ಮೈಸೂರು:
ಮೈಸೂರಿನ ಹುಣಸೂರು, ಪಿರಿಯಾಪಟ್ಟಣ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಿನ್ನೆ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಅರಸುಕಲ್ಲಳ್ಳಿ ಗ್ರಾಮದ ವೃದ್ಧೆಯೊಬ್ಬರು ಸಾವನ್ನಪ್ಪಿದ್ರು. ಮಳೆ ಹಿನ್ನೆಲೆ ಹಲವು ಮನೆಗಳ ಮೇಲ್ಛಾವಣಿ ನೆಲಕ್ಕುರುಳಿತ್ತು. ಹೀಗಾಗಿ, ಮಳೆಯಿಂದಾಗಿ ನಷ್ಟವಾದ ವಿವಿಧ ಪ್ರದೇಶಗಳಿಗೆ ಸಂಸದ ಪ್ರತಾಪ್ ಸಿಂಹ ಇಂದು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ರು. ಸ್ಥಳೀಯ ತಹಶೀಲ್ದಾರ್ ಗಮನಕ್ಕೆ ತಂದು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದು, ಪ್ರತಾಪ್ ಸಿಂಹರ ಕಾರ್ಯಕ್ಕೆ ಸ್ಥಳೀಯರು ಶ್ಲಾಘಿಸಿದ್ದಾರೆ……