ಅಮೃತವರ್ಷಿಣಿ, ನಿಶ್ಯಬ್ದ ಖ್ಯಾತಿಯ ನಿದೇರ್ಶಕ ದಿನೇಶ್ ಬಾಬು, ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಕಸ್ತೂರಿ ಮಹಲ್ ಚಿತ್ರದಲ್ಲಿ ಶಾನ್ವಿ ಶ್ರೀವಸ್ತವ್ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಯುವರಾಣಿ ಗೆಟಪ್‌ನಲ್ಲಿ ಶಾನ್ವಿ ಮಿಂಚಿದ್ದು, ಸಿನಿ ರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಇದೊಂದು ಹಾರರ್ ಥ್ರಿಲ್ಲಿಂಗ್ ಕಥೆಯಾಗಿದ್ದು, ಶಾನ್ವಿ ಸಹ ಹೆಚ್ಚು ನಿರೀಕ್ಷೆ ಹೊಂದಿದ್ದಾರೆ. ಕನ್ನಡದ ಬಿಗ್ ಸ್ಟಾರ್ಸ್ ಜೊತೆ ನಟಿಸಿ ಸೈ ಎನಿಸಿಕೊಂಡಿರೋ ಈ ಬ್ಯೂಟಿಫುಲ್ ಬೆಡಗಿನೇ. ಕಸ್ತೂರಿ ಮಹಲ್ಗೆ ರಾಣಿಯಾಗಿದ್ದಾರೆ. ಕಸ್ತೂರಿ ಮಹಲ್. ಮುಹೂರ್ತ ಆದಾಗಿನಿಂದ ಸಖತ್ ಸದ್ದು ಮಾಡ್ತಿದೆ. ಈ ಸಿನಿಮಾ ದಿನೇಶ್ ಬಾಬುರವರ 50ನೇ ಸಿನಿಮಾವಾಗಿದ್ದು, ಅಕ್ಟೋಬರ್ 5 ರಿಂದ ಸಿನಿಮಾದ ಚಿತ್ರೀಕರಣ ಶುರುವಾಗಲಿದಿಯಂತೆ. ಇದೊಂದು ನೈಜ ಘಟನೆಯಾಧರಿತ ಸಸ್ಪೆನ್ಸ್-ಥ್ರಿಲ್ಲರ್ ಕಥೆಯಾಗಿದ್ದು, ಈ ಚಿತ್ರದಲ್ಲಿ ಕಿರುತೆರೆಯ ಖ್ಯಾತ ನಟ ಸ್ಕಂದ ಅಶೋಕ್ ಮತ್ತು ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿ ಶಾನ್ವಿ ಶ್ರೀವಸ್ತವ್ ಕಾಣಿಸಿಕೊಳ್ಳಲಿದ್ದಾರೆ……
ಕಸ್ತೂರಿ ಮಹಲ್ ಚಿತ್ರದಲ್ಲಿ ಶಾನ್ವಿ ಶ್ರೀವಸ್ತವ್ ಫಸ್ಟ್ ಲುಕ್ ಬಿಡುಗಡೆ..!
ಅಕ್ಟೋಬರ್ 5 ರಿಂದ ಸಿನಿಮಾದ ಚಿತ್ರೀಕರಣ ಶುರು....
Article Updated: October 1, 2020
Comments Off on ಕಸ್ತೂರಿ ಮಹಲ್ ಚಿತ್ರದಲ್ಲಿ ಶಾನ್ವಿ ಶ್ರೀವಸ್ತವ್ ಫಸ್ಟ್ ಲುಕ್ ಬಿಡುಗಡೆ..!

Post navigation
Posted in: