Breaking News

ನಾನು ಮತ್ತು ಸುದೀಪ್ ಪರಸ್ಪರ ಪ್ರತಿಸ್ಪರ್ಧಿಗಳು ಅಲ್ಲ..!

ವಿಲನ್ ಹೈಪ್ ಬಗ್ಗೆ ಶಿವಣ್ಣ ಮಾತು ....

SHARE......LIKE......COMMENT......

ಬೆಂಗಳೂರು:

ನಟ ಶಿವರಾಜ್ ಕುಮಾರ್ ವಿಲ್ಲನ್ ಸಿನಿಮಾ ಬಗ್ಗೆ ಸೃಷ್ಟಿಯಾಗಿರುವ ಹೈಪ್ ಬಗ್ಗೆ ಶಿವಣ್ಣ ಮಾತನಾಡಿದ್ದಾರೆ. ಈ ಸಿನಿಮಾ ವಿಚಾರದಲ್ಲಿ ನಾವು ಉತ್ತಮ ದಾರಿಯಲ್ಲಿದ್ದೇವೆ, ಆದರೆ ಪ್ರೇಕ್ಷಕರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಕಷ್ಟ, ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ನೋಡಬೇಕು ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.ಇದೊಂದು ಕಾಲ್ಪನಿಕ ಚಿತ್ರ, ಹೀಗಾಗಿ ಅದನ್ನು ಕಾದು ನಾವು ನೋಡಬೇಕು,
ಇಂದಿನ ಪೀಳಿಗೆ ಹಾಗೂ ಧ್ವನಿ ತಂತ್ರಜ್ಞಾನಕ್ಕೆ   ಈ ಸಿನಿಮಾ ಹೊಂದಿಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಹೀಗಾಗಿ ಸಿನಿಮಾ ಹೆಚ್ಚು ಸದ್ದು ಮಾಡುತ್ತಿದೆ.ಹೀಗಾಗಿ ಅದರ ಮೇಲೆ ನಿರೀಕ್ಷೆಗಳು ಹೆಚ್ಚಿವೆ ಎಂದು ಹೇಳಿದ್ದಾರೆ.ಸುದೀಪ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿರುವ ಬಗ್ಗೆ ಮಾತನಾಡಿದ ಶಿವಣ್ಣಸ ವಿಲ್ಲನ್ ನಲ್ಲಿ ಕೇವಲ 2 ಪಾತ್ರಗಳು ಮಾತ್ರ ಇಲ್ಲ, ಅವರ ಬದ್ಧತೆ ಕೂಡ ಮುಖ್ಯವಾಗಿದೆ. ಯಾವುದೇ ಒಂದು ಅಂಶದಲ್ಲಿ ನಾವಿಬ್ಬರು ಪರಸ್ಪರ ಸ್ಪರ್ಧಿಗಳು ಎಂಬ ಭಾವನೆ ಉಂಟಾಗಿಲ್ಲ,  ನಮ್ಮ ಪಾತ್ರದ ಉದ್ದದ ಬಗ್ಗೆ ಎಂದು ನಾವು ಮಾತನಾಡಿಲ್ಲ, ಕಥೆ ಕೇಳಿದಾಗ ನನ್ನ ಪಾತ್ರಕ್ಕೆ ನಾನು ನ್ಯಾಯ ಒದಗಿಸಬೇಕು ಎಂಬುದಷ್ಟೇ ನನ್ನ ಮನಸಿಗೆ ಬಂತು ಎಂದು ಹೇಳಿದ್ದರು……