ಪಂಚಾಂಗ:
ದಿನಾಂಕ: 12/10/2020ನೇ
ಶ್ರೀ ಶಾರ್ವರಿನಾಮ ಸಂವತ್ಸರ,
ದಕ್ಷಿಣಾಯನ ಪುಣ್ಯಕಾಲ,
ವರ್ಷ ಋತು, ಅಧಿಕ ಆಶ್ವಯುಜ ಮಾಸ
ಕೃಷ್ಣಪಕ್ಷ, ದಶಮಿ ತಿಥಿ ಸೋಮವಾರ ಆಶ್ಲೇಷ ನಕ್ಷತ್ರ
ಸಾಧ್ಯ ಯೋಗ, ಭದ್ರೆ ಕರಣ
ಅಮೃತಗಳಿಗೆ:
ಬೆಳಗ್ಗೆ 06:00 ರಿಂದ 07:30 ಗಂಟೆಯವರೆಗೆ
ಪ್ರಯಾಣಕ್ಕೆ ಅನುಕೂಲವಾದ ಯೋಗ(ಸೌಮ್ಯ- ಸೌಖ್ಯ )
ರಾಹುಕಾಲ: ಬೆಳಗ್ಗೆ 07:42 ರಿಂದ 09:11
ಗುಳಿಕಕಾಲ: ಮಧ್ಯಾಹ್ನ 01:39 ರಿಂದ 03:08
ಯಮಗಂಡಕಾಲ: ಬೆಳಗ್ಗೆ 10:40 ರಿಂದ ಮಧ್ಯಾಹ್ನ 12:09
ಮೇಷ:
ಕುಟುಂಬದಲ್ಲಿ ಕಲಹಗಳು ಸಾಮಾಜಿಕ ಮತ್ತು ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಆಭರಣ ಖರೀದಿಗೆ ಸೂಕ್ತ ಸಮಯವಲ್ಲ. ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅನುಕೂಲ.
ವೃಷಭ:
ವ್ಯಾಪಾರದಲ್ಲಿ ಭಾಧಿಸುತ್ತಿರುವ ಸಮಸ್ಯೆಗಳು ನಿವಾರಣೆ. ಬಹು ನಿರೀಕ್ಷಿತ ಅವಕಾಶವೊಂದನ್ನು ಪಡೆಯುತ್ತಾರೆ. ಹಿರಿಯರ ಆರೋಗ್ಯದ ವಿಷಯದಲ್ಲಿ ಎಚ್ಚರಿಕೆ ಇರಲಿ.
ಮಿಥುನ:
ಮಕ್ಕಳಿಂದ ಒಳ್ಳೆಯ ಸುದ್ದಿ ಪಡೆಯಲಿದ್ದೀರಿ. ಗಣ್ಯರೊಂದಿಗೆ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆ ಕಂಡುಬರುವುದು. ನೀವು ಹಿಂದೆ ಮಾಡಿದ್ದ ಕಠಿಣ ಶ್ರಮಕ್ಕೆ ಸೂಕ್ತ ಪ್ರತಿಫಲ ಪಡೆಯಲಿದ್ದೀರಿ.
ಕರ್ಕಾಟಕ:
ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಬಡ್ತಿ ಸಂಭವ. ನೀವು ನಿರ್ಣಯಿಸಿದ ಕಾರ್ಯಗಳಲ್ಲಿ ಜಯ ಸಾಧಿಸುತ್ತೀರಿ ಮೃಷ್ಟಾನ್ನ ಭೋಜನ ಯೋಗ. ವಿಧ್ಯಾರ್ಥಿಗಳಿಗೆ ಒತ್ತಡ ಹೆಚ್ಚಾಗುತ್ತದೆ.
ಸಿಂಹ:
ಅಧ್ಯಾತ್ಮಿಕ ಕಾರ್ಯಗಳಲ್ಲಿ ನಿಮಗೆಆಸಕ್ತಿ ಹೆಚ್ಚಾಗುತ್ತದೆ. ವಾಹನ ಚಾಲನೆಯಲ್ಲಿ ಜಾಗೃತೆಯಿರಲಿ. ಮಿತ್ರರ ಸಹಕಾರವೂ ದೊರೆಯಲಿದೆ.
ಕನ್ಯಾ:
ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮೊದಲು ಎರಡು ಬಾರಿ ಯೋಚಿಸಿ. ಮೆಡಿಕಲ್ ,ಇಂಜೀನಿಯರಿಂಗ ಕ್ಷೇತ್ರದವರಿಗೆ ಹೆಚ್ಚಿನ ಲಾಭವಾಗಲಿದೆ. ಸಹೋದ್ಯೋಗಿಗಳೊಡನೆ ಉತ್ತಮ ಸಂಬಂಧ ಬೆಳೆಸಿಕೊಳ್ಳುವಿರಿ.
ತುಲಾ:
ಹೊಸ ಯೋಜನೆಗಳ ತಯಾರಿ ಮತ್ತು ಅನುಷ್ಠಾನಗಳಿಗೆ ಒಳ್ಳೆಯ ಸಮಯ. ನಿಮ್ಮ ಪ್ರಯತ್ನಕ್ಕೆ ಬೆಂಬಲ ಸಿಗುತ್ತದೆ. ಆರ್ಥಿಕವಾಗಿಎಚ್ಚರಿಕೆ ಯಿಂದಿರುವುದುಸೂಕ್ತ.
ವೃಶ್ಚಿಕ:
ಕೃಷಿಕ್ಷೇತ್ರದವರಿಗೆಉತ್ತಮಲಾಭವಾಗಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಿ. ಪುತ್ರರಿಂದ ಧನಲಾಭ. ಹಂತಹಂತವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ
ಧನು:
ಕುಟುಂಬದ ಹಿರಿಯರೊಂದಿಗೆ ನಿಮ್ಮ ಚರ್ಚೆ ನಡೆಯಲಿದೆ. ಗುತ್ತಿಗೆದಾರರಿಗೆ ಒಳ್ಳೆಯ ಅವಕಾಶಗಳು ಎದುರಾಗಲಿವೆ. ಕೋರ್ಟು-ಕಚೇರಿ ಸಮಸ್ಯೆಗಳು ಮುಂದಕ್ಕೆ ಹೋಗುವುದು, ಷೇರು ವಹಿವಾಟುದಾರರಿಗೆ ಧನಲಾಭ.
ಮಕರ:
ವಿಲಾಸಮಯ ಜೀವನಕ್ಕಾಗಿ ಹೆಚ್ಚಿನ ಹಣ ವ್ಯಯ ಮಾಡುತ್ತೀರಿ.ಹಳೇ ಮಿತ್ರರ ಭೇಟಿ ಸಂತೋಷಕ್ಕೆ ಕಾರಣವಾದೀತು. ಮಹಿಳೆಯರು ದೈವಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಾರೆ.
ಕುಂಭ:
ಮನೆಯ ಅಭಿವೃದ್ಧಿಗಳಲ್ಲಿ ನಿಮ್ಮ ಸಮಯ ಮತ್ತು ಹಣವನ್ನು ವ್ಯಯ, ವಾಹನ ದುರಸ್ತಿಗೆ ಆಧಿಕ ಖರ್ಚು. ಬಂಧು ಮಿತ್ರರಿಂದ ಮನೆಯಲ್ಲಿ ಕಲಹವಾಗಬಹುದು. ನಿಮ್ಮ ಕೆಲಸಗಳು ಅರ್ಧಕ್ಕೆ ಸ್ಥಗಿತಗೊಳ್ಳಲಿವೆ.
ಮೀನ:
ಆಹಾರ ಧಾನ್ಯ ವ್ಯಾಪಾರಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.. ಮನೆಗೆ ಬಂಧುಗಳ ಆಗಮನ. ಅನವಶ್ಯಕ ವಿಷಯದಲ್ಲಿ ಭಾಗಿಯಾಗಿ ಕೋಪವನ್ನು ತಂದುಕೊಳ್ಳವುದು.