Breaking News

ಕೊರೋನಾಗೆ ಮೊದಲ ಶಾಸಕ ಬಲಿ..!

ತಮಿಳುನಾಡಿನ ಡಿಎಂಕೆ ಪಕ್ಷದ ಶಾಸಕ 61 ವರ್ಷದ ಅನ್ಬಳಗನ್​​ ಇನ್ನಿಲ್ಲ.....

SHARE......LIKE......COMMENT......

ಚೆನೈ:

ಕೊರೋನಾಗೆ ದೇಶದಲ್ಲಿ ಮೊದಲ ಶಾಸಕ ಬಲಿಯಾಗಿದ್ದಾರೆ. ತಮಿಳುನಾಡಿನ ಡಿಎಂಕೆ ಪಕ್ಷದ ಹಿರಿಯ ಶಾಸಕ 61 ವರ್ಷದ ಅನ್ಬಳಗನ್​​ ಕೊರೋನಾ ಸೋಂಕಿನಿಂದಾಗಿ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಜೀವ ಬಿಟ್ಟಿದ್ದಾರೆ. ಜೂನ್​​ 2ರಂದು ಅನ್ಬಳಗನ್​ಗೆ ಕೊರೋನಾ ಸೋಂಕು ಹರಡಿತ್ತು . ಜೂನ್​​ 3ರಿಂದ ವೆಂಟಿಲೇಟರ್​​ನಲ್ಲಿದ್ದ ಶಾಸಕ ಅನ್ಬಳಗನ್​ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಸತತ ಮೂರು ಬಾರಿ ಡಿಎಂಕೆಯಿಂದ ಆಯ್ಕೆಯಾಗಿದ್ದ ಅನ್ಬಳಗನ್​​, ಚೆಪಾಕ್​​ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದರು .ವಿಚಿತ್ರ ಅಂದ್ರೆ ಅನ್ಬಳಗನ್​​​​ ಕುಟುಂಬ ಸದಸ್ಯರಿಗೂ ಕೊರೋನಾ ಸೋಂಕು ತಗುಲಿದೆ……