ಸಿನಿಮಾ:
ಎರಡು ದಿನಗಳ ಹಿಂದೆಯಷ್ಟೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಮುಂದಿನ ಸಿನಿಮಾವನ್ನ ಅನೌನ್ಸ್ ಮಾಡೋದಾಗಿ ಹೇಳಿತ್ತು. ಪ್ರಶಾಂತ್ ನೀಲ್- ಪ್ರಭಾಸ್ ಕಾಂಬಿನೇಷನ್ನಲ್ಲೇ ಆ ಸಿನಿಮಾ ಬರುತ್ತೆ ಅನ್ನೋ ಗುಸು ಗುಸು ಕೂಡ ಶುರುವಾಗಿತ್ತು. ಅದು ಈಗ ಪಕ್ಕಾ ಆಗಿದೆ. ಸಲಾರ್ ಟೈಟಲ್ನಲ್ಲಿ ಹೊಂಬಾಳೆ ಸಂಸ್ಥೆ ನೀಲ್- ಪ್ರಭಾಸ್ ಡೆಡ್ಲಿ ಕಾಂಬಿನೇಷನ್ನಲ್ಲಿ ಸಿನಿಮಾ ಅನೌನ್ಸ್ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲೀಗ ಸಲಾರ್ ಸಿನಿಮಾ ಸುದ್ದಿ ಟ್ರೆಂಡ್ ಸೆಟ್ ಮಾಡಿದೆ.
ಉಗ್ರಂ ಮತ್ತು ಕೆಜಿಎಫ್ ಸಿನಿಮಾಗಳಿಂದ ಸಂಚಲನ ಸೃಷ್ಟಿಸಿದ ನಿರ್ದೇಶಕ ಪ್ರಶಾಂತ್ ನೀಲ್.. ಎಲಿವೇಷನ್ ಸೀನ್ಗಳನ್ನ ಕ್ರಿಯೇಟ್ ಮಾಡೋದ್ರಲ್ಲಿ ನೀಲ್ ಮಾಸ್ಟರ್. ಇಂತಹ ನಿರ್ದೇಶಕನಿಗೆ ಪ್ರಭಾಸ್ರಂತಹ ಮಾಸ್ ಹೀರೋ ಸಿಕ್ರೇ ಕೇಳ್ಬೇಕಾ..? ಇತ್ತೀಚೆಗೆ ಹೈದರಾಬಾದ್ನಲ್ಲಿ ಸದ್ದಿಲ್ಲದೇ ಸಲಾರ್ ಚಿತ್ರಕ್ಕಾಗಿ ಫೋಟೋಶೂಟ್ ಮಾಡಿ ಮುಗಿಸಿದ್ದಾರೆ ಕೆಜಿಎಫ್ ಸಾರಥಿ. ಫೋಟೋಶೂಟ್ನಲ್ಲೇ ನೀಲ್ ಟೇಕಿಂಗ್ ನೋಡಿ ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಕಳ್ದೋಗಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮತ್ತು ಪ್ರಶಾಂತ್ ನೀಲ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್. ಏಕಕಾಲಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ಚಿತ್ರವನ್ನ ನಿರ್ಮಿಸಿ, ಉಳಿದ ಭಾಷೆಗಳಿಗೆ ಡಬ್ ಮಾಡಲಾಗ್ತಿದೆ.. ಈ ಮೂಲಕ ಪ್ರಭಾಸ್ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡ್ತಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ಸಲಾರ್ ಸಿಕಂದರ್ ಅನ್ನೋ ಪಾತ್ರ ಮಾಡ್ತಿದ್ದಾರೆ ಅನ್ನಲಾಗ್ತಿದೆ. ಅಂದ್ಹಾಗೇ ಉರ್ದು ಭಾಷೆಯಲ್ಲಿ ಸಲಾರ್ ಅಂದ್ರೆ, ಲೀಡರ್ ಅನ್ನೋ ಅರ್ಥ ಇದೆ.. ಅಲ್ಲಿಗೆ ಇವನೆಂಥಾ ಲೀಡರ್ ಇರಬಹುದು ಅನ್ನೋದನ್ನ ನೀವೇ ಊಹಿಸಿ.. ಇನ್ನು ಪೋಸ್ಟರ್ನಲ್ಲಿ ಹುರಿ ಮೀಸೆ ಹೊತ್ತು ಗನ್ ಹಿಡಿದು ಕುಳಿತ ಪ್ರಭಾಸ್ ಲುಕ್ ಹುಬ್ಬೇರಿಸುವಂತಿದೆ……