Breaking News

ಒಂದು ರೂಪಾಯಿ ನೋಟು ಇದ್ದರೆ ಕುಳಿತಲ್ಲೇ ಹಣ ಗಳಿಸುವ ಅವಕಾಶ..!

ಈ ನೋಟನ್ನು ಆನ್‌ಲೈನ್‌ನಲ್ಲಿ ಹೀಗೆ ಮಾರಾಟ ಮಾಡಿ....

SHARE......LIKE......COMMENT......

ಬೆಂಗಳೂರು :

ಹೆಚ್ಚು ಶ್ರಮ ಪಡದೇ ಕುಳಿತಲ್ಲೇ ಹಣ ಗಳಿಸುವ ಅವಕಾಶ ಇಲ್ಲಿದೆ. ಮನೆಯಿಂದ ಹೊರಗೆ ಕಾಲಿಡದೆಯೇ ನೀವು ಮಿಲಿಯನೇರ್ ಆಗಬಹುದಾದಂತಹ ಅದ್ಭುತ ಅವಕಾಶ ಇದಾಗಿರಲಿದೆ. ಪ್ರತಿಯೊಂದು ನೋಟು ತನ್ನದೇ ಆದ ವಿಶಶೇಷತೆ ಮತ್ತು ವಿಶಿಷ್ಟ ಮೌಲ್ಯವನ್ನು ಹೊಂದಿದೆ. ಒಂದು ರೂಪಾಯಿ ನೋಟು ಹೊರತು ಪಡಿಸಿ ಉಳಿದ ಎಲ್ಲಾ ನೋಟುಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಜವಾಬ್ದಾರರಾಗಿರುತ್ತಾರೆ. ಯಾಕೆಂದರೆ ಕೇವಲ ಒಂದು ರೂಪಾಯಿ ನೋಟಿನಲ್ಲಿ ಮಾತ್ರ ಭಾರತದ ಹಣಕಾಸು ಸಚಿವರ ಸಹಿ ಇರುತ್ತದೆ.

ಈ ವಿಶೇಷ ನೋಟನ್ನು ಆನ್‌ಲೈನ್‌ನಲ್ಲಿ ಹೀಗೆ ಮಾರಾಟ ಮಾಡಿ :

ಈ ವಿಶೇಷ ಒಂದು ರೂಪಾಯಿ ನೋಟು ನಿಮ್ಮ ಬಳಿ ಇದ್ದರೆ ಮನೆಯಲ್ಲಿ ಕುಳಿತು ಲಕ್ಷಗಟ್ಟಲೆ ಹಣ ಸಂಪಾದಿಸಬಹುದು. ಕೆಲವೊಂದು ವಸ್ತುಗಳು ಹಳೆಯದಾದಂತೆ ಪ್ರಾಚೀನ ವಸ್ತುಗಳ ವರ್ಗಕ್ಕೆ ಸೇರುತ್ತವೆ. ಇದಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕೂಡಾ ಹೆಚ್ಚಿರುತ್ತದೆ. ಇಂತಹ ಅಪರೂಪದ ನೋಟು ಮತ್ತು ನಾಣ್ಯಗಳನ್ನು ಹರಾಜು ಹಾಕುವ ಕೆಲಸವನ್ನು ಹಲವು ವೆಬ್ ಸೈಟ್ ಗಳು ಮಾಡುತ್ತವೆ. OLX ಇಂತಹ ವೆಬ್ ಸೈಟ್ ಗಳಲ್ಲಿ ಒಂದು. ಇಲ್ಲಿ ನಿಮ್ಮ ಲಾಗಿನ್ ಐಡಿಯನ್ನು ರಚಿಸಿ, ನಿಮ್ಮ ನಾಣ್ಯವನ್ನು ಹರಾಜು ಹಾಕಬೇಕು. ಅಲ್ಲದೆ indiamart.com ನಲ್ಲಿ ಕೂಡಾ ತಮ್ಮ ಐಡಿಯನ್ನು ರಚಿಸುವ ಮೂಲಕ ನಾಣ್ಯಗಳನ್ನು ಮತ್ತು ನೋಟುಗಳನ್ನು ಹರಾಜು ಮಾಡಬಹುದು. ಹರಾಜಿಗಾಗಿ ನಿಮ್ಮ ಬಳಿಯಿರುವ ನಾಣ್ಯ ಮತ್ತು ನೋಟಿನ ಫೋಟೋವನ್ನು ಶೇರ್ ಮಾಡಬೇಕಾಗುತ್ತದೆ.

ನಿಮ್ಮಲ್ಲಿ ಹಳೆಯ ನೋಟು ಇದ್ದು, ನೀವು ಅದೃಷ್ಟವಂತರಾಗಿದ್ದರೆ, ಖರೀದಿದಾರರು ನಿಮ್ಮನ್ನು ನೇರವಾಗಿ ಸಂಪರ್ಕಿಸುತ್ತಾರೆ. ಅಲ್ಲಿಂದ ನೀವು ಪಾವತಿ ಮತ್ತು ವಿತರಣೆಯ ನಿಯಮಗಳ ಪ್ರಕಾರ ನಿಮ್ಮ ನಾಣ್ಯ ಅಥವಾ ನೋಟನ್ನು ಮಾರಾಟ ಮಾಡಬಹುದು.

ನೋಟು ಮಾರಾಟ ಮಾಡುವ ವಿಧಾನ :

ಹಂತ 1: www.olx.com ಗೆ ಹೋಗಿ .

ಹಂತ 2: ವೆಬ್‌ಸೈಟ್‌ನಲ್ಲಿ ನಿಮ್ಮನ್ನು ‘ಮಾರಾಟಗಾರ’ ಎಂದು ನೋಂದಾಯಿಸಿಕೊಳ್ಳಿ . , ನೀವು ಈಗಾಗಲೇ ಪ್ಲಾಟ್‌ಫಾರ್ಮ್‌ನಲ್ಲಿ ನೋಂದಾಯಿತ ಮಾರಾಟಗಾರರಾಗಿದ್ದರೆ, ನೇರವಾಗಿ ಲಾಗ್ ಇನ್ ಮಾಡಬಹುದು.

ಹಂತ 3: ಲಾಗಿನ್ ಆದ ನಂತರ, ನೋಟ್ ಗಾಗಿ ಲಿಸ್ಟ್ ಮಾಡಬೇಕಾಗುತ್ತದೆ. ಇಲ್ಲಿ ನೋಟಿನ ಸ್ಪಷ್ಟ ಚಿತ್ರವನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ನೀವು ನೋಟು ಮಾರಾಟ ಮಾಡಲು ಬಯಸುವ ಬೆಲೆಯನ್ನು ಸಹ ಇಲ್ಲಿ ನಮೂದಿಸಬೇಕಾಗುತ್ತದೆ.

ಹಂತ 4: ಒಮ್ಮೆ ನಿಮ್ಮ ಲಿಸ್ಟ್ ಲೈವ್ ಆದರೆ ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು ಸಂಗ್ರಹಿಸಲು ಇಷ್ಟಪಡುವ ಜನರು ನಿಮ್ಮನ್ನು ಸಂಪರ್ಕಿಸಲು ಪ್ರಾರಂಭಿಸುತ್ತಾರೆ.

ಹಂತ 5: ನಿಮ್ಮ ನಾಣ್ಯವನ್ನು ಬಯಸಿದ ಬೆಲೆಗೆ ಮಾರಾಟ ಮಾಡಬೇಕಾದರೆ ನೀವು ಖರೀದಿದಾರರೊಂದಿಗೆ ಮಾತುಕತೆ ನಡೆಸಬಹುದು.

ಮೊದಲ ಒಂದು ರೂಪಾಯಿ ನೋಟು ಮುದ್ರಣವಾದದ್ದು ಯಾವಾಗ ? :

1917 ರ ನವೆಂಬರ್ 30 ರಂದು ಮೊದಲ ರುಪಾಯಿ ನೋಟು ಮುದ್ರಿಸಲಾಯಿತು ಮತ್ತು ಆ ನೋಟಿನಲ್ಲಿ ಕಿಂಗ್ ಜಾರ್ಜ್ V ರ ಚಿತ್ರವಿತ್ತು. ಮಾಧ್ಯಮ ವರದಿಗಳ ಪ್ರಕಾರ, 1926 ರಲ್ಲಿ ಒಂದು ರೂಪಾಯಿ ನೋಟಿನ ಮುದ್ರಣವನ್ನು ನಿಲ್ಲಿಸಲಾಯಿತು. ನಂತರ 1940 ರಲ್ಲಿ ಮತ್ತೆ ನೋಟಿನ ಮುದ್ರಣವನ್ನು ಪ್ರಾರಂಭ ಮಾಡಲಾಯಿತಾದರೂ 1994 ರಲ್ಲಿ ಮತ್ತೆ ಅದನ್ನು ಸ್ಥಗಿತಗೊಳಿಸಲಾಯಿತು. ಆದರೆ 1 ಜನವರಿ 2015 ರಂದು ಮತ್ತೆ ಮುದ್ರಣವನ್ನು ಪ್ರಾರಂಭಿಸಲಾಯಿತು……