Breaking News

ಶನಿ ದೇವರಿಗೆ ಈ 5 ವಸ್ತುಗಳನ್ನು ಅರ್ಪಿಸಿದರೆ ದುರಾದೃಷ್ಟ ಕೂಡಾ ಅದೃಷ್ಟವಾಗಿ ಬದಲಾಗುತ್ತದೆ..!

ಈ ಕ್ರಮಗಳು ಶನಿಯ ಕೋಪದಿಂದ ಪರಿಹಾರವನ್ನು ನೀಡುತ್ತದೆ....

SHARE......LIKE......COMMENT......

ಧರ್ಮ-ಜ್ಯೋತಿ :

ಶನಿ ಜಯಂತಿಯ ದಿನವು ಶನಿಯ ಸಾಡೇ ಸಾತಿ ಮತ್ತು ಧೈಯಾದಿಂದ ಬಳಲುತ್ತಿರುವ ಜನರಿಗೆ ಬಹಳ ವಿಶೇಷವಾಗಿದೆ. ಇದಲ್ಲದೇ ಯಾರ ಜಾತಕದಲ್ಲಿ ಶನಿ ಬಲಹೀನನಾಗಿರುತ್ತಾನೋ ಅಂತಹವರು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು.

ಶನಿದೇವನ ಆಶೀರ್ವಾದ ಪಡೆಯಲು ಶನಿ ಜಯಂತಿಯನ್ನು ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ. ಈ ದಿನ ನ್ಯಾಯದ ದೇವರಾದ ಶನಿ ದೇವರನ್ನು ಪೂಜಿಸುವುದರಿಂದ ಶನಿಯ ಅಶುಭ ಪರಿಣಾಮಗಳಿಂದ ಪರಿಹಾರ ದೊರೆಯುತ್ತದೆ. ಶನಿಯು ಕರ್ಮಕ್ಕನುಗುಣವಾಗಿ ಫಲವನ್ನು ಕೊಡುವ ದೇವರು. ಯಾರ ಮೇಲೆ ಶನಿಯ ವಕ್ರ ದೃಷ್ಟಿ ಬೀಳುತ್ತದೆಯೋ ಅವರು ಜೀವನದಲ್ಲಿ ಪಡಬಾರದ ಪಾಡು ಪಡಬೇಕಾಗುತ್ತದೆ. ಶನಿಯ ಪ್ರಕೋಪದಿಂದ ಪಾರಾಗಲು ಶನಿ ಜಯಂತಿಯನ್ ದಿನ ಕೆಲವೊಂದು ಪರಿಹಾರ ಕಾರ್ಯಗಳನ್ನು ಮಾಡುವಂತೆ ಸೂಚಿಸಲಾಗುತ್ತದೆ. ಈ ದಿನ ಶನಿ ದೇವರಿಗೆ ಎಣ್ಣೆ, ಕಪ್ಪು ಎಳ್ಳು, ಕಪ್ಪು ಉದ್ದು ಇತ್ಯಾದಿ ವಸ್ತುಗಳನ್ನು ಅರ್ಪಿಸುತ್ತಾರೆ. ಮಾತ್ರವಲ್ಲ ಎಳ್ಳೆಣ್ಣೆಯ ದೀಪವನ್ನು ಬೆಳಗಿಸಲಾಗುತ್ತದೆ.

ಈ ಕ್ರಮಗಳು ಶನಿಯ ಕೋಪದಿಂದ ಪರಿಹಾರವನ್ನು ನೀಡುತ್ತದೆ :

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಜಯಂತಿಯಂದು ಕೆಲವೊಂದು ಕ್ರಮಗಳನ್ನು ಕೈಗೊಂಡರೆ ಶನಿದೇವನ ಕೋಪದಿಂದ ಮುಕ್ತಿ ಪಡೆಯಬಹುದು. ಈ ಕ್ರಮಗಳು ಭವಿಷ್ಯದಲ್ಲಿ ಎದುರಾಗಬಹುದಾದ ಬಿಕ್ಕಟ್ಟುಗಳನ್ನು ಕೂಡಾ ನಿವಾರಿಸುತ್ತದೆ. ಇದರೊಂದಿಗೆ ವ್ಯಕ್ತಿಯ ಮೇಲೆ ಶನಿಯ ಆಶೀರ್ವಾದ ಕೂಡಾ ಇರುತ್ತದೆ. ಶನಿಯ ಆಶೀರ್ವಾದ ಇದ್ದರೆ, ಜೀವನದಲ್ಲಿ ಪ್ರಗತಿಯಾಗುತ್ತದೆ. ರೋಗ ರುಜಿನಗಳು ನಿವಾರಣೆಯಾಗುತ್ತದೆ. ಜೀವನದಲ್ಲಿ ಸುಖ ಶಾಂತಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಶನಿ ಜಯಂತಿಯ ದಿನ ವಿಧಿವತ್ತಾಗಿ ಶನಿಯನ್ನು ಪೂಜಿಸುವ ಮೂಲಕ ಶನಿ ದೋಷದಿಂದ ಮುಕ್ತಿ ಪಡೆಯಬಹುದು.

ಶಮಿ ಎಲೆಗಳ ಅರ್ಪಣೆ : ಶಮಿ ಸಸ್ಯವು ಶನಿ ದೇವರಿಗೆ ತುಂಬಾ ಪ್ರಿಯವಾದದ್ದು. ಶನಿ ಸಾಡೇ ಸಾತಿ ನಡೆಯುತ್ತಿದ್ದರೆ, ಶಮಿ ವೃಕ್ಷವನ್ನು ನೀರನ್ನು ಅರ್ಪಿಸುಂತೆ ಸೂಚಿಸಲಾಗುತ್ತದೆ. ಅಥವಾ ಮನೆಯಲ್ಲಿ ಶಮಿ ಗಿಡವನ್ನು ನೆಟ್ಟು ಅವನ ಸೇವೆ ಮಾಡಲು ಸಲಹೆ ನೀಡಲಾಗುತ್ತದೆ. ಶನಿ ಜಯಂತಿಯ ದಿನದಂದು ಶನಿ ದೇವರಿಗೆ ಶಮಿ ಎಲೆಗಳನ್ನು ಅರ್ಪಿಸಿದರೆ ಅದೃಷ್ಟ ಒಲಿಯುತ್ತದೆ ಎನ್ನಲಾಗಿದೆ.

ಎಳ್ಳೆಣ್ಣೆ : ಶನಿ ಮತ್ತು ಎಳ್ಳೆಣ್ಣೆಯ ನಡುವಿನ ಸಂಬಂಧ ಎಲ್ಲರಿಗೂ ತಿಳಿದಿದೆ. ಎಳ್ಳೆಣ್ಣೆಯನ್ನು ಮುಖ್ಯವಾಗಿ ಶನಿ ದೇವರ ಪೂಜೆಯಲ್ಲಿ ಬಳಸಲಾಗುತ್ತದೆ. ಶನಿ ಜಯಂತಿಯ ದಿನದಂದು ಶನಿಗೆ ಎಳ್ಳೆಣ್ಣೆಯನ್ನು ಅರ್ಪಿಸಿ ಎಳ್ಳೆಣ್ಣೆ ದೀಪವನ್ನು ಬೆಳಗಬೇಕು. ಇದರಿಂದ ಶನಿ ದೋಷ ನಿವಾರಣೆಯಾಗುತ್ತದೆ.

ಕಪ್ಪು ಎಳ್ಳು: ಶನಿ ದೇವರಿಗೆ ಕಪ್ಪು ಎಳ್ಳನ್ನು ಅರ್ಪಿಸಿದರೆ ಶನಿಯು ಪ್ರಸನ್ನನಾಗುತ್ತಾನೆ ಮತ್ತು ಎಲ್ಲಾ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ.

ಕಪ್ಪು ಉದ್ದು : ಶನಿ ದೋಷವನ್ನು ಹೋಗಲಾಡಿಸಲು ಕಪ್ಪು ಉದ್ದು ಕೂಡ ಬಹಳ ಮುಖ್ಯವಾಗಿರುತ್ತದೆ.

ನೀಲಿ ಹೂವುಗಳು: ನೀಲಿ ಮತ್ತು ಕಪ್ಪು ಬಣ್ಣಗಳು ಶನಿಗ್ರಹಕ್ಕೆ ಬಹಳ ಪ್ರಿಯವಾಗಿವೆ. ಆದ್ದರಿಂದ ಶನಿದೇವನಿಗೆ ನೀಲಿ ಹೂವುಗಳನ್ನು ಅರ್ಪಿಸಿ ಶನಿದೆವನ ಕೃಪೆಗೆ ಪಾತ್ರರಾಗಬಹುದು…..