Breaking News

ಕಬ್ಜ 2ನೇ ದಿನಕ್ಕೆ 100 ಕೋಟಿ ಕಲೆಕ್ಷನ್ ..!

ವಿಶ್ವದಾದ್ಯಂತ ಕನ್ನಡದ ಕೀರ್ತಿ ಪತಾಕೆ ಹಾರಿಸಿದ "ಕಬ್ಜ".

SHARE......LIKE......COMMENT......

ಸಿನಿಮಾ

ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಸಿನಿಮಾ ” ಕಬ್ಜ ” ಮಾರ್ಚ್ 17 ರಂದು ಬಿಡುಗಡೆಯಾಗಿ, ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬರೋಬ್ಬರಿ ಎರಡನೇ ದಿನದ ಕಲೆಕ್ಷನ್ 100 ಕೋಟಿ ದಾಟಿದೆ
ಕೆ.ಜಿ.ಎಫ್”, ” ಕಾಂತಾರ ” ಸಿನಿಮಾಗಳ ನಂತರ ದೇಶದಾದ್ಯಂತ “ಕಬ್ಜ” ಕನ್ನಡದ ಕೀರ್ತಿ ಪತಾಕೆಯನ್ನು ಮತ್ತೊಮ್ಮೆ ಹಾರಿಸಿದೆ.ಬಿಡುಗಡೆಯಾದ ಮೊದಲ ದಿನ ಭಾರತಾದ್ಯಂತ 26 ಕೋಟಿಗೂ ಹೆಚ್ಚು ‘ಬಾಕ್ಸ್ ಆಫೀಸ್” ಕಲೆಕ್ಷನ್ ಆಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಮೂಲಗಳ ಪ್ರಕಾರ ಈ ವಾರದ ಅಂತ್ಯದೊಳಗೆ 500 ಕೋಟಿಗೂ ಅಧಿಕ ಕಲೆಕ್ಷನ್ ಆಗಬಹುದೆಂಬ ಮಾತು ಕೇಳಿ ಬರುತ್ತಿದೆ. ಭಾರತದಾಚೆಗೂ “ಕಬ್ಜ” ಸಿನಿಮಾ ಬಿಡುಗಡೆಯಾಗಿದ್ದು, ಅಲ್ಲೂ ಕೂಡ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.‌ ಆರ್ ಚಂದ್ರು ನಿರ್ದೇಶಿಸಿರುವ ಈ ಚಿತ್ರದ ನಾಯಕರಾಗಿ ರಿಯಲ್ ಸ್ಟಾರ್ ಉಪೇಂದ್ರ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಹಾಗೂ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯಿಸಿದ್ದಾರೆ.