಲವರು ಜೀವವನ್ನೇ ಕಳೆದುಕೊಂಡ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಬೆಂಗಳೂರಿನ 73 ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾಗೆ ಚಿಕಿತ್ಸೆ ನೀಡುವಂತೆ ಆದೇಶ ನೀಡಿದೆ.
ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನಗರದ 73 ಆಸ್ಪತ್ರೆಗಳಲ್ಲಿ ಶೇ. 50ರಷ್ಟು ಹಾಸಿಗೆಗಳನ್ನು ಕೊರೋನಾ ರೋಗಿಗಳಿಗೆ ಕಾಯ್ದಿರಿಸಲು ಆದೇಶ ನೀಡಿದೆ. ಕೊರೋನಾ ಭೀತಿಯಿಂದ ಕೊರೋನಾ ಲಕ್ಷಣಗಳಿರುವ ರೋಗಿಗಳಿಗೆ ಹಲವು ಖಾಸಗಿ ಆಸ್ಪತ್ರೆಗಳು ನಿರಾಕರಿಸುತ್ತಿದ್ದವು. ಆದರೆ, ಇನ್ನುಮುಂದೆ ಆ ರೀತಿ ಮಾಡುವಂತಿಲ್ಲ. ಬೆಂಗಳೂರಿನ ಪ್ರಮಖ ಆಸ್ಪತ್ರೆಗಳೂ ಸೇರಿದಂತೆ ಒಟ್ಟು 73 ಆಸ್ಪತ್ರೆಗಳಲ್ಲಿ ಕೊರೋನಾಗೆ ಚಿಕಿತ್ಸೆ ಸಿಗಲಿದೆ.
ಬೆಂಗಳೂರಿನ ವೈದೇಹಿ, ಎಂಎಸ್ ರಾಮಯ್ಯ, ಬಿಜಿಎಸ್, ಅಪೊಲೊ, ಭಗವಾನ್ ಮಹಾವೀರ್ ಜೈನ್, ಕೊಲಂಬಿಯಾ ಏಷ್ಯಾ, ಕಿಮ್ಸ್, ಮಲ್ಲಿಗೆ ಆಸ್ಪತ್ರೆ, ಮಣಿಪಾಲ್, ಪೀಪಲ್ ಟ್ರೀ, ಸೇಂಟ್ ಜಾನ್ಸ್, ಸ್ಪರ್ಶ್, ವಾಸವಿ ಮುಂತಾದ 73 ಖಾಸಗಿ ಆಸ್ಪತ್ರೆಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ……