ಬೆಂಗಳೂರು:
ರಶ್ಮಿಕಾ ಮಂದಣ್ಣ (Rashmika Mandanna) ಅವರು ಟಾಲಿವುಡ್ಗೆ ಕಾಲಿಟ್ಟಾಗಿನಿಂದಲೂ ಸಾಕಷ್ಟು ಟ್ರೋಲ್ ಆಗುತ್ತಲೇ ಇದ್ದಾರೆ. ಕನ್ನಡ ಚಿತ್ರರಂಗದಿಂದ ಅವರನ್ನು ಹೊರಗೆ ಇಡಬೇಕು ಎನ್ನುವ ಆಗ್ರಹ ಇತ್ತೀಚೆಗೆ ಕೇಳಿಬಂತು. ಆದರೆ, ರಶ್ಮಿಕಾ ಮಂದಣ್ಣ ಅವರ ಖ್ಯಾತಿ ಮಾತ್ರ ಕಡಿಮೆ ಆಗಿಲ್ಲ. ದಿನ ಕಳೆದಂತೆ ಅವರ ಖ್ಯಾತಿ ಹೆಚ್ಚುತ್ತಲೇ ಇದೆ. ಅವರಿಗೆ ಸ್ಟಾರ್ ನಟರ ಜತೆ ನಟಿಸುವ ಅವಕಾಶ ಸಿಗುತ್ತಲೇ ಇದೆ. ಇದಕ್ಕೆ ಈಗ ಹೊಸದೊಂದು ಸಾಕ್ಷಿ ಸಿಕ್ಕಿದೆ.
ರಶ್ಮಿಕಾ ಮಂದಣ್ಣ ಅವರು ‘ಪುಷ್ಪ’ ಚಿತ್ರದ ಪ್ರಚಾರಕ್ಕಾಗಿ ರಷ್ಯಾಗೆ ತೆರಳಿದ್ದಾರೆ. ಅಲ್ಲಿ ನಟ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಸುಕುಮಾರ್ ಜತೆ ಸೇರಿ ‘ಪುಷ್ಪ’ ಸಿನಿಮಾ ಪ್ರಚಾರ ಮಾಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ‘ಪುಷ್ಪ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಯಿತು. ಈ ಚಿತ್ರ ಒಟ್ಟಾರೆ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಹಿಂದಿಯಲ್ಲೇ ಈ ಚಿತ್ರ 100 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ. ಈಗ ಸಿನಿಮಾ ರಷ್ಯಾ ಭಾಷೆಗೆ ಡಬ್ ಆಗಿ ತೆರೆಗೆ ಬಂದಿದೆ. ರಷ್ಯಾದ ಮಾಸ್ಕೋದಲ್ಲಿ ಚಿತ್ರತಂಡ ಪ್ರಚಾರಕ್ಕಾಗಿ ತೆರಳಿತ್ತು. ಅಲ್ಲಿ ರಶ್ಮಿಕಾ ಕೂಡ ಭಾಗಿ ಆಗಿದ್ದಾರೆ.
ಒಂದು ವರ್ಗದ ಜನರು ರಶ್ಮಿಕಾ ಮಂದಣ್ಣ ಅವರನ್ನು ಟ್ರೋಲ್ ಮಾಡುವುದನ್ನು ಮುಂದುವರಿಸಿದ್ದಾರೆ. ಮತ್ತೊಂದು ವರ್ಗದ ಜನರು ರಶ್ಮಿಕಾ ಅವರನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ದಳಪತಿ ವಿಜಯ್ ಅಭಿನಯದ ‘ವಾರಿಸು’ ಸಿನಿಮಾ ಜನವರಿ 12ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿ ಆಗಲಿದ್ದಾರೆ……