ಸಿನಿಮಾ:
2018 ರ ಅಂತ್ಯಕ್ಕೆ ರಿಲೀಸ್ ಆಗಿದ್ದ ಕೆಜಿಎಫ್ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಬಾಕ್ಸ್ ಆಫೀಸ್ ವಿಚಾರದಲ್ಲಿ ಈ ಚಿತ್ರ ಶಾರುಖ್ ನಟನೆಯ ಜಿರೋ ಚಿತ್ರವನ್ನು ಹಿಂದಿಕ್ಕಿತ್ತು. ಈ ಚಿತ್ರ ತೆರೆಕಂಡು ಸುಮಾರು ಎರಡು ವರ್ಷ ಕಳೆಯುತ್ತ ಬಂದಿದೆ. ಎಲ್ಲ ಅಂದುಕೊಂಡಂತೆ ನಡೆದಿದ್ದರೆ ದಸರಾ ನಿಮಿತ್ತ ಅಕ್ಟೋಬರ್ 23ರಂದು ಚಿತ್ರ ತೆರೆಗೆ ಬರಬೇಕಿತ್ತು. ಆದರೆ, ಕೊರೋನಾ ಇರುವ ಕಾರಣ ಚಿತ್ರದ ಶೂಟಿಂಗ್ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿದೆ. ಈಗ ಕೆಜಿಎಫ್ 2 ಯಾವಾಗಾ ತೆರೆಗೆ ಬರಲಿದೆ ಎಂಬುದಕ್ಕೆ ಉತ್ತರ ಸಿಕ್ಕಿದೆ. ಈಗ ಸಿನಿಮಾದ ಶೂಟಿಂಗ್ ಆರಂಭಗೊಂಡಿದೆ. ಚಿತ್ರದ ಮುಖ್ಯ ವಿಲನ್ ಸಂಜಯ್ ದತ್ಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಅವರು ಶೂಟಿಂಗ್ನಲ್ಲಿ ಪಾಲ್ಗೊಳ್ಳೋದು ಕೊಂಚ ತಡವಾಗಲಿದೆ. ಹೀಗಾಗಿ ಸಂಕ್ರಾಂತಿಗೆ ಸಿನಿಮಾ ತೆರೆಗೆ ಬರಲಿದೆಯಂತೆ. ಈ ಬಗ್ಗೆ ಚಿತ್ರ ತಂಡದಿಂದ ಯಾರೊಬ್ಬರೂ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಆದರೆ, ಕೆಜಿಎಫ್ 2 ಸಿನಿಮಾದ ವಿಕಿಪೀಡಿಯಾದಲ್ಲಿ ಹೊಸ ಬಿಡುಗಡೆ ದಿನಾಂಕವನ್ನು ಉಲ್ಲೇಖ ಮಾಡಲಾಗಿದೆ.
ಇದೇ ಅಕ್ಟೋಬರ್ 15ರಿಂದ ಚಿತ್ರಮಂದಿರ ತೆರೆಯಲು ಅವಕಾಶ ನೀಡಲಾಗಿದೆ. ಆದರೆ, ಒಟ್ಟೂ ಸಾಮರ್ಥ್ಯದ ಕೇವಲ 50 ಭಾಗವನ್ನು ತುಂಬಲು ಮಾತ್ರ ಅನುಮತಿ ಇದೆ. ಸಿನಿಮಾ ಜನವರಿಗೆ ತೆರೆಕಾಣಲು ಇದೂ ಕೂಡ ಒಂದು ಕಾರಣ. ಯಶ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನವಿದೆ. ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ಹೀರೋ ಸಂಜಯ್ ದತ್ ಮುಖ್ಯ ಖಳನಾಗಿ ಮಿಂಚುತ್ತಿದ್ದಾರೆ. ರವೀನಾ ಟಂಡನ್ ರಾಜಕಾರಣಿ ಪಾತ್ರದಲ್ಲಿ ಮಿಂಚಲಿದ್ದಾರೆ……