Breaking News

ಎಸ್ಟಿ ಮೀಸಲಾತಿ ಹೆಚ್ಚಿಸಲು ಅಧಿವೇಶನದಲ್ಲಿ ಧ್ವನಿ..!

ಶೇ.7.5ರಷ್ಟು ಮೀಸಲಾತಿ ಹೆಚ್ಚಿಸುವವರೆಗೂ ಹೋರಾಟ....

SHARE......LIKE......COMMENT......

ಹರಪನಹಳ್ಳಿ: 

ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಸಂಬಂಧ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು. ಪಟ್ಟಣದ ವಾಲ್ಮೀಕಿ ನಗರದ ಹಾಲಸ್ವಾಮಿ ಮಠದ ಮುಂಭಾಗ ವಾಲ್ಮೀಕಿ ಜಯಂತ್ಯುತ್ಸವ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ಮೀಸಲಾತಿ ಹೆಚ್ಚಳಕ್ಕಾಗಿ ಹಿಂದಿನಿಂದಲೂ ಹೋರಾಟ ಮಾಡುತ್ತಿದ್ದೇನೆ. ನಾನು ಸಹ ನಾಯಕ ಸಮುದಾಯದಲ್ಲಿ ಜನಿಸಿದ್ದು ಶೇ.7.5ರಷ್ಟು ಮೀಸಲಾತಿ ಹೆಚ್ಚಿಸುವವರೆಗೂ ನಿರಂತರ ಹೋರಾಟ ಮಾಡುತ್ತೇನೆ ಎಂದರು. ಸುಳ್ಳು ಪ್ರಮಾಣ ಪತ್ರ ಪಡೆದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸುವುದಾಗಿ ಹೇಳಿದ ಅವರು, ಬಳ್ಳಾರಿ ಜಿಲ್ಲೆ ಉಪಚುನಾವಣೆ ಹಿನ್ನೆಲೆಯಲ್ಲಿ ಕೂಡ್ಲಿಗಿ ಉಸ್ತುವಾರಿ ವಹಿಸಿ ಪ್ರಚಾರ ಕೈಗೊಂಡಿದ್ದೇನೆ. ಬಿಜೆಪಿಗೆ ಉತ್ತಮ ಬೆಂಬಲವಿದ್ದು ಗೆಲುವು ಖಚಿತ ಎಂದು ತಿಳಿಸಿದರು.

ಧಾರವಾಡದಲ್ಲಿ ವಾಲ್ಮೀಕಿ ಸಮಾಜದ 40 ಎಕರೆ ಜಮೀನು ಕಬಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ಸಮುದಾಯಕ್ಕೆ ಸೇರಿದ ಜಾಗ ಎಲ್ಲಿಯೇ ಇದ್ದರೂ ಅದನ್ನು ಉಳಿಸಲು ಕಾನೂನಾತ್ಮಕ ಹೋರಾಟಕ್ಕೆ ಸಿದ್ಧವಿರುವುದಾಗಿ ತಿಳಿಸಿದರು.

ಸಣ್ಣಹಾಲಸ್ವಾಮೀಜಿ ಶ್ರೀಮಠದ ಬಳಿ ಮಹರ್ಷಿ ವಾಲ್ಮೀಕಿ ನಾಮಫಲಕ ಅನಾವರಣಗೊಳಿಸಿದರು. ನಂತರ ಬೆಳ್ಳಿರಥದಲ್ಲಿ ವಾಲ್ಮೀಕಿ, ತೆರೆದ ವಾಹನದಲ್ಲಿ ಬೇಡರಕಣ್ಣಪ್ಪ ಭಾವಚಿತ್ರವಿರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಶಾಸಕ ರಾಮಚಂದ್ರ ಟ್ರಾೃಕ್ಟರ್ ಚಾಲನೆ ಮಾಡಿ ಸಮುದಾಯದವರನ್ನು ಹುರಿದುಂಬಿಸಿದರು. ಯುವಕರು ಡಿಜೆ ಸೌಂಡ್‌ಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು…..