Breaking News

ಅಂದದ ಸುಂದರ ತ್ವಚೆಗಾಗಿ ಪ್ರತಿದಿನವೂ ತಪ್ಪದೇ ಬಳಸಿ ಅಲೋವೆರಾ..!

ಲೋಳೆಸರದಲ್ಲಿ ಹಲವಾರು ಔಷಧೀಯ ಗುಣಗಳು ಅಡಗಿದೆ....

SHARE......LIKE......COMMENT......

ಹೆಲ್ತ್‌ ಟಿಪ್ಸ್:

ಲೋಳೆಸರದಲ್ಲಿ (Aloe Vera) ಅಡಗಿರುವ ಔಷಧೀಯ ಗುಣಗಳ ಬಗ್ಗೆ ನೀವು ತಿಳಿದರೆ ಆಶ್ಚರ್ಯ ಪಡುವುದರಲ್ಲಿ ಸಂಶಯವಿಲ್ಲ. ಇದು ತನ್ನ ಅನೇಕ ಔಷಧೀಯ ಗುಣಗಳಿಂದ ಹೆಸರುವಾಸಿಯಾಗಿದೆ. ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ಬದಲಾಗಿ ಇದು ಚರ್ಮದ (Skin) ಆರೈಕೆಗೆ ಸಮೃದ್ಧ ಪೋಷಕಾಂಶಗಳನ್ನು ನೀಡುತ್ತದೆ. ಚಿಕ್ಕಪುಟ್ಟ ಗಾಯಗಳಾದರೆ ಲೋಳೆಸರದ ರಸ (Aloe Vera Liquid) ಹಚ್ಚಿಕೊಂಡರೆ ಕೂಡಲೇ ರಕ್ತದ ಒಸರುವಿಕೆಯನ್ನು ಇದು ಕಡಿಮೆ ಮಾಡುತ್ತದೆ. ಇದಲ್ಲದೆ ಲೋಳೆಸರದಲ್ಲಿ ಅದ್ಭುತವಾದ ಇನ್ನೂ ಹಲವಾರು ಔಷಧೀಯ (Medicine) ಗುಣಗಳು ಅಡಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲೂ ಲೋಳೆಸರ ಮುಖ್ಯ ಪಾತ್ರವನ್ನು ವಹಿಸುತ್ತದೆ.

ಸಂಧಿವಾತ ಸಮಸ್ಯೆಗೆ ಪರಿಹಾರ ಒದಗಿಸಿಕೊಡುತ್ತವೆ

ಲೋಳೆಸರದಲ್ಲಿನ ಫಂಗಸ್ ವಿರೋಧಿ ಅಂಶ ಮತ್ತು ಉರಿ ನಿವಾರಕ ಅಂಶವೂ ಸಂಧಿವಾತ ಸಮಸ್ಯೆಯನ್ನು ಕಡಿಮೆ ಮಾಡಲು ಉಪಕಾರಿಯಾಗಿದೆ. ಹೌದು ಮೂಳೆಗಳಲ್ಲಿರುವ ಸೈವೋನಿಯರ್ ಅಂಶ ಹೊಂದಿದ್ದಾಗಲೇ ಕೀಲುಗಳಲ್ಲಿ ನೋವು ಉಂಟಾಗಿ ಸಂಧಿವಾತ ಉಂಟಾಗುತ್ತದೆ. ಸಂಧಿವಾತದ ಸಮಸ್ಯೆಯಿಂದ ಹೊರಬರಲು ಲೋಳೆಸರವನ್ನು ದಿನಕ್ಕೆ ಎರಡು ಚಮಚದಂತೆ ಊಟದ ಮೊದಲು ಸೇವಿಸಬೇಕು. ಹಾಗೆ ನೋವಿರುವ ಜಾಗಕ್ಕೆ ಲೋಳೆಸರವನ್ನು ಹಚ್ಚಿಕೊಂಡರೆ ಕೂಡ ಉತ್ತಮ ಫಲಿತಾಂಶವನ್ನು ಶೀಘ್ರದಲ್ಲಿ ಕಂಡುಕೊಳ್ಳಬಹುದು.

ಮೊಡವೆ ಕಲೆಗಳನ್ನು ಹೋಗಲಾಡಿಸಲು ಲೋಳೆಸರವು ಸಹಕಾರಿಯಾಗಿದೆ. ಮೊಡವೆಯ ಕಲೆಗಳು ಬಿಸಿಲು ಅಥವಾ ಅವುಗಳನ್ನು ಚಿವುಟುದರಿಂದ ತ್ವಚೆಯಲ್ಲಿ ಹಾಗೆ ಉಳಿದುಕೊಂಡಿದ್ದರೆ ರಾತ್ರಿ ಮಲಗುವ ಮುನ್ನ ಲೋಳೆಸರವನ್ನು ಕೊಂಚ ವೃತ್ತಾಕಾರದಲ್ಲಿ ಕಲೆಯ ಮೇಲೆ ಹಚ್ಚಿ ಮಲಗಬೇಕು. ಬೆಳಗ್ಗೆ ತಣ್ಣೀರಿನಿಂದ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಈ ರೀತಿ ಮಾಡುವುದರಿಂದ ನಿಧಾನವಾಗಿ ಮುಖದಲ್ಲಿನ ಮೊಡವೆ ಕಲೆಗಳು ಮಾಯವಾಗುತ್ತದೆ. ಚರ್ಮದ ಬಣ್ಣ ಕುಂದಿರುವ ಸಮಸ್ಯೆ ನಿವಾರಣೆ ಮಾಡಲು ಅರ್ಧ ಲಿಂಬೆ ರಸಕ್ಕೆ ಒಂದು ಚಮಚ ಅಲೋವೆರಾ ಲೋಳೆ ಹಾಕಿಕೊಂಡು ಸರಿಯಾಗಿ ಅದನ್ನು ಮಿಶ್ರಣ ಮಾಡಿ. ಇದರ ಬಳಿಕ ಮುಖಕ್ಕೆ ಹಚ್ಚಿಕೊಳ್ಳಿ.

ಕಣ್ಣಿನ ಕೆಳಗಿನ ಕಪ್ಪುಕಲೆ ನಿವಾರಣೆ

ಇದು ಪ್ರಕೃತಿಯ ಸಹಜ ಬೆಳಕು ಮತ್ತು ಆ್ಯಂಟಿ-ಆ್ಯಕ್ಸಿಡೆಂಟ್​ಗಳಿಂದ ಸಮೃದ್ಧವಾಗಿರುವುದರಿಂದ ಇದು ಕಣ್ಣುಗಳ ಸುತ್ತಲೂ ಇರುವ ತೆಳುವಾದ ಮತ್ತು ಹೆಚ್ಚು ಸೂಕ್ಷ್ಮ ಚರ್ಮಕ್ಕೆ ಹೆಚ್ಚಿನ ಅಪಾಯಗಳನ್ನುಂಟು ಮಾಡದೆ ಕಣ್ಣುಗಳ ಕೆಳಗಿನ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಕಣ್ಣಿನ ಕೆಳಗೆ ಉಂಟಾಗುವ ಕಪ್ಪು ವರ್ತುಲಗಳು,ಕಲೆಗಳನ್ನು ಅಲೋವೆರಾ ಹೋಗಲಾಡಿಸುತ್ತೆ. ಡಾರ್ಕ್​ ಸರ್ಕಲ್ಸ್​​ ಅಷ್ಟೇ ಅಲ್ಲದೇ ಟಿವಿ ಅಥವಾ ಕಂಪ್ಯೂಟರ್‌ನ ದೀರ್ಘಸಮಯ ನೋಡುವುದರಿಂದ ಉಂಟಾಗುವ ಕಣ್ಣಿನ ನೋವನ್ನು ಸಹ ಶಮನಗೊಳಿಸುತ್ತದೆ.

ಶೇವಿಂಗ್ ಅಥವಾ ವ್ಯಾಕ್ಸಿಂಗ್ ನಂತರ ಬಳಸಿ

ಅಲೋವೆರಾ ಜೆಲ್​ ಆ್ಯಂಟಿ ಬ್ಯಾಕ್ಟೀರಿಯಾ, ಆ್ಯಂಟಿ-ಆ್ಯಂಕ್ಸಿಡೆಂಟ್ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಈ ಸೂಕ್ಷ್ಮ ಗಾಯಗಳನ್ನು ಗುಣಪಡಿಸಲು ಮತ್ತು ಶಮನಗೊಳಿಸಲು ಸಹಾಯ ಮಾಡುತ್ತದೆ. ಶೇವಿಂಗ್ ಅಥವಾ ವ್ಯಾಕ್ಸಿಂಗ್ ಮಾಡಲು ಚರ್ಮದ ಮೇಲೆ ಬ್ಲೇಡ್‌ ಬಳಸುವುದರಿಂದ ಅದು ಚರ್ಮಕ್ಕೆ ಹಾನಿಯುಂಟಾಗಬಹುದು ಅಥವಾ ವ್ಯಾಕ್ಸ್​ ಮಾಡುವಾಗ ಗಾಯಗಳುಂಟಾಗಬಹುದು. ಅಲ್ಲದೇ ಇದು ಹೈಡ್ರೇಟರ್​ ಆಗಿರುವುದರಿಂದ ಚರ್ಮವನ್ನು ತಂಪಾಗಿಡುತ್ತದೆ.

ತುರಿಕೆ ಉಂಟಾದ ಜಾಗಕ್ಕೆ ಲೋಳೆಸರದ ರಸವನ್ನು ಹಚ್ಚಿದರೆ ತುರಿಕೆ ಶಮನ

ಬೇಸಗೆಯಲ್ಲಿ ಹೆಚ್ಚಾಗಿರುವ ಬೆವರಿನಿಂದ ಚರ್ಮದಲ್ಲಿ ಸಾಮಾನ್ಯವಾಗಿ ತುರಿಕೆ ಉಂಟಾಗುತ್ತದೆ. ತ್ವಚೆಯ ತೇವವೂ ಹೆಚ್ಚಾಗುವ ಪರಿಣಾಮ ತುರಿಕೆ ಕಾಣಿಸುವುದು ಮತ್ತು ಬಿಗಿಯಾದ ಬಟ್ಟೆ ಹಾಕಿಕೊಂಡಾಗ ಇದು ಬೆವರಿಗೆ ದೇಹಕ್ಕೆ ಅಂಟಿಕೊಂಡರೆ ತುರಿಕೆ ಸಮಸ್ಯೆ ಎದುರಾಗುತ್ತದೆ. ತುರಿಕೆ ಉಂಟಾದ ಜಾಗಕ್ಕೆ ಲೋಳೆಸರದ ರಸವನ್ನು ಹಚ್ಚಿದರೆ ತುರಿಕೆ ಶಮನವಾಗುತ್ತದೆ…..