Breaking News

ಬುಧ ನೀಲಕಂಠನ ದರ್ಶಿಸಿದ್ದರೆ ನೇಪಾಳದ ರಾಜರಿಗೆ ಸಾವು..?

SHARE......LIKE......COMMENT......

ದೈವ ಸನ್ನಿಧಿ:

ಹಿಂದೂ ಧರ್ಮ, ಸನಾತನ ಧರ್ಮದ ನಂಬಿಕೆಗಳೆಂದರೆ ಅದು ನೇಪಾಳದವರಿಗೂ ಪೂಜನೀಯ ಭಾವನೆಗಳಿದ್ದು, ಅಲ್ಲಿನ ಬಹುಸಂಖ್ಯಾತರು ಹಿಂದೂ ಧರ್ಮವನ್ನೇ ಪಾಲಿಸುತ್ತಿದ್ದಾರೆ. ಪಶುಪತಿನಾಥ, ಬುಧ ನೀಲಕಂಠ ದೇವಾಲಯಗಳು ನೇಪಾಳದ ಪ್ರಸಿದ್ಧ ದೇವಾಲಯಗಳಾಗಿದ್ದು, ಬುಧ ನೀಲಕಂಠ ದೇವಾಲಯ ವಿಷ್ಣು ಶೇಷಶಯನನಾಗಿರುವ ಅಪರೂಪದ ವಿಗ್ರಹ ಇಲ್ಲಿದೆ.

ತೆರೆದ ಪ್ರದೇಶದಲ್ಲಿ ವಿಷ್ಣುವಿನ ವಿಗ್ರಹ ಇರುವುದು ಈ ದೇವಾಲಯದ ಮತ್ತೊಂದು ವಿಶೇಷ. ಕಠ್ಮಂಡು ಕಣಿವೆಯ ಶಿವಪುರಿ ಹಿಲ್ ನ ಉತ್ತರ ಭಾಗದಲ್ಲಿರುವ ಈ ದೇವಾಲಯ ಅಸ್ತಿತ್ವಕ್ಕೆ ಬಂದಿದ್ದರ ಹಿಂದೆ ಒಂದು ರೋಚಕ ಸಂಗತಿ ಇದೆ. ಈ ಪ್ರದೇಶದಲ್ಲಿ ರೈತನೊಬ್ಬ ಉಳುಮೆ ಮಾಡುತ್ತಿದ್ದ ವೇಳೆಯಲ್ಲಿ ನೇಗಿಲು ಸಿಲುಕಿಹಾಕಿಕೊಂಡಿತ್ತು, ನೇಗಿಲು ಸಿಲುಕಿದ ಜಾಗದಲ್ಲಿ ರಕ್ತಸ್ರಾವವಾಗಲು ಪ್ರಾರಂಭವಾಗಿ ಆ ಜಾಗದಲ್ಲಿ ಬುಧ ನೀಲಕಂಠ ದೇವರ ವಿಗ್ರಹ ಪತ್ತೆಯಾಯಿತು. ಅದೇ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

ಮತ್ತೊಂದು ಪೌರಾಣಿಕ ಹಿನ್ನೆಲೆಯ ಪ್ರಕಾರ, 17 ನೇ ಶತಮಾನದಲ್ಲಿ ವಿಷ್ಣುಗುಪ್ತ ಎಂಬ ರಾಜ ಆ ವಿಗ್ರಹವನ್ನು ಕೆತ್ತಿಸಿ ಕಠ್ಮಂಡುವಿಗೆ ತಂದು ಪ್ರತಿಷ್ಠಾಪಿಸಿದ್ದ ಎಂದೂ ಹೇಳಲಾಗುತ್ತದೆ. ಈ ವಿಗ್ರಹ ನೀರಿನ ಮಧ್ಯಭಾಗದಲ್ಲಿ ತೇಲುತ್ತಿರುವುದು ಇಲ್ಲಿಗೆ ಭೇಟಿ ನೀಡುವ ಸಾವಿರಾರು ಭಕ್ತಾದಿಗಳಲ್ಲಿ ಅಚ್ಚರಿ ಮೂಡಿಸುತ್ತದೆ.

ಈ ದೇವಾಲಯಕ್ಕೆ ಅಲ್ಲಿನ ರಾಜರು ಭೇಟಿ ನೀಡಿದರೆ ಸಾವನ್ನಪ್ಪುತ್ತಾರೆ ಎಂಬ ನಂಬಿಕೆಯೂ ಇದೆ. 1641-1674 ರಲ್ಲಿ ಆಳ್ವಿಕೆ ನಡೆಸಿದ್ದ ಪ್ರತಾಪ್ ಮಲ್ಲ ಎಂಬ ರಾಜನಿಗೆ ವಿಶೇಷವಾದ ದೃಷ್ಟಿಯಿತ್ತು, ಆತನಿಗಿದ್ದ ಆ ವಿಶೇಷ ಶಕ್ತಿಯಿಂದ ನೇಪಾಳ ರಾಜರು ಬುಧ ನೀಲಕಂಠ ದೇವಾಲಯಕ್ಕೆ ಭೇಟಿ ನೀಡಿದರೆ ಸಾವನ್ನಪ್ಪುತ್ತಾರೆ ಎಂಬ ನಂಬಿಕೆ ಪ್ರಾರಂಭವಾಯಿತು, ಆದ್ದರಿಂದಲೇ ಪ್ರತಾಪ್ ಮಲ್ಲನ ನಂತರ ಯಾವುದೇ ರಾಜರು ಆ ದೇವಾಲಯಕ್ಕೆ ಭೇಟಿ ನೀಡಿಲ್ಲ ಹೇಳಲಾಗುತ್ತದೆ…..