Breaking News

ಅಕ್ಟೋಬರ್ 1ರಿಂದ ಹೆಚ್ಚಲಿದೆ ಕರೆಂಟ್ ಬಿಲ್..!

ಕರ್ನಾಟಕದ ಜನರಿಗೆ ಮತ್ತೊಮ್ಮೆ ಬೆಲೆ ಏರಿಕೆ ಬಿಸಿ....

SHARE......LIKE......COMMENT......

ಬೆಂಗಳೂರು:

ಕರ್ನಾಟಕದ ಜನರು ಪ್ರತಿ 100 ಯುನಿಟ್​ಗೆ 43 ರೂ. ನಿಂದ 24 ರೂ. ವರೆಗೆ ಹೆಚ್ಚು ಹಣ ಪಾವತಿಸಬೇಕಾದ ದಿನಗಳು ಇನ್ನೇನು ದೂರವಿಲ್ಲ. ಕರ್ನಾಟಕದ ಜನರಿಗೆ ಮತ್ತೊಮ್ಮೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ವಿದ್ಯುತ್ ದರ ಏರಿಕೆಯಾಗಲಿದೆ. ಅಕ್ಟೋಬರ್ 1ರಿಂದ ಕರ್ನಾಟಕದಲ್ಲಿ ಪರಿಷ್ಕೃತ ವಿದ್ಯುತ್ ದರ ಜಾರಿಯಾಗಲಿದೆ. ಹಿಂದಿನ ಏಪ್ರಿಲ್ನಲ್ಲಷ್ಟೇ ವಿದ್ಯುತ್ ದರ ಏರಿಕೆ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ವಿದ್ಯುತ್ ದರ ಏರಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಬೆಸ್ಕಾಂಗೆ ಪ್ರತಿ ತಿಂಗಳಿಗೆ ಪ್ರತಿ ಯೂನಿಟ್ಗೆ 43 ಪೈಸೆ, ಮೆಸ್ಕಾಂಗೆ 24 ಪೈಸೆ, ಚಸ್ಕಾಂಗೆ 34 ಪೈಸೆ, ಹೆಸ್ಕಾಂಗೆ 35 ಪೈಸೆ ಏರಿಕೆ ಮಾಡಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಅವಕಾಶ ನೀಡಲಾಗಿದೆ.

ಸರ್ಕಾರದ ಈ ನಿರ್ಧಾರಕ್ಕೆ ಹೊಟೇಲ್ ಮಾಲೀಕರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಆದರೆ ಹೊಟೇಲ್ ಮಾಲೀಕರ ಸಂಘದವವರ ಮನವಿಗೆ ಸರ್ಕಾರ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದುನೋಡಬೇಕಿದೆ. ಒಟ್ಟಿನಲ್ಲಿ ಕರ್ನಾಟಕದ ಜನರಿಗೆ ಇನ್ನಷ್ಟು ದುಬಾರಿ ದಿನಗಳು ಎದುರಾಗುವ ಎಲ್ಲ ಸಾಧ್ಯತೆಗಳೂ ದಟ್ಟವಾಗಿದೆ……