ಬೆಂಗಳೂರು:
ಕೋಟಿ-ಕೋಟಿ ಅಭಿಮಾನಿಗಳ ಹಾರೈಕೆ ಕೊನೆಗೂ ಫಲಿಸಿತು..!ಹೌದು ನಿನ್ನೆ ಮ್ಯಾಚ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಒನ್ ಅಂಡ್ ಓನ್ಲಿ ಆರ್ಸಿಬಿ ಕೂಗು ಮಾತ್ರ ಕೇಳಿತು ಚೆನ್ನೈ ವಿರುದ್ಧ ಬೆಂಗಳೂರಿಗೆ ರಣರೋಚಕ ಗೆಲುವಿನಿಂದ ಪ್ಲೇ ಆಫ್ ಗೆ RCB ಎಂಟ್ರಿ ಕೊಟ್ಟಿದೆ ..ಐಪಿಎಲ್ 2024 ರಲ್ಲಿ ಫೀನಿಕ್ಸ್ ನಂತೆ ಮೇಲೇಳುವುದು ಹೇಗೆ ಎಂದು ಆರ್ ಸಿಬಿ ತೋರಿಸಿಕೊಟ್ಟಿದೆ. ಆರಂಭಿಕ ಪಂದ್ಯದಲ್ಲಿ ಸತತವಾಗಿ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕಿಳಿದಿದ್ದ ಆರ್ ಸಿಬಿ ಇದೀಗ ಸಿಎಸ್ ಕೆ ವಿರುದ್ಧ ಗೆದ್ದು ಪ್ಲೇ ಆಫ್ ಗೆ ಅರ್ಹತೆ ಪಡೆದಿದೆ.
ಇನ್ನು RCB ಗೆಲ್ಲುತ್ತಿದ್ದಂತೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಬಾರಿ ಕಪ್ ನಮ್ದೇ ಎಂಬ ಕೂಗು ಆಗಸಕ್ಕೆ ಮುಟ್ಟಿತ್ತು ಮಿಡ್ನೈಟ್ ಮ್ಯಾಚ್ ಮುಗಿದ್ರೂ ಕದಲದ ಫ್ಯಾನ್ಸ್ ರಾತ್ರಿ 1.30ರವರೆಗೂ ಸ್ಟೇಡಿಯಂ ಮುಂದೆ ಸೇರಿದ್ದು ಬೆಂಗಳೂರು ಟೀಂ ಸ್ಟೇಡಿಯಂನಿಂದ ಹೋಟೆಲ್ ಹೋಗೋವರೆಗೂ ಫ್ಯಾನ್ಸ್ RCB ಗೆ ಶುಭ ಕೋರುತ್ತಾ ರಸ್ತೆಯ ಅಕ್ಕ-ಪಕ್ಕ ನಿಂತು ಆರ್ಸಿಬಿ ಸಂಭ್ರಮಿಸಿದ್ದರು…