Breaking News

ಜಮ್ಮು-ಕಾಶ್ಮೀರದಲ್ಲಿ ಎನ್ ಕೌಂಟರ್..!

ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗ....

SHARE......LIKE......COMMENT......
ಕುಲ್ಗಾಮ್ :
ಜಮ್ಮು-ಕಾಶ್ಮೀರದ ಕುಲ್ಗಾಮ್  ಜಿಲ್ಲೆಯ ಲಾರೊ ಪ್ರದೇಶದಲ್ಲಿ  ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗ ಪ್ರಗತಿಯಲ್ಲಿದೆ. ಒಂದೆರಡು ಉಗ್ರರು ಮನೆಯೊಂದರಲ್ಲಿ ಅಡಗಿ ಕುಳಿತಿರುವ ಶಂಕೆ ಇದ್ದು, ಭದ್ರತಾ ಪಡೆಗಳು ಕಾರ್ಯಾಚರಣೆಯಲ್ಲಿ ತೊಡಗಿವೆ.ಉತ್ತರ ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ಕ್ರಲ್ಹಾರ್ ಪ್ರದೇಶದಲ್ಲಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಎರಡು ದಿನಗಳ ನಂತರ ಮತ್ತೆ ಭದ್ರತಾ ಪಡೆಗಳು ಇಂದು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿವೆ.ಕಾರ್ಯಾಚರಣೆ ವೇಳೆಯಲ್ಲಿ ಎರಡು ಎಕೆ -47, ಮೂರು ಗ್ರೇನೆಡ್ಸ್ , ಎರಡು ಚೈನಾದ ಪಿಸ್ತೂಲ್ ಮತ್ತಿತರ ಶಸಾಸ್ತ್ರಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿದ್ದರು….