Breaking News

ಬೆಳ್ಳಂಬೆಳಗ್ಗೆ ಡಿಕೆ ಬ್ರದರ್ಸ್​ಗೆ ಸಿಬಿಐ ಶಾಕ್..!

ಐಟಿ, ಇಡಿ ಬೆನ್ನಲ್ಲೇ ಡಿಕೆಶಿಗೆ ಮತ್ತೊಂದು ಆಘಾತ....

SHARE......LIKE......COMMENT......

ಬೆಂಗಳೂರು:

ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಹಾಗೂ ಅವರ ಸಹೋದರ ಡಿ.ಕೆ.ಸುರೇಶ್​ ಅವರ ಮನೆಯ ಮೇಲೆ ದಾಳಿ ನಡೆಸಿ ಶಾಕ್​ ಕೊಟ್ಟ ಸಿಬಿಐ ವಿರುದ್ಧ ಕಾಂಗ್ರೆಸ್​ ವಲಯದಲ್ಲಿ ಭಾರಿ ಅಸಮಾಧಾನ ಭುಗಿಲೆದ್ದಿದೆ. ಈ ಕುರಿತು ಕಿಡಿ ಕಾರಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಮನೆ ಮೇಲೆ ನರೇಂದ್ರ ಮೋದಿ ಸರ್ಕಾರ ನಡೆಸಿರುವ ಸಿಬಿಐ ದಾಳಿ ರಾಜಕೀಯ ದುಷ್ಟತನದ ಪರಮಾವಧಿ. ಇದು ಕಾಂಗ್ರೆಸ್ ಪಕ್ಷವನ್ನು ರಾಜಕೀಯವಾಗಿ ಎದುರಿಸಲಿಕ್ಕಾಗದ ಬಿಜೆಪಿ ನಾಯಕರ ನೈತಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಸಿದ್ದು ಅವರ ಟ್ವೀಟ್​ಗೆ ಹಲವರು ಕಿಡಿ ಕಾರಿದ್ದಾರೆ. ಭ್ರಷ್ಟರ ಬೇಟೆಯನ್ನು ಸಂಬಂಧಪಟ್ಟ ಇಲಾಖೆ ಮಾಡುವಾಗ ನೈತಿಕ ದಿವಾಳಿತನದ ಪ್ರಶ್ನೆ ಎಲ್ಲಿದೆ ಸ್ವಾಮಿ. ಒಬ್ಬ ಹಿರಿಯ, ಮಾಜಿ ಮುಖ್ಯಮಂತ್ರಿಯವರು ಜನರಿಗೆ ಯಾವ ಸಂದೇಶ ನೀಡಲು ಈ ಹೇಳಿಕೆ. ಯಾರ ಮೇಲೆ ಕ್ರಮ ತೆಗೆದುಕೊಂಡರೂ ಇಂಥ ಭಾವನೆ ರಾಜಕಾರಣಿಗಳಿಗೆ ಇರುವದಾದರೆ ಆ ಇಲಾಖೆ ಏಕೆ ಬೇಕು ಅಲ್ಲವೇ ಎಂದು ಸುಂದರ್​ ಜಿ.ಕೆ ಎನ್ನುವವರು ಪ್ರಶ್ನಿಸಿದ್ದಾರೆ.

ಇದೇ ವೇಳೆ ಸಿದ್ದರಾಮಯ್ಯನವರ ಕೆಲವು ಅಭಿಮಾನಿಗಳು ದಾಳಿಯನ್ನು ತೀವ್ರವಾಗಿ ಕಮೆಂಟ್​ ಮೂಲಕ ಖಂಡಿಸಿದ್ದಾರೆ.
ಬೆಂಗಳೂರಿನ ಸದಾಶಿವ ನಗರದ ಡಿಕೆಶಿ ನಿವಾಸದ ಮೇಲೆ ಐವರು ಅಧಿಕಾರಿಗಳ ತಂಡವು ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಇಂದು ಮುಂಜಾನೆ ದಾಳಿ ಮಾಡಿಲಾಗಿದೆ. ಬೆಂಗಳೂರಿನಲ್ಲಿ ಮಾತ್ರವಲ್ಲದೆ ಕನಕಪುರದ ನಿವಾಸದ ಮೇಲೂ ಅಧಿಕಾರಿಗಳ ತಂಡ ದಾಳಿ ಮಾಡಿದೆ.

ಈ ಹಿಂದೆ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯ ಅಧಿಕಾರಿಗಳಿಂದ ಡಿಕೆಶಿ ವಿಚಾರಣೆ ಎದುರಿಸಿದ್ದರು. ಅಲ್ಲದೆ, ಬಂಧನಕ್ಕೆ ಒಳಗಾಗಿ ಜೈಲು ವಾಸವನ್ನು ಅನುಭವಿಸಿ, ಜಾಮೀನಿನ ಮೂಲಕ ಹೊರಬಂದಿದ್ದಾರೆ. ಇದೀಗ ಸಿಬಿಐ ಅಧಿಕಾರಿಗಳು ದಾಳಿ ಮಾಡಿರುವುದು ಡಿಕೆಶಿಗೆ ಮತ್ತೊಮ್ಮೆ ಶಾಕ್​ ಎದುರಾಗಿದೆ……