Breaking News

ಮುಂಜಾನೆ ಕೆಲವು ವಸ್ತುಗಳನ್ನ ನೋಡುವುದು ತುಂಬಾ ಶುಭ..!

ಈ ವಸ್ತುಗಳನ್ನು ನೋಡಿದರೆ ಅದೃಷ್ಟ....

SHARE......LIKE......COMMENT......

ಧರ್ಮ-ಜ್ಯೋತಿ:

ಜ್ಯೋತಿಷ್ಯದ ಪ್ರಕಾರ, ಕೆಲವು ವಸ್ತುಗಳ ನೋಟ ಮತ್ತು ಉಪಸ್ಥಿತಿಯನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಮುಂಜಾನೆ ಕೆಲವು ವಸ್ತುಗಳನ್ನು ನೋಡುವುದನ್ನು ತುಂಬಾ ಶುಭ ಎಂದು ಹೇಳಲಾಗುತ್ತದೆ.

ಅದೃಷ್ಟದ ಚಿಹ್ನೆ:

ಜ್ಯೋತಿಷ್ಯದಲ್ಲಿ, ಬೆಳಿಗ್ಗೆ ಕೆಲವು ವಸ್ತುಗಳನ್ನು ನೋಡುವುದು ತುಂಬಾ ಮಂಗಳಕರವೆಂದು ನಂಬಲಾಗಿದೆ. ಮುಂಜಾನೆ ಕಣ್ಣಿಗೆ ಕಾಣುವ ಕೆಲವು ವಸ್ತುಗಳು ಅದೃಷ್ಯವನ್ನು ಹೊತ್ತು ತರುತ್ತವೆ, ಆ ವಸ್ತುಗಳನ್ನು ನೋಡುವುದರಿಂದ ಇಡೀ ದಿನ ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ ಇದು ತಾಯಿ ಲಕ್ಷ್ಮಿದೇವಿಯ ಆಶೀರ್ವಾದದ ಪ್ರತೀಕ ಎಂದೂ ಸಹ ನಂಬಲಾಗಿದೆ.

ವ್ಯಕ್ತಿಯು ಬೆಳಿಗ್ಗೆ ಕಣ್ಣು ತೆರೆದ ತಕ್ಷಣ ತನ್ನ ಎರಡೂ ಅಂಗೈಗಳನ್ನು ನೋಡಬೇಕು ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಇದಕ್ಕೆ ಮುಖ್ಯ ಕಾರಣ ಅಂಗೈಯಲ್ಲಿ ತಾಯಿ ಸರಸ್ವತಿಯ ಜೊತೆಗೆ ಬ್ರಹ್ಮ ಮತ್ತು ಲಕ್ಷ್ಮಿ ನಮ್ಮ ಕೈಯಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. ಬೆಳಿಗ್ಗೆ ಎದ್ದು ಕಣ್ಣು ಬಿಟ್ಟೊಡನೆ ಅಂಗೈಗಳನ್ನು ನೋಡುವ ವ್ಯಕ್ತಿಯು ಜೀವನದಲ್ಲಿ ಸಂತೋಷ, ಸಮೃದ್ಧ ಮತ್ತು ಅದೃಷ್ಟವನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ಇದಲ್ಲದೆ ಮುಂಜಾನೆ ಕೆಲವು ವಸ್ತುಗಳನ್ನು ನೋಡುವುದು ಸಹ ಮಂಗಳಕರ ಎಂದು ಹೇಳಲಾಗುತ್ತದೆ. ಅವು ಯಾವುವು ಎಂದು ತಿಳಿಯೋಣ…

ಮುಂಜಾನೆ ಈ ವಸ್ತುಗಳನ್ನು ನೋಡುವುದು ಮಂಗಳಕರ :-

* ಬೆಳಗ್ಗೆ ಕಣ್ಣು ತೆರೆದ ತಕ್ಷಣ ಹಕ್ಕಿಗಳ ಚಿಲಿಪಿಲಿ ಸದ್ದು ಕೇಳಿಸತೊಡಗಿದರೆ ದಿನದ ಆರಂಭ ಚೆನ್ನಾಗಿಯೇ ಇರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ.

* ಮುಂಜಾನೆ, ವಿವಾಹಿತ ಮಹಿಳೆ ಕೈಯಲ್ಲಿ ಪೂಜೆಯ ತಟ್ಟೆಯನ್ನು ಹಿಡಿದಿರುವುದನ್ನು ನೀವು ನೋಡಿದರೆ, ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನೀವು ಕೆಲವು ದೊಡ್ಡ ಕೆಲಸವನ್ನು ಪಡೆಯಲಿದ್ದೀರಿ ಎಂಬುದನ್ನು ಇದು ಸೂಚಿಸುತ್ತದೆ.

* ಮುಂಜಾನೆ ಬಿಳಿ ಹೂವುಗಳು, ಆನೆಗಳು ಇತ್ಯಾದಿಗಳನ್ನು ನೋಡುವುದು ಸಹ ಮಂಗಳಕರವಾಗಿದೆ. ಇಂತಹವುಗಳನ್ನು ನೋಡುವುದರಿಂದ ತಾಯಿ ಲಕ್ಷ್ಮಿಯ ಕೃಪೆಯು ವ್ಯಕ್ತಿಯ ಮೇಲೆ ಉಳಿಯುತ್ತದೆ ಎನ್ನಲಾಗುತ್ತದೆ…..