Breaking News

ಕುಡಿವ ನೀರಿಗೆ 1.5 ಕೋಟಿ ರೂ..!

ಸಮಸ್ಯೆ ಬಗೆಹರಿಸಲು SFC ಅನುದಾನ...

SHARE......LIKE......COMMENT......

ಕೋಲಾರ:

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಸಲುವಾಗಿ ನಗರಸಭೆಗೆ ಎಸ್​ಎಫ್​ಸಿ ಅನುದಾನ 1.50 ಕೋಟಿ ರೂ. ಬಳಕೆಗೆ ಅನುಮೋದನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ಕೋಲಾರಮ್ಮ ಕೆರೆ ಅಂಗಳದಲ್ಲಿ ದುರಸ್ತಿಗೊಳಿಸಿರುವ ನಗರಸಭೆಯ ಯುಜಿಡಿಯ ಎಸ್​ಟಿಪಿ ಘಟಕವನ್ನು ಶನಿವಾರ ಪರೀಕ್ಷಾರ್ಥ ಚಾಲನೆ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು. ನಗರದಲ್ಲಿ ಕುಡಿವ ನೀರಿನ ಸಮಸ್ಯೆ ಬಗೆಹರಿಸಲು ಎಸ್​ಎಫ್​ಸಿ ಅನುದಾನವನ್ನು ಹೊಸ ಬೋರ್​ವೆಲ್ ಕೊರೆದು ಪಂಪ್ ಮೋಟಾರ್, ಪೈಪ್​ಲೈನ್​ಗೆ ಬಳಸಲು ಸೂಚಿಸಲಾಗಿದೆ. ನೀರಿನ ಸಮಸ್ಯೆ ಬಗ್ಗೆ ದೂರು ನೀಡಲು ಕಂಟ್ರೋಲ್ ರೂ. ಸ್ಥಾಪಿಸಲಾಗಿದೆ ಎಂದರು.

ನಗರದ 16 ವಾರ್ಡ್​ಗಳಲ್ಲಿನ ಯುಜಿಡಿ ತ್ಯಾಜ್ಯನೀರನ್ನು ಪಂಪ್ ಮಾಡುವ ಎಸ್​ಟಿಪಿ ಘಟಕ ಹಲವು ತಿಂಗಳ ಹಿಂದೆ ಕೆಟ್ಟು ಹೋಗಿ ಸಮಸ್ಯೆ ಉಲ್ಬಣಿಸಿತ್ತು. 2017-18ನೇ ಸಾಲಿನ ಎಸ್​ಎಫ್​ಸಿ ಅನುದಾನ 18 ಲಕ್ಷ ರೂ. ವೆಚ್ಚದಲ್ಲಿ ಘಟಕ ದುರಸ್ತಿಪಡಿಸಲಾಗಿದೆ. ಯುಜಿಡಿಗೆ ಮರುಸಂಪರ್ಕ ಕಲ್ಪಿಸಿದ ನಂತರ ಎರಡು ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಘಟಕ ಕಾರ್ಯನಿರ್ವಹಿಸಲಿದೆ ಎಂದರು…..