ಸಿನಿಮಾ:
“ಸಂಕಷ್ಟಕರ ಗಣಪತಿ” ಹಾಗೂ “ಫ್ಯಾಮಿಲಿ ಪ್ಯಾಕ್” ಚಿತ್ರಗಳ ಮೂಲಕ ಜನಮನ ಗೆದ್ದಿರುವ ಲಿಖಿತ್ ಶೆಟ್ಟಿ, ನಿರ್ಮಿಸಿ ಜೊತೆಗೆ ನಾಯಕರಾಗೂ ನಟಿಸುತ್ತಿರುವ ಚಿತ್ರ “ಫುಲ್ ಮೀಲ್ಸ್”. ಸದ್ಯ ” ಫುಲ್ ಮೀಲ್ಸ್” ಚಿತ್ರದ ನೂತನ ಪೋಸ್ಟರ್ ಬಿಡುಗಡೆಯಾಗಿದೆ. ಪೋಸ್ಟರ್ ಗೆ ಎಲ್ಲಾ ಕಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗಾಗಲೇ ಈ ಚಿತ್ರದ ಅರ್ಧದಷ್ಟು ಭಾಗದ ಚಿತ್ರೀಕರಣ ಮುಗಿದಿದೆ.ಎನ್ ವಿನಾಯಕ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನಿರ್ದೇಶನ ಹಾಗೂ ಮನೋಹರ್ ಜೋಶಿ ಅವರ ಛಾಯಾಗ್ರಹಣವಿದೆ. ಲಿಖಿತ್ ಶೆಟ್ಟಿ, ಖುಷಿ ರವಿ, ತೇಜಸ್ವಿನಿ ಶರ್ಮ, ರಂಗಾಯಣ ರಘು, ಸಾಧುಕೋಕಿಲ, ವಿಜಯ್ ಚೆಂಡೂರ್, ರಾಜೇಶ್ ನಟರಂಗ, ರಮೇಶ್ ಪಂಡಿತ್, ಹೊನ್ನವಳ್ಳಿ ಕೃಷ್ಣ, ಚಂದ್ರಕಲಾ ಮೋಹನ್, ಸುಜಯ್ ಶಾಸ್ತ್ರಿ, ಗಣೇಶ್ ರಾವ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಬ್ಯೂಟಿಫುಲ್ ಆಗಿದೆ “ಫುಲ್ ಮೀಲ್ಸ್” ಪೋಸ್ಟರ್..!
ಲಿಖಿತ್ ಶೆಟ್ಟಿ, ನಿರ್ಮಿಸಿ ನಾಯಕರಾಗಿರುವ ಚಿತ್ರ ...

Post navigation
Posted in: