Breaking News

ಯಾವ ಆಹಾರ ಸೇವನೆಯಿಂದ ನಿಮ್ಮ ಗ್ರಹ ದೋಷ ಪರಿಹಾರವಾಗುತ್ತೆ..?

ಯಾವ ರಾಶಿಯವರು ಯಾವ ಆಹಾರ ಸೇವಿಸಬೇಕು....

SHARE......LIKE......COMMENT......

ಧರ್ಮ-ಜ್ಯೋತಿ:

ಕನ್ಯಾ:

ಇವರು ಸಣ್ಣ ಪ್ರಮಾಣದಲ್ಲಿ ಡಯಟ್ ಮಾಡುತ್ತಾರೆ. ಆದರೆ ವಿಸ್ತಾರವಾದ ವಿವರಗಳನ್ನು ತಿಳಿಯಲು ಇಷ್ಟಪಡುತ್ತಾರೆ. ಇವರು ಪ್ರತಿದಿನ ತಾವು ಸೇವಿಸಿದ ಆಹಾರ, ಅದರ ಪ್ರಯೋಜನ, ಇವರ ತೂಕ ಇಳಿಕೆ ಮೊದಲಾದವುಗಳನ್ನು ದಾಖಲಿಸುತ್ತಿರುತ್ತಾರೆ. ಎಲ್ಲದಕ್ಕಿಂತ ಮಿಗಿಲಾಗಿ ಅವರಿಗೆ ಡಯಟ್ ಪ್ರಮುಖವಾಗಿರುತ್ತದೆ. ಇವರು ದೀರ್ಘಾವಧಿಯ ಗುರಿಯನ್ನು ಹೊಂದಿರುವುದರಿಂದ ವೇಗವಾಗಿ ತೂಕ ಇಳಿಕೆಯಾಗುವುದನ್ನು ಇಷ್ಟಪಡುವುದಿಲ್ಲ. ಇವರಿಗೆ ತಮ್ಮ ಡಯಟ್ ಪರಿಪೂರ್ಣವಾಗಿರಬೇಕು ಎಂಬುದೇ ಬಯಕೆ. ಹೀಗಾಗಿ ಇವರಿಗೆ ಸಮಸ್ಯೆ ಎದುರಾಗುತ್ತದೆ.

ನಿಮ್ಮ ಬಗ್ಗೆ ತುಂಬಾ ಕಠಿಣವಾಗಿರಬೇಡಿ ಮತ್ತು ಸಾವಯವ ಆಹಾರ ಸೇವಿಸಲು ಪ್ರಯತ್ನಿಸಿ.

ತುಲಾ:

ನಿರ್ದಿಷ್ಟ ಆಹಾರದ ಡಯಟ್ ಅನುಸರಿಸಲು ಕಷ್ಟಪಡುತ್ತಾರೆ. ಯಾಕೆಂದರೆ ಇವರಿಗೆ ಪ್ರತಿ ಬಾರಿಯೂ ಹೊಸ ರುಚಿ ಟ್ರೈ ಮಾಡಲು ಇಷ್ಟ. ಆದ್ದರಿಂದ ಸೂಕ್ತವಾದ ಡಯಟ್ ಪಾಲಿಸಲು ಕಷ್ಟಪಡುತ್ತಾರೆ.

ಪೊಟಾಷಿಯಂ ಹೇರಳವಾಗಿರುವ ಆಹಾರವನ್ನು ಸೇವಿಸಿ.

ವೃಶ್ಚಿಕ:

ತಮ್ಮ ಸಾಮರ್ಥ್ಯದಿಂದ ಇವರು ಡಯಟ್ ಮಾಡಬಲ್ಲರು. ಇವರು ಒಂದು ಗುರಿಯನ್ನು ಪೂರ್ಣಗೊಳಿಸುವುದಕ್ಕಾಗಿ ಕರ್ತವ್ಯದ ಪ್ರಬಲ ಪ್ರಜ್ಞೆಯನ್ನು ಕೂಡ ಹೊಂದಿರುತ್ತಾರೆ. ಡಯಟ್ ಮಾಡಲು ಕಷ್ಟವಾದರೂ ಅದು ಒಳ್ಳೆಯದು ಎಂಬ ಭಾವನೆ ಇರುತ್ತದೆ.

ಫೈಬರ್ ಅಂಶವುಳ್ಳ ಆಹಾರವನ್ನು ಸಾಕಷ್ಟು ಸೇವಿಸಿ.

ಧನಸ್ಸು:

ಮೋಜಿನ ಯೋಜನೆಯನ್ನು ಇಷ್ಟಪಡುವವರು ಮತ್ತು ಗುರಿಗಳನ್ನು ಅನುಸರಿಸುವವರು. ಹೊಸ ಸವಾಲುಗಳನ್ನು ಎಂಜಾಯ್ ಮಾಡುವವರು. ಆದರೆ ಇವರು ಅಂದುಕೊಂಡಂತೆ ಅದು ನಡೆಯದಿದ್ದರೆ ಅರ್ಧದಲ್ಲೇ ಕೈ ಬಿಡುವವರು ! ಜತೆಗೆ ಹೊಸ ಡಯಟ್ ಮಂತ್ರಕ್ಕೆ ಸುಲಭವಾಗಿ ಒಗ್ಗಿಕೊಳ್ಳುವವರು.

ಉಪ್ಪು, ಸಕ್ಕರೆ ಮತ್ತು ಕ್ರೀಮ್ ಆರೋಗ್ಯಕರ ಆಯ್ಕೆಯಾಗಿದೆ.

ಮಕರ:

ಇವರಿಗೆ ಒಂದು ಗುರಿ ಇಟ್ಟಿಕೊಳ್ಳುವುದೆಂದರೆ ಬಲು ಇಷ್ಟ. ಇವರು ಚೇತರಿಸಿಕೊಳ್ಳುವ ಸ್ವಭಾವದವರು ಮತ್ತು ಒಂದು ರಾತ್ರಿಯೊಳಗೆ ಎಲ್ಲವೂ ಬದಲಾಗುವುದಿಲ್ಲ ಎಂದು ತಿಳಿದಿರುವವರು. ಆದರೂ ಇವರು ಪಥ್ಯದ ವಿಷಯದಲ್ಲಿ ಮಾತ್ರ ಬಹಳ ಕಟ್ಟುನಿಟ್ಟು. ಜತೆಗೆ ಅದನ್ನು ಗಂಭೀರವಾಗಿ ಪರಿಗಣಿಸಿ ಮುಂದುವರಿಸಿದರೆ ಮಾತ್ರ ಇವರಿಗೆ ಸಂಪೂರ್ಣ ತೃಪ್ತಿಯಾಗುವುದು. ಇವರು ಯಾವುದಕ್ಕೂ ಜಗ್ಗದವರು ಮತ್ತು ತಮ್ಮ ಗುರಿ ಈಡೇರುತ್ತಿದೆ ಎಂದು ಅನಿಸಿದರೆ ಅದನ್ನು ಸಾಧಿಸಿ ಬಿಡುವ ಬಗ್ಗೆ ಒಲವು ಹೊಂದಿರುತ್ತಾರೆ. ಇವರು ಪ್ರಯತ್ನಿಸಿದರೆ ಅದು ಸುಲಭವಾಗಿ ನೆರವೇರುತ್ತದೆ. ಪಥ್ಯವನ್ನು ಇವರು ಎಂಜಾಯ್ ಮಾಡುತ್ತಾರೆ ಮತ್ತು ಇದೊಂದು ಸಾಧನೆ ಎಂದು ತಿಳಿಯುವವರಲ್ಲ.

ಮೋಜಿನ ವ್ಯಾಯಾಮವಾದ ಏರೋಬಿಕ್ಸ್ ಅಥವಾ ತಾಯ್ ಚಾಯ್ ವ್ಯಾಯಾಮ ಮಾಡಲು ಯತ್ನಿಸಬಹುದು.

ಕುಂಭ:

ಇವರು ಪ್ರಯೋಗ ಮಾಡುವುದನ್ನು ಇಷ್ಟಪಡುತ್ತಾರೆ. ಅಸಾಧಾರಣ ವಸ್ತುಗಳ ಬಗ್ಗೆ ಆಕರ್ಷಕ್ಕೆ ಒಳಗಾಗುವವರು. ಪಥ್ಯಾಹಾರದಲ್ಲಿ ನವೀನತೆಯನ್ನು ಸಹಜವಾಗಿಯೇ ಇಷ್ಟಪಡುವವರು. ಇವರ ಇಚ್ಛೆ ಹಾಗೂ ಅಭಿರುಚಿಗೆ ತಕ್ಕಂತೆ ಆಹಾರವನ್ನು ಕಸ್ಟಮೈಸ್ ಮಾಡುವವರು. ಹೀಗಾಗಿ ಇವೆರಿಗೆ ಒಂದೇ ಟ್ರ್ಯಾಕ್‌ನಲ್ಲಿ ಇರಲು ನೆರವಾಗುತ್ತದೆ.

ಮದ್ಯ ಸೇವನೆಯನ್ನು ನಿಲ್ಲಿಸಬೇಕು.

ಮೀನ:

ಮೀನ ರಾಶಿಯವರು ತಮ್ಮ ಪಥ್ಯ ಸೇರಿದಂತೆ ಎಲ್ಲವೂ ತಮ್ಮ ಕನಸಿನಂತೆ ಇರಲು ಬಯಸುತ್ತಾರೆ ! ಈ ಮೂಲಕ ಪರಿಪೂರ್ಣವಾಗಿರಬೇಕು ಎಂಬುದು ಇವರ ಅರ್ಥ. ಪರಿಪೂರ್ಣತೆ ಬಲು ಕಠಿಣ ಮತ್ತು ಸೂಕ್ಷ್ಮ ಸ್ವಭಾವದ ಮೀನ ರಾಶಿಯವರು ವಿಷಯವನ್ನು ಲಘವಾಗಿ ತೆಗೆದುಕೊಳ್ಳುವುದಿಲ್ಲ. ಗಡಿ ಹಾಕಿಕೊಳ್ಳುವುದನ್ನು ಇವರು ದ್ವೇಷಿಸುತ್ತಾರೆ.

ಇವರಿಗೆ ಮನರಂಜನೆ ಸಿಗಬೇಕಾದರೆ ಯೋಗ ಅಥವಾ ಡಾನ್ಸ್‌ನಂಥ ವ್ಯಾಯಾಮ ಮಾಡಬೇಕು. ಇವು ಇವರನ್ನು ಸಂತೋಷವಾಗಿರಿಸಬಲ್ಲದು……