ದಾವಣಗೆರೆ:
ದಾವಣಗೆರೆಯಲ್ಲಿ ಮರಿಬನ್ನಿ ಹಬ್ಬವನ್ನು ಭಕ್ತರು ಅದ್ದೂರಿಯಾಗಿ ಆಚರಿಸಿದ್ರು. ಮರಿ ಬನ್ನಿಗೆ ದೇವರ ಪಲ್ಲಕ್ಕಿ ಹೊತ್ತು ಭಕ್ತರು ಬೆಟ್ಟ ಹತ್ತಿದ್ರು. ಮೈಸೂರು ದಸರಾ ಆದ 8 ದಿನಗಳ ನಂತರ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮಾದನ ಬಾವಿ ಗ್ರಾಮದಲ್ಲಿ ಹಬ್ಬವನ್ನು ಆಚರಣೆ ಮಾಡಿದ್ರು. ಭಕ್ತರು ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಬೀರದೇವರ ಪಲ್ಲಕ್ಕಿ ಹೆಗಲ ಮೇಲೆ ಹೊತ್ತು ಕಲ್ಲುಬಂಡೆ ಹತ್ತಿದ್ರು.. ಮರಿಬನ್ನಿ ಹಬ್ಬದ ಸಂಭ್ರದಲ್ಲಿ ಸುತ್ತಮುತ್ತಲಿನ 18 ಹಳ್ಳಿಗಳ ಜನ ಸೇರಿ ಅದ್ಧೂರಿಯಾಗಿ ಆಚರಣೆ ಮಾಡಿದ್ರು…