ಬೆಂಗಳೂರು:
ಮಾಸ್ ಲುಕ್‌ನಲ್ಲಿ ಮತ್ತೊಮ್ಮೆ ತಮ್ಮ ಖದರ್ ಡೈಲಾಗ್ ಮೂಲಕ ಸಿನಿ ರಸಿಕರನ್ನು ರಂಜಿಸಲು ಶಿವಣ್ಣ ರೆಡಿಯಾಗಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ವೇದ ಸಿನಿಮಾ ಇನ್ನೇನೂ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಸಿನಿಮಾ ಪ್ರಚಾರಕ್ಕೆ ಹೊಸ ಹೊಸ ಐಡಿಯಾಗಳನ್ನು ಹೆಣೆಯುತ್ತಿದೆ ಚಿತ್ರತಂಡ. ತಮ್ಮ ನೆಚ್ಚಿನ ಹೀರೋ ಸಿನಿಮಾಗಾಗಿ ಕಾದು ಕುಳಿತಿದ್ದ ಶಿವಣ್ಣನ ಫ್ಯಾನ್ಸ್‌ಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ವಿನೂತನವಾಗಿ ಸಿನಿಮಾ ಪ್ರಚಾರ ಮಾಡುತ್ತಿರುವ ತಂಡ ನಾಳೆ ರಾಯಚೂರಿಗೆ ಬರಲಿದೆ. ಈಗಾಗಲೇ ಪೋಸ್ಟರ್, ಫಸ್ಟ್ ಲುಕ್ ಮೂಲಕ ಅಬ್ಬರಿಸಿರುವ ವೇದ ಚಿತ್ರದ ಟೀಸರ್ ನಾಳೆ ರಿಲೀಸ್ ಆಗಲಿದೆ.
ಈ ಹಿಂದೆ ವೆಪನ್ ಆಫ್ ವೇದ ಟೀಸರ್ ರಿಲೀಸ್ ಆಗಿತ್ತು. ಮತ್ತೊಮ್ಮೆ ಶಿವರಾಜ್ ಕುಮಾರ್ ಮಾಸ್ ಲುಕ್‌ನಲ್ಲಿ ಮಿಂಚಿದ್ದನ್ನು ಕಂಡು ಫ್ಯಾನ್ಸ್ ದಿಲ್ ಖುಷ್ ಆಗಿತ್ತು. ಪಾತ್ರದ ಖದರ್ ಅನ್ನ ಈ ಟೀಸರ್ ಮೂಲಕ ರಿವೀಲ್ ಮಾಡಿತ್ತು ಚಿತ್ರತಂಡ. ಕೆಲವೇ ದಿನಗಳ ಹಿಂದೆ ಗಿಲ್ಲಕ್ಕೋ ಶಿವ ಲಿರಿಕಲ್ ಸಾಂಗ್ ಕೂಡ ಬಿಡುಗಡೆಯಾಗಿದೆ. ಇದು ಸಿಕ್ಕಾಪಟ್ಟೆ ವೈರಲ್ ಕೂಡ ಆಗಿದೆ. ಪೋಸ್ಟರ್, ಟೀಸರ್, ಹಾಡಿನ ಮೂಲಕ ಸಖತ್ ಕ್ರೇಜ್ ಕ್ರಿಯೇಟ್ ಮಾಡಿರುವ ವೇದ ಸಿನಿಮಾದ ಹೊಸ ಟೀಸರ್ ನಾಳೆ ಬಿಡುಗಡೆಯಾಗುತ್ತಿದೆ.
Gear up for the "Soul of Vedha" coming in 2 days!🔥
Teaser releasing on December 3rd @5 PM on @ZeeStudios_ YouTube channel !!!#ವೇದ #Vedha #VedhaOnDec23 @GeethaPictures @ArjunJanyaMusic @NimmaAHarsha @SwethaChangappa @SagarAdithi @dskcuts @kiranksca pic.twitter.com/eBZ7MEONQy— DrShivaRajkumar (@NimmaShivanna) December 1, 2022
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ವೇದ ಸಿನಿಮಾದ ಟೀಸರ್ ಡಿಸೆಂಬರ್ 3 ರಂದು ಸಂಜೆ 5 ಗಂಟೆಗೆ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ವೇದ ಹೆಸರಿನ ಪಾತ್ರಕ್ಕೆ ಜೀವ ತುಂಬಿದ್ದಾರೆ ಶಿವಣ್ಣ. ವೇದ ಚಿತ್ರದ ಪ್ರಮೋಷನ್ ಐಡಿಯಾ ಸಖತ್ ಆಗಿದೆ. ನಿರ್ದೇಶಕ ಎ.ಹರ್ಷಾ ಪ್ರತಿ ಟೀಸರ್‌ಗೂ ಒಂದೊಂದು ಥೀಮ್ ಟೈಟಲ್ ಇಟ್ಟಿದ್ದಾರೆ. ಈ ಮೂಲಕ ಸಿನಿಪ್ರಿಯರ ಕುತೂಹಲ ಹೆಚ್ಚಾಗುವಂತೆ ಮಾಡಿದ್ದಾರೆ.
ಇನ್ನೂ ನಾಳೆ ರಾಯಚೂರಿನ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ವೇದ ಸಿನಿಮಾದ ಟೀಸರ್ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಸಂಜೆ 5 ಗಂಟೆಗೆ ಟೀಸರ್ ಬಿಡುಗಡೆಯಾಗಲಿದ್ದು, ನಿರ್ದೇಶಕ ಹರ್ಷಾ, ನಟ ಶಿವರಾಜ್‌ಕುಮಾರ್ ಸೇರಿದಂತೆ ಚಿತ್ರತಂಡ ನಾಳೆ ರಾಯಚೂರಿನಲ್ಲಿ ಮಿಂಚಲಿದ್ದಾರೆ. ಚಿತ್ರದ ಒಂದೊಂದು ಕಂಟೆಂಟ್ ಅನ್ನ ಒಂದೊಂದೂ ಊರಲ್ಲಿ ರಿಲೀಸ್ ಮಾಡುವ ಮೂಲಕ ಸಖತ್ ಆಗಿಯೇ ಪ್ರಮೋಷನ್ ಪ್ಲ್ಯಾನ್ ಮಾಡಿದ್ದಾರೆ. ವೇದ ಚಿತ್ರದ ಗಿಲ್ಲಕ್ಕೋ ಶಿವ ಹಾಡನ್ನ ರಿಲೀಸ್ ಮಂಡ್ಯದ ಪಾಂಡವರಪುರದಲ್ಲಿ ಮಾಡಿದ್ದರು. ಸೆಂಚೂರಿ ಸ್ಟಾರ್ ಅಭಿನಯದ ವೇದ ಸಿನಿಮಾ ಡಿಸೆಂಬರ್ 23 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ……