Breaking News

ತೀವ್ರ ಜ್ವರದ ಕಾರಣದಿಂದ ಆಸ್ಪತ್ರೆಗೆ ಮಾಜಿ ಸಿಎಂ ಎಸ್​ಎಂ ಕೃಷ್ಣ..!

ಮಣಿಪಾಲ್​​ ಆಸ್ಪತ್ರೆಯಲ್ಲಿ ಮಾಜಿ ಸಿಎಂ ದಾಖಲು….

SHARE......LIKE......COMMENT......

ಬೆಂಗಳೂರು:

ಮಾಜಿ ಸಿಎಂ ಎಸ್​ಎಂ ಕೃಷ್ಣ ತೀವ್ರ ಜ್ವರದ ಕಾರಣದಿಂದ ಮಣಿಪಾಲ್​​ ಆಸ್ಪತ್ರೆಗೆ ದಾಖಲಾಗಿದ್ಧಾರೆ. ಎಸ್​.ಎಂ.ಕೃಷ್ಣ ಅವರು ಕಳೆದ ರಾತ್ರಿ 10.45ರ ಸುಮಾರಿಗೆ ಮಣಿಪಾಲ್​ ಆಸ್ಪತ್ರೆಗೆ ದಾಖಲಾಗಿದ್ದು, ಮೊದಲು ವೈದೇಹಿ ಆಸ್ಪತ್ರೆಗೆ ದಾಖಲಾಗಿದ್ದು, ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್​ ಆಸ್ಪತ್ರೆಗೆ ದಾಖಲಾಗಿದ್ಧಾರೆ.

ಬೆಳಗ್ಗೆ 11 ಗಂಟೆ ಸುಮಾರಿಗೆ ಹೆಲ್ತ್​​​ ಬುಲೆಟಿನ್​​​​​ ರಿಲೀಸ್ ಸಾಧ್ಯತೆಗಳಿವೆ. ಹೆಲ್ತ್​​​ ಬುಲೆಟಿನ್​​ ರಿಲೀಸ್ ಮಾಡಲು ಮಣಿಪಾಲ್​​ ವೈದ್ಯರ ಸಿದ್ಧತೆ ಮಾಡಿಕೊಂಡಿದ್ಧಾರೆ. ಸಚಿವ ಡಾ.ಸುಧಾಕರ್​​ ಎಸ್​.ಎಂ.ಕೃಷ್ಣ ಆರೋಗ್ಯದ ಮಾಹಿತಿ ಪಡೆದಿದ್ಧಾರೆ. ಕೃಷ್ಣ ಅವರಿಗೆ ಸ್ವಲ್ಪ ಪ್ರಮಾಣದ ಉಸಿರಾಟ ಸಮಸ್ಯೆ ಇದೆ. ಶ್ವಾಸಕೋಶ ತಜ್ಞ ಡಾಕ್ಟರ್​​​​​ ಸತ್ಯನಾರಾಯಣ ಮೈಸೂರು ತಂಡ ಟ್ರೀಟ್ ಮಾಡ್ತಿದೆ, ICU ಹೆಚ್​ಓಡಿ ಸುನಿಲ್​​​ ಕಾರಂತ್​​​​ ತಂಡವೂ ಚಿಕಿತ್ಸೆಗೆ ಸಾಥ್​ ನೀಡಿದೆ. ಎಸ್​ಎಂ ಕೃಷ್ಣ ಅವರಿಗೆ ಕನಿಷ್ಟ ಉಸಿರಾಟ ವ್ಯವಸ್ಥೆ ಮಾಡಲಾಗಿದೆ. ವೈದ್ಯರಿಂದ ಕ್ಷಣ-ಕ್ಷಣದ ಮಾಹಿತಿ ಪಡೆಯುತ್ತಿರುವೆ. ಎಸ್​.ಎಂ.ಕೃಷ್ಣ ಲವಲವಿಕೆಯಿಂದಲೇ ಇದ್ದಾರೆ ಎಂದು ಮಾಹಿತಿ ನೀಡಿದ್ಧಾರೆ……