Breaking News

ಪ್ರೈವೇಟ್ ಸ್ಕೂಲ್‌ಗೆ ಸರ್ಕಾರ ಖಡಕ್ ವಾರ್ನಿಂಗ್​​​..!

ಶುಲ್ಕ ಹೆಚ್ಚಿಸಿದರೆ ಕಠಿಣ ಕ್ರಮ.....

SHARE......LIKE......COMMENT......

ಬೆಂಗಳೂರು:

ಪ್ರೈವೇಟ್ ಸ್ಕೂಲ್‌ಗೆ ಸರ್ಕಾರ ಖಡಕ್ ವಾರ್ನಿಂಗ್​​​ ಕೊಟ್ಟಿದೆ,ಪ್ರಾಥಮಿಕ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಶೇಖರ್ ಸುತ್ತೋಲೆ ಖಾಸಗಿ ಶಾಲೆಗಳು ಶುಲ್ಕ ಹೆಚ್ಚಿಸಿದ್ರೆ ಕಠಿಣ ಕ್ರಮ ಕೈಗೊಳ್ಳೋದಾಗಿ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿ ಮಹತ್ವದ ಆದೇಶ ಹೊರಡಿಸಿದೆ. ಖಾಸಗಿ ಶಾಲೆಗಳು 2020-21ನೇ ಸಾಲಿನ ಶೈಕ್ಷಣಿಕ ಶುಲ್ಕ ಹೆಚ್ಚಿಸುವಂತಿಲ್ಲ. ಒಂದು ವೇಳೆ ಹೆಚ್ಚಳ ಮಾಡಿದ್ರೆ ಶಿಸ್ತು ಕ್ರಮ ಕೈಗೊಳ್ಳುವ ವಾರ್ನಿಂಗ್​​​​ ನೀಡಿದೆ. ರಾಜ್ಯದ ಎಲ್ಲಾ ಖಾಸಗಿ, ಅನುದಾನಿತ ಶಾಲೆಗಳಿಗೂ ಎಚ್ಚರಿಕೆ ನೀಡಲಾಗಿದೆ. ..ಲಾಕ್ ಡೌನ್ ನಿಂದ ಪೋಷಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಶುಲ್ಕ ಹೆಚ್ಚಳಕ್ಕೆ ಮುಂದಾದ್ರೆ ಕರ್ನಾಟಕ ಶಿಕ್ಷಣ ಕಾಯ್ದೆ 124(ಎ)ರಡಿ ಕ್ರಮ ಕೈಗೊಳ್ಳಬೇಕಾಗಬಹುದು ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಶೇಖರ್ ಸುತ್ತೋಲೆ ಹೊರಡಿಸಿದ್ದಾರೆ…..