Breaking News

ಉಗ್ರ ಹಫೀಜ್‌ ಆಸ್ತಿಯನ್ನ ಇಡಿ ಮುಟ್ಟುಗೋಲು..!

73.12 ಲಕ್ಷ ರೂ. ಮೌಲ್ಯದ ಆಸ್ತಿ ಜಪ್ತಿ.....

SHARE......LIKE......COMMENT......

ದೇಶ-ವಿದೇಶ:

ಉಗ್ರರಿಗೆ ಹಣಕಾಸು ನೆರವು ಮತ್ತು ಅಕ್ರಮ ಹಣ ವರ್ಗಾವಣೆ ಕೇಸ್​​ನಡಿ ಜಾಗತಿಕ ಉಗ್ರ ಹಫೀಜ್‌ ಸಯೀದ್‌ಗೆ ಸೇರಿದ 73.12 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಮುಂಬೈ ದಾಳಿಯ ಮಾಸ್ಟರ್​ ಮೈಂಡ್​ ಸಯೀದ್​ ಹಫೀಜ್​ ಲಷ್ಕರ್​-ಇ ತೊಯ್ಬಾ, ಜಮಾತ್​ ಉದ್​​ ದಾವಾ ಉಗ್ರ ಸಂಘಟನೆಗಳ ಉಗ್ರರಿಗೆ ಹಣಕಾಸು ನೆರವು ಒದಗಿಸುತ್ತಿದ್ದ. ಅಲ್ದೇ, ಮೊಹಮದ್‌ ಸಲ್ಮಾನ್‌ ಮತ್ತು ಆತನ ಕುಟುಂಬ ಸದಸ್ಯರ ಹೆಸ್ರಲ್ಲಿ ಮಾಡಿದ್ದ ಬೇನಾಮಿ ಆಸ್ತಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಇನ್ನು ಕೇಸ್​ನಲ್ಲಿ ವಿವಾದಿತ ಇಸ್ಲಾಮಿಕ್‌ ಪ್ರವಚನಕಾರ ಜಾಕೀರ್‌ ನಾಯ್ಕ್‌ ವಿರುದ್ಧ ಇ.ಡಿ ಆರೋಪ ಪಟ್ಟಿ ಸಲ್ಲಿಸಿದೆ. ಅಕ್ರಮ ಹಣ ವರ್ಗಾವಣೆ ತಡೆಗಟ್ಟುವಿಕೆ ಕಾಯಿದೆಯಡಿ ಮುಂಬಯಿನ ವಿಶೇಷ ನ್ಯಾಯಾಲಯದಲ್ಲಿ ಇ.ಡಿ. ಆರೋಪ ಪಟ್ಟಿ ದಾಖಲಿಸಿದ್ದು, 193.06 ಕೋಟಿ ಮೌಲ್ಯದ ಅಕ್ರಮ ವ್ಯವಹಾರವನ್ನು ಗುರುತಿಸಲಾಗಿದೆ.ಅಲ್ದೇ, 2016ರಲ್ಲಿ ಇಡಿ ಜಾಕಿರ್​ ವಿರುದ್ಧ 2016ರಲ್ಲೇ ಅಕ್ರಮ ಹಣ ವರ್ಗಾವಣೆ ಕೇಸ್​ ದಾಖಲಿಸಿತ್ತು……