Breaking News

ಕಣ್ಣಿನಿಂದ 23 ಕಾಂಟ್ಯಾಕ್ಟ್ ಲೆನ್ಸ್​ಗಳನ್ನು ಹೊರತೆಗೆದ ವೈದ್ಯರು..!

3 ಮಿಲಿಯನ್​ ಜನರು ವೀಕ್ಷಿಸಿರುವ ಈ ವಿಡಿಯೋ ವೈರಲ್....

SHARE......LIKE......COMMENT......

ಬೆಂಗಳೂರು:

ಕೆಲವರು ಕನ್ನಡಕದ ಬದಲಾಗಿ ಕಾಂಟ್ಯಾಕ್ಟ್​ ಲೆನ್ಸ್​ ಹಾಕಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಲೆನ್ಸ್​ ಹಾಕಿಕೊಳ್ಳಬೇಕೆಂದರೆ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಲೇಬೇಕು. ಇಲ್ಲವಾದಲ್ಲಿ ಕಣ್ಣಿಗೆ ತೊಂದರೆಯಾಗುವ ಅಪಾಯವಿರುತ್ತದೆ. ಇಲ್ಲೊಬ್ಬ ಹಿರಿಯ ಮಹಿಳೆ ಡಾ. ಕ್ಯಾಟರೀನಾ ಕುರ್ಟೀವಾ ಎಂಬ ಕಣ್ಣಿನ ಡಾಕ್ಟರ್​ ಬಳಿ ಹೋಗಿದ್ದಾರೆ. ಆಗ ಡಾಕ್ಟರ್​ ಆಕೆಯ ಕಣ್ಣನ್ನು ಪರೀಕ್ಷಿಸಿದಾಗ ಒಳಗೆ ಲೆನ್ಸ್​ ಇರುವುದು ಪತ್ತೆಯಾಗಿದೆ. ಆಕೆಯ ಕಣ್ಣಿನಿಂದ ಒಂದೊಂದೇ ಲೆನ್ಸ್​ಗಳನ್ನು ತೆಗೆಯಲು ಶುರುಮಾಡಿದ್ದಾರೆ. ಎಣಿಸುತ್ತ ಹೋದರೆ ಒಂದಲ್ಲ ಎರಡಲ್ಲ ಬರೋಬ್ಬರಿ 23 ಲೆನ್ಸ್​ಗಳು! ಎಂಥ ಆತಂಕಕಾರಿ ವಿಷಯವಿದು. 3 ಮಿಲಿಯನ್​ ಜನರು ವೀಕ್ಷಿಸಿರುವ ಈ ವಿಡಿಯೋ ಇದೀಗ ವೈರಲ್ ಆಗಿದೆ.

https://www.instagram.com/reel/Cic7MNMMc_i/?utm_source=ig_web_copy_link

ಈ ಮಹಿಳೆ 23 ದಿನಗಳ ತನಕ ರಾತ್ರಿ ಮಲಗುವಾಗ ಲೆನ್ಸ್​ ತೆಗೆದಿಡುವುದನ್ನು ಮರೆತು ಹಾಗೇ ಮಲಗಿದ್ದಾರೆ. ಆದರೆ ಪ್ರತೀ ದಿನ ಬೆಳಗ್ಗೆ ಹೊಸ ಲೆನ್ಸ್​ ಹಾಕಿಕೊಳ್ಳುವುದನ್ನು ಮಾತ್ರ ಮರೆತಿಲ್ಲ! ಆ ಎಲ್ಲ ಲೆನ್ಸ್​ಗಳು ಕಣ್ಣುಗಳಲ್ಲಿ ಸಂಗ್ರಹವಾಗಿ ತೊಂದರೆ ಕೊಡಲಾರಂಭಿಸಿವೆ. ಆಗ ಡಾಕ್ಟರ್​ ಬಳಿ ಈಕೆ ಓಡಿದ್ದಾರೆ.

ಡಾ. ಕ್ಯಾಟರೀನಾ ತಮ್ಮ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಅಪ್​ಲೋಡ್ ಮಾಡಿದ್ದಾರೆ. ‘ಯಾರೂ ಕಾಂಟ್ಯಾಕ್ಟ್​ ಲೆನ್ಸ್​ ತೆಗೆಯದೇ ಮಲಗಬೇಡಿ. ನೋಡಿ ಈಗ ಈ ಮಹಿಳೆಯ ಪರಿಸ್ಥಿತಿ. ಎಲ್ಲಾ ಲೆನ್ಸ್​ಗಳನ್ನು ಹೊರತೆಗೆದ ಮೇಲೆ ಒಂದಕ್ಕೊಂದು ಅಂಟಿಕೊಂಡಿದ್ದ 23 ಲೆನ್ಸ್​ಗಳನ್ನು ಆಭರಣದಂಗಡಿಯವರು ಉಪಯೋಗಿಸುವ ಫೋರ್ಸೆಪ್ಸ್​ನ ಸಹಾಯದಿಂದ ಬೇರ್ಪಡಿಸಬೇಕಾಯಿತು. ಏಕೆಂದರೆ 23 ದಿನಗಳ ಕಾಲ ಒಂದರ ಮೇಲೆ ಒಂದು ಲೆನ್ಸ್​ ಹಾಕಿಕೊಂಡ ಪರಿಣಾಮ ಆ 23 ಲೆನ್ಸ್​ಗಳು ಕಣ್ಣಗುಡ್ಡೆಯ ಮೇಲೆ ಅಂಟಿಕೊಂಡು ಕುಳಿತಿದ್ದವು ಎಂದಿದ್ದಾರೆ ಕ್ಯಾಟರೀನಾ. ನೆಟ್ಟಿಗರು ಈ ವಿಡಿಯೋ ನೋಡಿ ಗಾಬರಿಗೆ ಬಿದ್ದಿದ್ದಾರೆ ಮತ್ತು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ……