ದೈವ ಸನ್ನಿಧಿ:
ಕೆಲವರ ರಾಶಿಗಳಿಗೆ ಕೆಲವು ತಿಂಗಳುಗಳು ಸೂಕ್ತವಾಗಿರುತ್ತದೆ. ಸಕಾರಾತ್ಮಕವಾಗಿ ಪರಿಣಾಮ ಬೀರುವುದು ಒಂದೆಡೆಯಾದ್ರೆ ನಕಾರಾತ್ಮಕವಾಗಿ ಪ್ರಭಾವಗಳು ಬೀರುತ್ತವೆ. ಇನ್ನು ಜೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಂದು ರಾಶಿಯವರ ಮೇಲೆ ಗ್ರಹಗಳ ಸಕಾರಾತ್ಮಕ ಪ್ರಭಾವದಿಂದ ಸಂಪತ್ತಿನ ಮಳೆಯೇ ಸುರಿಯುತ್ತದೆ.
ಇನ್ನು ಅಕ್ಟೋಬರ್ ತಿಂಗಳಿನಲ್ಲಿ ಮೂರು ರಾಶಿಗಳ ಮೇಲೆ ಕುಬೇರನ ಆಶೀರ್ವಾದ ಹೆಚ್ಚಾಗಿದ್ದು, ಅದೃಷ್ಟದ ಜೊತೆ ಹಣದ ಹೊಳೆ ಸುರಿಯುತ್ತದೆ. ವೃಷಭ, ಧನು ಮತ್ತು ಮೀನ ರಾಶಿಯವರಿಗೆ ಸಂಪತ್ತಿನ ಮಳೆಯಾಗಲಿದೆ. ಆದರೆ ಕೆಲವೊಂದು ಅಡೆತಡೆಗಳೂ ಇದರ ಜೊತೆ ಇದೆ.
ವೃಷಭ ರಾಶಿಯವರು ಕೆಲಸದ ಸ್ಥಳದಲ್ಲಿ ಹಣಕಾಸಿನ ಕೆಲಸಗಳನ್ನು ಮುನ್ನಡೆಸಲಿದ್ದಾರೆ. ಇದರ ಜೊತೆಗೆ ವ್ಯಾಪಾರಸ್ಥರು ಭಾರೀ ಲಾಭವನ್ನು ಪಡೆಯುತ್ತಾರೆ. ಸಹೋದ್ಯೋಗಿಗಳ ಬೆಂಬಲವೂ ಈ ರಾಶಿಯವರಿಗೆ ಸಿಗಲಿದೆ. ಈ ಎಲ್ಲಾ ಒಳಿತಿಗೆ ಮುನ್ನ ದುರ್ಗಾ ದೇವಸ್ಥಾನದಲ್ಲಿ ದುರ್ಗಾ ಚಾಲೀಸಾ ಪಠಣೆ ಮಾಡಬೇಕು.
ಇನ್ನು ಧನು ರಾಶಿಯವರು ಸಹ ಆರ್ಥಿಕ ಲಾಭ ಪಡೆಯಲಿದ್ದಾರೆ. ಉದ್ಯಮದಲ್ಲಿ ಯಶಸ್ಸು ಆತ್ಮವಿಶ್ವಾಸ ಹೆಚ್ಚಾಗಲಿದೆ. ವೃತ್ತಿಯಲ್ಲಿ ನಿರೀಕ್ಷಿಸದ ಲಾಭವೂ ಬರಲಿದೆ. ಕುಬೇರನ ಕೃಪೆ ನಿಮ್ಮ ಮೇಲಿರುವ ಕಾರಣ ಈ ಅಭಿವೃದ್ಧಿ ಕಾಣಲಿದ್ದೀರಿ.
ಮೀನ ರಾಶಿಯವರು ಸಹ ಎಂದೂ ಕಾಣದ ಆರ್ಥಿಕ ಲಾಭ ಗಳಿಸಲಿದ್ದೀರಿ. ಜೊತೆಗೆ ಕಚೇರಿಯಲ್ಲಿ ಜವಾಬ್ದಾರಿಯುತ ಸ್ಥಾನವನ್ನು ಪಡೆಯಲಿದ್ದೀರಿ. ಹೊಸ ಹೊಸ ಅವಕಾಶಗಳು ಅರಸಿಕೊಂಡು ಬರಲಿವೆ……