Breaking News

ದೇವರಿಗೆ ಅಭಿಷೇಕ ಮಾಡುವುದರ ಮಹತ್ವವೇನು..?

ಎಷ್ಟು ದಿನಕ್ಕೊಮ್ಮೆ ದೇವರಿಗೆ ಅಭಿಷೇಕ ಮಾಡಬೇಕು....

SHARE......LIKE......COMMENT......

:

ದೇವರಿಗೆ ಅಭಿಷೇಕ ಮಾಡುವುದರ ಮಹತ್ವವೇನು?

ನಾವೆಲ್ಲರೂ ಸಾಮಾನ್ಯವಾಗಿ ದೇವಾಲಯಗಳಿಗೆ ಭೇಟಿ ನೀಡುತ್ತಾ ಇರುತ್ತೇವೆ. ವಿಶೇಷವಾಗಿ ಹಬ್ಬ-ಹರಿದಿನ, ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ಜಾತ್ರೆ ಮುಂತಾದ ಸಂದರ್ಭಗಳಲ್ಲಿ ನಾವು ದೇವಾಲಯಗಳಿಗೆ ಹೋಗಿ, ಉದ್ದ ಸಾಲಿನಲ್ಲಿ ನಿಂತುಕೊಂಡು, ಒಬ್ಬರನ್ನೊಬ್ಬರು ತಳ್ಳಿಕೊಂಡಾದರು ಸರಿ ಹೋಗಿ ದೇವರಿಗೆ ಮಾಡಲಾಗುವ ಅಭಿಷೇಕವನ್ನು ನೋಡಬೇಕೆಂಬ ಖಾತರ ಎಲ್ಲರಲ್ಲಿ ಇರುತ್ತದೆ.

ಮೊದಲನೆಯದಾಗಿ, ವಿಗ್ರಹವನ್ನು ಕಪ್ಪು ಅಥವಾ ಬಿಳಿ ಕಲ್ಲಿನಲ್ಲಿ ಕೆತ್ತಿರುತ್ತಾರೆ (ಅಮೃತ ಶಿಲೆ). ಇದಾದ ಮೇಲೆ ಒಂದು ಒಳ್ಳೆಯ ಮುಹೂರ್ತದಲ್ಲಿ ಈ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಾರೆ. ಅಂದರೆ ಗರ್ಭ ಗುಡಿಯಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ. ಗರ್ಭಗುಡಿಯಲ್ಲಿ ಪ್ರತಿಷ್ಟಾಪನೆ ಮಾಡುವ ಮೊದಲು ನವರತ್ನಗಳನ್ನು ವಿಗ್ರಹವಿಡುವ ಸ್ಥಳದಲ್ಲಿ ಹಾಕಿ, ಅದರ ಮೇಲೆ ವಿಗ್ರಹವನ್ನು ಹೋಮ ಹವನ ಮಾಡಿದ ನಂತರ ಪ್ರತಿಷ್ಠಾಪಿಸುತ್ತಾರೆ. ಇದು ಬಹುತೇಕ ಹಲವಾರು ದೇವಾನುದೇವತೆಗಳ ವಿಗ್ರಹಗಳ ಪ್ರತಿಷ್ಟಾಪನೆಗೆ ಮಾಡುವ ಕಾರ್ಯವೇ ಆಗಿರುತ್ತದೆ. ಹೋಮವನ್ನು 48 ದಿನಗಳ ಕಾಲ ಮಾಡಲಾಗುತ್ತದೆ. ಈ ಹೋಮ ಮಾಡುವಷ್ಟು ದಿನ ಗರ್ಭಗುಡಿಯು ಅಧಿಕ ತಾಪಮಾನದಿಂದ ಕೂಡಿರುತ್ತದೆ. ಇದನ್ನು ತಂಪು ಮಾಡಲು ಅಭಿಷೇಕ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ.

ಎಷ್ಟು ದಿನಕ್ಕೊಮ್ಮೆ ದೇವರಿಗೆ ಅಭಿಷೇಕ ಮಾಡಬೇಕು?

ಅಭಿಷೇಕವನ್ನು ಅರ್ಚಕರು ಮಾಡುತ್ತಾರೆ, ಕೆಲವೊಂದು ಅಭಿಷೇಕಗಳನ್ನು ದಿನ ನಿತ್ಯ ಮಾಡಿದರೆ, ಇನ್ನೂ ಕೆಲವನ್ನು ವಿಶೇಷ ದಿನಗಳಂದು ಮಾಡಲಾಗುತ್ತದೆ. ಅಭಿಷೇಕ ಮಾಡಿದ ನಂತರ ಭಕ್ತಾಧಿಗಳಿಗೆ ಪಂಚಾಮೃತವನ್ನು ಹಂಚಲಾಗುತ್ತದೆ. ಅಭಿಷೇಕ ಮಾಡುವಾಗ ಹೈನು ಉತ್ಪನ್ನಗಳನ್ನು ಬಳಸಬೇಕೆಂಬ ವಾಡಿಕೆಯುಂಟು. ಅದಕ್ಕಾಗಿ ತುಪ್ಪ, ಹಾಲು, ಮೊಸರನ್ನು ಅಭಿಷೇಕದ ಸಮಯದಲ್ಲಿ ಬಳಸಲಾಗುತ್ತದೆ. ಹಿಂದೂ ಧರ್ಮದ ಪ್ರಕಾರ ಹಸುವಿನಲ್ಲಿ 33 ಕೋಟಿ ದೇವರುಗಳು ನೆಲೆಸಿರುತ್ತಾರೆ. ಆದ್ದರಿಂದ ಇದನ್ನು ಪವಿತ್ರವೆಂದು ಭಾವಿಸಿ, ಅದರ ಉತ್ಪನ್ನಗಳನ್ನು ಅಭಿಷೇಕಕ್ಕೆ ಬಳಸಲಾಗುತ್ತದೆ. ಹಲವಾರು ಸಂದರ್ಭಗಳಲ್ಲಿ ಅಭಿಷೇಕವು ಕೇವಲ ದೇವಾಲಯದಲ್ಲಿ ಮಾತ್ರವೇ ನಡೆಯುವುದಿಲ್ಲ. ಒಮ್ಮೊಮ್ಮೆ ಅದು ದೈನಂದಿನ ಪದ್ಧತಿಯಾಗಿ ಮನೆಗಳಲ್ಲಿ ಸಹ ನಡೆಯುತ್ತದೆ. ಅಭಿಷೇಕ ನಡೆಯುವ ಮುನ್ನ ವಿಗ್ರಹದ ಸುತ್ತ ಒಂದು ಬಟ್ಟೆಯನ್ನು ಕಟ್ಟಲಾಗಿರುತ್ತದೆ.

ಅಭಿಷೇಕಗಳಲ್ಲಿ ಹಲವಾರು ವಿಧಗಳುಂಟು…  

*ಕುಂಕುಮ ಅಭಿಷೇಕ
*ಅರಿಶಿನದ ಅಭಿಷೇಕ
* ಕ್ಷೀರಾಭಿಷೇಕ ಹಾಲು
*ಮೊಸರಿನ ಅಭಿಷೇಕ
*ಜೇನು ತುಪ್ಪದ ಅಭಿಷೇಕ
*ಸಕ್ಕರೆ ಅಭಿಷೇಕ
*ಎಳೆನೀರು ಅಭಿಷೇಕ
*ಒಣ ಹಣ್ಣು ಮತ್ತು ಬಾಳೆಹಣ್ಣು
*ನೀರು

ದೇವರಿಗೆ ಅಭಿಷೇಕ ಮಾಡುವ ವಿಧಾನವೇನು?

ಕುಂಕುಮ ಅಭಿಷೇಕ:

ಮೊದಲಿಗೆ ಕುಂಕುಮ ಅಭಿಷೇಕವನ್ನು ಮಾಡಲಾಗುತ್ತದೆ. ಇದನ್ನು ಎಲ್ಲಾ ವಿಗ್ರಹಗಳಿಗೆ ಮಾಡಲಾಗುತ್ತದೆ.

ಅರಿಶಿನದ ಅಭಿಷೇಕ:

ಕುಂಕುಮ ಮತ್ತು ಅರಿಶಿನಗಳಿಗೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನಮಾನವಿದೆ. ಹಾಗಾಗಿ ಅರಿಶಿನವನ್ನು ನೀರಿನ ಜೊತೆಗೆ ಬೆರೆಸಿ, ವಿಗ್ರಹದ ಮೇಲೆ ಅಭಿಷೇಕವನ್ನು ಮಾಡಲಾಗುತ್ತದೆ.

ಕ್ಷೀರಾಭಿಷೇಕ ಹಾಲು:

ಅತ್ಯಂತ ಪವಿತ್ರ ಪದಾರ್ಥವೆಂದು ಪರಿಗಣಿಸಲ್ಪಟ್ಟಿರುತ್ತದೆ.. ಹಾಗಾಗಿ ಇದನ್ನು ಸಹ ಅಭಿಷೇಕಕ್ಕೆ ಬಳಸಿಕೊಳ್ಳಲಾಗುತ್ತದೆ. ಇದಕ್ಕೆ ಇದರಲ್ಲಿರುವ ಸೌಂದರ್ಯ ವರ್ಧಕ ಗುಣಗಳು ಸಹ ಕಾರಣ ಎಂದು ಕೆಲವರು ಹೇಳುತ್ತಾರೆ. ಹಾಲಿನ ಅಭಿಷೇಕ ಮಾಡಲ್ಪಟ್ಟ ವಿಗ್ರಹವು ಹೊಳಪಿನಿಂದ ಕಂಗೊಳಿಸುತ್ತದೆ ಎಂಬುದು ವಿಶೇಷ.

ಮೊಸರಿನ ಅಭಿಷೇಕ:

ಹಾಲಿನ ಅಭಿಷೇಕವನ್ನು ಮಾಡಿದ ನಂತರ ವಿಗ್ರಹದ ಮೇಲೆ ಮೊಸರಿನ ಅಭಿಷೇಕವನ್ನು ಮಾಡಲಾಗುತ್ತದೆ. ಪಂಚಾಮೃತದಲ್ಲಿ ಮೊಸರನ್ನು ಸಹ ಬೆರೆಸಲಾಗುತ್ತದೆ. ನಂಬಿಕೆಗಳ ಪ್ರಕಾರ ಮೊಸರಿನ ಅಭಿಷೇಕವನ್ನು ಮಾಡಿದರೆ, ನಿಮಗೆ ಒಳ್ಳೆಯ ಮಕ್ಕಳಾಗುತ್ತಾರೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ.

ಜೇನು ತುಪ್ಪದ ಅಭಿಷೇಕ:

ಮುಂದಿನ ಮುಖ್ಯ ಪದಾರ್ಥವೆಂದರೆ ಅದು ಜೇನು ತುಪ್ಪ. ಪಂಚಾಮೃತದಲ್ಲಿ ಜೇನು ತುಪ್ಪವನ್ನು ಮುಖ್ಯವಾಗಿ ಬೆರೆಸಲಾಗುತ್ತದೆ. ಇದು ನಿಮಗೆ ಮಧುರ ಕಂಠ ನೀಡಲು ಸಹಾಯ ಮಾಡುತ್ತದೆ

ಸಕ್ಕರೆ ಅಭಿಷೇಕ:

ಸಕ್ಕರೆ ಅಥವಾ ಕಬ್ಬಿನ ಹಾಲಿನ ರಸವನ್ನು ಸಹ ಪಂಚಾಮೃತದಲ್ಲಿ ಬಳಸಲಾಗುತ್ತದೆ. ಇದು ನಿಮಗೆ ಆರೋಗ್ಯವನ್ನು ನೀಡುತ್ತದೆ ಮತ್ತು ನಿಮ್ಮ ದೇಹ ಮತ್ತು ಮನಸ್ಸಿನಿಂದ ಋಣಾತ್ಮಕ ಅಂಶಗಳನ್ನು ಹೊರಹಾಕುತ್ತದೆ.

ಎಳೆನೀರು ಅಭಿಷೇಕ:

ಎಳೆನೀರನ್ನು ನೇರವಾಗಿ ವಿಗ್ರಹದ ಮೇಲೆ ಸುರಿಯ ಬಹುದು. ಇದು ಜೀವನದಲ್ಲಿ ಅತಿಯಾಸೆಯಿಂದ ದೂರವಿರುವಂತೆ ಮತ್ತು ತೃಪ್ತಿಯನ್ನು ನೀಡಲು ಸಹಕರಿಸುತ್ತದೆ

ಒಣ ಹಣ್ಣು ಮತ್ತು ಬಾಳೆಹಣ್ಣು:

ಅಭಿಷೇಕಕ್ಕೆ ಈ ಮೇಲಿನ ಪದಾರ್ಥಗಳನ್ನು ಬಳಸಿದ ನಂತರ, ಒಣ ಹಣ್ಣುಗಳಾದ ದ್ರಾಕ್ಷಿ, ಗೋಡಂಬಿ, ಬಾದಾಮಿ ಮತ್ತು ಖರ್ಜೂರಗಳನ್ನು ಬಳಸಲಾಗುತ್ತದೆ. ಜೊತೆಗೆ ಬಾಳೆಹಣ್ಣುಗಳನ್ನು ಸಹ ಸಣ್ಣ ಸಣ್ಣದಾಗಿ ಕತ್ತರಿಸಿಕೊಂಡು, ವಿಗ್ರಹದ ಕೈ, ಕಾಲು, ಎದೆ, ಹಣೆ ಮುಂತಾದ ಭಾಗಗಳ ಮೇಲೆ ಇಡಲಾಗುತ್ತದೆ.

ನೀರು

ಜಲಾಭಿಷೇಕವು ಅತ್ಯಂತ ಪ್ರಮುಖ ಘಟ್ಟವಾಗಿರುತ್ತದೆ. ಇದನ್ನು ಅರ್ಚಕರು ವಿಶೇಷವಾದ ಕೊಳ, ಕಲ್ಯಾಣಿ ಅಥವಾ ಹತ್ತಿರದ ನದಿಗಳಿಂದ ತಂದು ವಿಗ್ರಹದ ಮೇಲೆ ಅಭಿಷೇಕ ಮಾಡುತ್ತಾರೆ. ಅಭಿಷೇಕ ಮಾಡಿದ ಪದಾರ್ಥವನ್ನು ನಾವು ಸೇವಿಸಿದರೆ, ಅದು ನಮ್ಮ ಪಾಪ ಕರ್ಮಗಳನ್ನು ಪರಿಹರಿಸುತ್ತದೆ……