Breaking News

ದೋಹ ಕತಾರ್ ಸಿನಿರಸಿಕರನ್ನ ಕಬ್ಜ ಮಾಡಿದ ಉಪ್ಪಿ…!

11ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ...

SHARE......LIKE......COMMENT......

ಸಿನಿಮಾ:
ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಶಿವರಾಜ್ ಕುಮಾರ್ ನಟಿಸಿರುವ, ಆರ್ ಚಂದ್ರು ನಿರ್ದೇಶನದ ಕಬ್ಜ ಚಿತ್ರವು ದೋಹ ಕತಾರ್ ನಲ್ಲಿ ಕರ್ನಾಟಕ ಸಂಘ ಕತಾರ್ ಹಾಗೂ ಕೋರ್ಸಿಸ್ ಕನ್ನಡ ಮೂವೀಸ್ ಸಂಯೋಗದೊಂದಿಗೆ ಸ್ಪೆಷಲ್ ಶೋ ಆಯೋಜಿಸಿದರು. ಚಿತ್ರವು ಕತಾರ್ ನಲ್ಲಿ ಮೊಟ್ಟಮೊದಲ ಬಾರಿಗೆ 11 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಪೂರ್ಣವಾಗಿ ಸ್ಕ್ರಿಪ್ಟ್, ಸ್ಕ್ರೀನ್ ಪ್ಲೇ, ಚಿತ್ರಕಥೆ ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ..
ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳು ಕೇಕ್ ಕತ್ತರಿಸಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು. ವಿಶೇಷ ಪ್ರದರ್ಶನಕ್ಕೆ ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಮಹೇಶ್ ಗೌಡ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಮತ್ತು ಶ್ರೀ ಪ್ರಭುರಾಜ್ ಅವರು ಏರ್ಪಡಿಸಿದ್ದರು. ಕನ್ನಡ ಸಿನಿಮಾಗಳು ಕತಾರ್ ನಲ್ಲಿ ಇದೇ ರೀತಿ ಅದ್ದೂರಿಯಾಗಿ ತೆರೆ ಗೊಳ್ಳಲು ಪ್ರಯತ್ನ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅನೇಕ ಕನ್ನಡ ಚಿತ್ರ ಪ್ರೇಮಿಗಳು ಕಬ್ಜ 2 ಕ ಚಿತ್ರವು ಇನ್ನು ಅದ್ದೂರಿಯಾಗಿ ಬರುತ್ತಿರುವ ನಿರೀಕ್ಷೆಯಲ್ಲಿದ್ದಾರೆ….