Breaking News

ಆಟೋ ಚಾಲಕರಿಗೆ ಶಾಕಿಂಗ್ ನ್ಯೂಸ್..!

BMRCL ಮಹತ್ವದ ನಿರ್ಧಾರ....

SHARE......LIKE......COMMENT......

ಬೆಂಗಳೂರು :

ಆಟೋ ಚಾಲಕರ ಸುಲಿಗೆಗೆ ನಮ್ಮ ಮೆಟ್ರೋ ನಿಗಮದಿಂದಲೇ ಬ್ರೇಕ್ ಬಿದ್ದಿದೆ. ಬಿಎಂ ಆರ್ ಸಿಎಲ್ ನಿರ್ಧಾರದಿಂದ ಇದೀಗ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಆದರೆ ಆಟೋ ಚಾಲಕರಿಗೆ ಮಾತ್ರ ಈ ನಿರ್ಧಾರ ಶಾಕ್ ನೀಡಿದೆ.

ನಮ್ಮ ಮೆಟ್ರೋ ನಿಲ್ದಾಣದಿಂದ ಕಾರ್ಯಾಚರಿಸುವ ಆಟೋ ಚಾಲಕರಿಗೆ BMRCL ಶಾಕ್ ನೀಡಿದೆ. ಹೌದು, ಇನ್ನು ಮುಂದೆ ಮೆಟ್ರೋ ನಿಲ್ದಾಣದಲ್ಲಿ ಪ್ರೀಪೇಡ್ ಆಟೋ ವ್ಯವಸ್ಥೆ ಮಾಡಲಾಗುವುದು. ಆಟೋ ಚಾಲಕರ ಸುಲಿಗೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬಿಎಂಆರ್ ಸಿಎಲ್ ಈ ನಿರ್ಧಾರ ಕೈಗೊಂಡಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಹೊರ ಬೀಳಲಿದೆ.

ಇನ್ನು ಮುಂದೆ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಪ್ರಿಪೇಯ್ಡ್ ಆಟೋ ಸೇವೆ ಲಭ್ಯವಾಗಲಿದೆ. ಡಿಸೆಂಬರ್ ಒಂದರಿಂದಲೇ ಪ್ರಿಪೇಡ್ ಆಟೋ ಸೇವೆ ಆರಂಭವಾಗುವ ನಿರೀಕ್ಷೆ ಇದೆ. ಬನಶಂಕರಿ, ಬೈಯಪ್ಪನಹಳ್ಳಿ, ನಾಗಸಂದ್ರ, ಮೆಜೆಸ್ಟಿಕ್ ನಲ್ಲಿ ಪ್ರಾಯೋಗಿಕ ಪ್ರೀ ಪೇಯ್ಡ್ ಆಟೋ ಆರಂಭವಾಗಲಿದೆ.

RTO ನಿಗದಿ ಪಡಿಸಿರುವ ಮೀಟರ್ ದರಕ್ಕೆ ಅನುಗಗುಣವಾಗಿಯೇ ಪ್ರೀ ಪೇಯ್ಡ್ ಆಟೋ ದರ ನಿಗದಿ ಮಾಡಲಾಗುವುದು. ರಾತ್ರಿ ಹೊತ್ತು ಒಂದೂವರೆ ಪಟ್ಟು ದರ ಪಾವತಿಸಬೇಕಾಗುತ್ತದೆ. ನಮ್ಮ ಮೆಟ್ರೋ ಪ್ರಯಾಣಿಕರಿಗೆ ದಿನದ 24 ತಾಸೂ ಕೂಡ ಆಟೋ ಸೇವೆ ಲಭ್ಯವಾಗಲಿದೆ.

RTO ನಿಗದಿ ಮಾಡಿರುವ ಆಟೋ ದರ :

• ಮೊದಲ‌ 1.8kmಗೆ ₹30 ಆಟೋ ಸಾಮಾನ್ಯ ದರ
• ನಂತರದ ಪ್ರತಿ kmಗೆ ₹15 ದರ ನಿಗದಿ
• ಮೊದಲ ಐದು ನಿಮಿಷ ಕಾಯುವಿಕೆ ಉಚಿತ
• ಐದು ನಿಮಿಷದ ಬಳಿಕ ಪ್ರತಿ ನಿಮಿಷಕ್ಕೆ ₹5
• 20 kg ವರೆಗೆ ಲಗೇಜ್ ಸಾಗಣೆ ಉಚಿತ
• 21 kg ಇಂದ 50 kg ವರೆಗೆ ₹5 ದರ ನಿಗದಿ
• ರಾತ್ರಿ ವೇಳೆ ಸಾಮಾನ್ಯ ಮೀಟರ್ ದರ ಮತ್ತು ಅರ್ಧದಷ್ಟು ಹೆಚ್ಚು (₹30+₹15)