ಬೆಂಗಳೂರು ಗ್ರಾ:
ಗ್ರಾಮ ಪಂಚಾಯಿತಿಗಳಲ್ಲಿ ಇನ್ನು ಮುಂದೆ ಸಣ್ಣ ಪ್ರಮಾಣದ ಬ್ಯಾಂಕ್ ಸೇವೆಗಳು ಜನರಿಗೆ ಲಭ್ಯವಾಗಲಿವೆ.ಇಂಥದೊಂದು ಅವಕಾಶವನ್ನು ಹಳ್ಳಿ ಜನರಿಗೆ ಕಲ್ಪಿಸಲು ಸರಕಾರ ಮುಂದಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸೇವೆ ಆರಂಭಿಸಲು ಸ್ಥಳವಕಾಶ ಕಲ್ಪಿಸುವಂತೆ ಸುತ್ತೋಲೆ ನೀಡಲಾಗಿದೆ.
ನಗರ ಮತ್ತು ಹೋಬಳಿ ಕೇಂದ್ರ ಸ್ಥಾನಗಳನ್ನು ಹೊರತುಪಡಿಸಿದರೇ ಗ್ರಾಮೀಣ ಭಾಗದ ಸಣ್ಣ ಸಣ್ಣ ಹಳ್ಳಿಗಳ ಜನರು ತಮ್ಮ ಬ್ಯಾಂಕ್ ಸೇವೆಗಳಿಗಾಗಿ ದೂರದ ಪಟ್ಟಣ, ನಗರ ಪ್ರದೇಶವನ್ನು ಆಶ್ರಯಿಸಿ ಓಡಾಟ ನಡೆಸಬೇಕಿತ್ತು. ಬ್ಯಾಂಕಿನ ಏನೇ ಸೇವೆ ಬೇಕಿದ್ದರೂ ಕೆಲಸ ಕಾರ್ಯಬಿಟ್ಟು ಹೋಗಿ ಬರಬೇಕಿತ್ತು. ಇದರಿಂದ ಜನರ ಸಮಯ ವ್ಯರ್ಥ ಹಾಗೂ ನಿತ್ಯದ ಆದಾಯಕ್ಕೂ ಕೊಕ್ಕೆಯಾಗುತ್ತಿತ್ತು. ಕೆಲವೊಮ್ಮೆ ಮಹಿಳೆಯರು, ಮಕ್ಕಳೊಂದಿಗೆ ಬ್ಯಾಂಕ್ ವ್ಯವಹಾರಕ್ಕೆ ಹೋಗುವುದು ಅನಿವಾರ್ಯವಾಗಿ ಇಡೀ ಕುಟುಂಬ ಆದಾಯವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿತ್ತು.ಇನ್ನು ಮುಂದೆ ಇದಕ್ಕೆ ಮುಕ್ತಿ ನೀಡಲು ಸರಕಾರ ಮುಂದಾಗಿದೆ.
ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಹೊಂದಿರುವ ಬ್ಯಾಂಕ್ ಖಾತೆಗಳಿಗೆ ಡಿಬಿಟಿ (ನೇರ ನಗದು ಪಾವತಿ) ಮೂಲಕ ಹಣ ವರ್ಗಾವಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಸಣ್ಣ ಪ್ರಮಾಣದ ಬ್ಯಾಂಕ್ ವ್ಯವಹಾರಗಳಿಗೆ ನಗರದಲ್ಲಿರುವ ಬ್ಯಾಂಕ್ಗಳಿಗೆ ಭೇಟಿ ನೀಡದೆ ಈ ಮೈಕ್ರೋ ಎಟಿಎಮ್ಸ್ ತಂತ್ರಜ್ಞಾನದ ಮೂಲಕ ತಮ್ಮ ಗ್ರಾಮಗಳಲ್ಲಿಯೇ ಬ್ಯಾಂಕ್ ಸೇವೆಯನ್ನು ಪಡೆಯಬಹುದಾಗಿದೆ…….
.