Breaking News

ಚಳಿಗಾಲದಲ್ಲಿ ಚರ್ಮದ ಆರೈಕೆ ಮಾಡಬೇಕಾ ಟಿಪ್ಸ್ ಇಲ್ಲಿದೆ..!

SHARE......LIKE......COMMENT......

ಲೇಡಿಸ್ ಟೈಂ/ ಹೆಲ್ತ್‌ಕೇರ್:

ಚಳಿಗಾಲ ಬಂತು ಅಂದ್ರೆ ಚರ್ಮದ ಆರೈಕೆ ಬಹಳ ಮುಖ್ಯ ಆಗುತ್ತೆ. ಇಂತಹ ಸಮಯದಲ್ಲಿ ಸ್ವಲ್ಪ ಹೆಚ್ಚೇ ಎನಿಸುವಷ್ಟು ಚರ್ಮದ ಆರೈಕೆ ಮಾಡಬೇಕಾಗುತ್ತದೆ.

ಚಳಿ ಅಂತ ರೂಂ ಹೀಟರ್ ಬಳಸುವುದರಿಂದ ಚರ್ಮ ಒಣಗುವ ಸಾಧ್ಯತೆ ಹೆಚ್ಚು, ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಕಡಿಮೆಯಾಗಿ, ತಲೆನೋವಿಗೆ ಕಾರಣವಾಗಬಹುದು ಎಂದು ಕೆಲವು ತಜ್ಞರ ಅಭಿಪ್ರಾಯ.

ಚಳಿ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಅತಿಯಾಗಿ ಬಿಸಿನೀರಿನ ಸ್ನಾನ ಮಾಡಲಾಗುತ್ತದೆ, ಇದು ಚರ್ಮದಲ್ಲಿನ ತೇವಾಂಶ ಆವಿಯಾಗಲು ಕಾರಣವಾಗುತ್ತದೆ, ಹೀಗಾಗಿ ಸ್ನಾನ ಮುಗಿದ ಕೂಡಲೇ ತ್ವಚೆಯ ಆರ್ದ್ರತೆ ಕಾಪಾಡುವುದು ಮುಖ್ಯವಾಗುತ್ತದೆ, ಇಲ್ಲವಾದರೆ ಚರ್ಮದಲ್ಲಿ ಬಿರುಕು ಉಂಟಾಗುತ್ತದೆ. ಹೀಗಾಗಿ ಅತಿ ಹೆಚ್ಚಿನ ಬಿಸಿ ಇರುವ ನೀರಿನಲ್ಲಿ ಸ್ನಾನ ಮಾಡುವುದಕ್ಕಿಂತ ಕಡಿಮೆ ಬಿಸಿ ಇರುವ ನೀರಿನಲ್ಲಿ ಸ್ನಾನ ಮಾಡಬೇಕು.

ಒಂದು ವೇಳೆ ನಿಮಗೆ ತಣ್ಣೀರು ಸ್ನಾನ ಮಾಡುವ ಅಭ್ಯಾಸವಿದ್ದರೇ ಅದಕ್ಕಿಂತ ಉತ್ತಮ ಕೆಲಸ ಮತ್ತೊಂದಿಲ್ಲ,

ಬೇಸಿಗೆಯಲ್ಲಿ ಕುಡಿಯುವ ಹಾಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಬೇಕು, ನಮ್ಮ ದೇಹದಲ್ಲಿ ನೀರಿನ ಪ್ರಮಾಣ ಕಡಿಮಯಾದರೇ ದೇಹಕ್ಕೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಚಳಿಗಾಲದಲ್ಲಿ ಹೆಚ್ಚುವರಿ ಕೇರ್ ಮಾಡಬೇಕು ಎಂದು ತಜ್ಞರ ಅಭಿಪ್ರಾಯ……