Breaking News

ದಿನ ಭವಿಷ್ಯ : 09/10/2020 ಯಾವ ರಾಶಿಗೆ ಒಳಿತು ಕೆಡುಕು..?

DAILY HOROSCOPE DINA BHAVISHYA: 09/10/2020....

SHARE......LIKE......COMMENT......

ಪಂಚಾಂಗ:

ದಿನಾಂಕ: 09/10/2020ನೇ
ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ವರ್ಷ ಋತು, ಅಧಿಕ ಆಶ್ವಯುಜ ಮಾಸ
ಕೃಷ್ಣಪಕ್ಷ, ಸಪ್ತಮಿ ತಿಥಿ ಶುಕ್ರವಾರ ಆರಿದ್ರಾ ನಕ್ಷತ್ರ
ಪರಿಘ ಯೋಗ, ಬವ ಕರಣ

ಅಮೃತಗಳಿಗೆ

ಬೆಳಗ್ಗೆ 09:00 ರಿಂದ 10:30ಕ್ಕೆ

ಪ್ರಯಾಣಕ್ಕೆ ಅನುಕೂಲವಾದ ಯೋಗ(ಪದ್ಮ ಧನಪ್ರಾಪ್ತಿ)

ರಾಹುಕಾಲ: ಬೆಳಗ್ಗೆ 10:40 ರಿಂದ ಮಧ್ಯಾಹ್ನ 12:10
ಗುಳಿಕಕಾಲ: ಬೆಳಗ್ಗೆ 07:41 ರಿಂದ 09:11
ಯಮಗಂಡಕಾಲ: ಮಧ್ಯಾಹ್ನ 03:09 ರಿಂದ 04:38

ಮೇಷ:-
ಸಣ್ಣ ಪ್ರವಾಸಗಳಿಗೆ ಹೋಗುವ ಸಾಧ್ಯತೆಗಳಿವೆ, ಹಮ್ಮಿಕೊಳ್ಳುವ ಕೆಲಸ ಕಾರ್ಯಗಳಿಗೆ ಇತರರು ಸಹಕಾರ ನೀಡುವರು. ವಿದ್ಯಾ ಇಲಾಖೆಗೆ ಸಂಬಂಧಪಟ್ಟು ಉದ್ಯೋಗದಲ್ಲಿ ಇರುವವರಿಗೆ ಉತ್ತಮ ಆದಾಯ ದೊರೆಯುತ್ತದೆ.

ವೃಷಭ:-
ಸರಕಾರಿ ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ತೊಂದರೆ ಹಾಗೂ ಒತ್ತಡ. ವಾಹನ ವ್ಯಾಪಾರ ಮಾಡುತ್ತಿರುವವರಿಗೆ ಸ್ವಲ್ಪ ಉತ್ತಮ ಸಮಯ. ನೀವು ಎಲ್ಲಾ ವಿಷಯವನ್ನು ಬಹಿರಂಗ ಪಡಿಸುವುದರಿಂದ ಸಮಸ್ಯೆಗೆ ಸಿಲುಕಿಕೊಳ್ಳುವಿರಿ.

ಮಿಥುನ:-
ಬಹು ನಿರೀಕ್ಷಿತವಾದ ದೂರ ಪ್ರವಾಸ ಅನುಕೂಲ ಆಗುತ್ತೆ, ಮಾರ್ಕೆಟಿಂಗ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಸಹೋದ್ಯೋಗಿಗಳ ಬೆಂಬಲ ಸಿಗಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

ಕಟಕ:-
ಅನಗತ್ಯವಾದ ಸಂಶಯವೇ ನಿಮ್ಮ ಕಾರ್ಯಹಾನಿಗೆ ಕಾರಣವಾಗುವುದು.ಕೆಲವು ವಿಚಾರಗಳಲ್ಲಿ ಸಹೋದರನ ಸಹಕಾರ,ವಿದೇಶ ಪ್ರವಾಸ ಕೈಗೊಳ್ಳುವ ವಿಚಾರದಲ್ಲಿ ಅನುಕೂಲ.

ಸಿಂಹ:-
ಹಮ್ಮಿಕೊಳ್ಳುವ ಕೆಲಸ ಕಾರ್ಯಗಳಿಗೆ ಇತರರು ಸಹಕಾರ ನೀಡುವರು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ರಾಜಕಾರಣಿಯ ಸಹಾಯ ಪಡೆಯುವುದು ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಇದೆ.

ಕನ್ಯಾ:-
ನಿಮ್ಮ ಮನೋಕಾಮನೆಗಳು ಬೇಗನೆ ಕಾರ್ಯರೂಪಕ್ಕೆ ಬರುತ್ತವೆ. ಸರ್ಕಾರಿ ಆಫೀಸಿನಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.

ತುಲಾ:-
ಸ್ನೇಹಿತರ ಮೂಲಕವೇ ಕೆಲಸಗಳು ಆಗುತ್ತವೆ. ವ್ಯಾಪಾರ ವ್ಯವಹಾರದಲ್ಲಿ ಆದಷ್ಟು ಪಾರದರ್ಶಕತೆ ರೂಢಿಸಿಕೊಳ್ಳಿ. ಕೆಟ್ಟ ದೃಷ್ಟಿಯ ಜನರಿಂದ ಎಚ್ಚರಿಕೆಯಿಂದ ಇರಬೇಕು.

ವೃಶ್ಚಿಕ:-
ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಹೆಚ್ಚು ಸಮಸ್ಯೆ, ಸಣ್ಣ- ಪುಟ್ಟ ಮನೆ ರಿಪೇರಿ ಎಂದು ಕೈ ಇಟ್ಟವರಿಗೆ ದೊಡ್ಡ ಪ್ರಮಾಣದಲ್ಲಿ ಖರ್ಚು, ಮಿತ್ರರಿಂದ ಸಹಾಯ, ಸುಖ ಭೋಜನ ಪ್ರಾಪ್ತಿ, ವ್ಯಾಪಾರದಲ್ಲಿ ಧನ ಲಾಭ.

ಧನುಸ್ಸು:-
ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿ. ವ್ಯವಹಾರಗಳಿಗೆ ಹೆಚ್ಚಿನ ಅನುಕೂಲವಾಗುವುದು. ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಅನುಕೂಲ ಕಂಡು ಬರುವುದು.

ಮಕರ:-
ಕೋರ್ಟು ಕಚೇರಿಯ ಕೆಲಸಗಳು ಸರಾಗವಾಗಿ ನಡೆಯುವುದು,ವೃತ್ತಿಯಲ್ಲಿನ ಕಿರಿಕಿರಿ ನಿವಾರಣೆ ಆಗುತ್ತದೆ. ವ್ಯವಹಾರದಲ್ಲಿ ಅತೀ ಜಾಗ್ರತೆ ವಹಿಸಿರಿ. ವಾಹನ ಚಾಲನೆ ವೇಳೆ ಎಚ್ಚರಿಕೆಯಿಂದ ಇರಬೇಕು.

ಕುಂಭ:-
ಕೆಲವು ಕಾಲದಿಂದ ತಟಸ್ಥಗೊಂಡಿದ್ದ ನಿಮ್ಮ ವ್ಯಾಪಾರ ಯೋಜನೆಗಳಿಗೆ ಚಾಲನೆ ದೊರೆಯುವುದು, ಹೊಸ ಮನೆ ನಿರ್ಮಿಸುತ್ತಿರುವವರಿಗೆ ಹಣಕಾಸು ಸಮಸ್ಯೆ ಎದುರಾಗಬಹುದು. ಪ್ರಯಾಣವು ದೊಡ್ಡ ಖರ್ಚಿಗೆ ಕಾರಣವಾಗಬಹುದು.

ಮೀನ:-
ಎಷ್ಟೇ ಬುದ್ಧಿಶಾಲಿಯಾದರೂ ಕೆಲಸದಲ್ಲಿ ಈ ದಿನ ಹೆಚ್ಚು ಸಮಸ್ಯೆ, ವ್ಯಾಪಾರಿಗಳಿಗೆ ಚೇತರಿಕೆ ಹಿರಿಯರ,ಅನ್ಯ ಜನರಲ್ಲಿ ದ್ವೇಷ ಉಂಟಾಗುವುದು, ಕೋರ್ಟು ಕಚೇರಿಯಲ್ಲಿ ಯಶಸ್ಸು ನಿಮ್ಮದಾಗಲಿದೆ.