ದೊಡ್ಡಬಳ್ಳಾಪುರ:
ರಕ್ತದ ಕೃತಕ ಸೃಷ್ಟಿ ಸಾಧ್ಯವಿಲ್ಲ. ವೈದ್ಯಕೀಯ ಲೋಕ ಎಷ್ಟೇ ಮುಂದುವರಿದರೂ ಒಂದೇ ಒಂದು ಹನಿ ರಕ್ತವನ್ನೂ ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಉತ್ಪಾದಿಸಲು ಸಾಧ್ಯವಾಗಿಲ್ಲ. ಹೀಗಾಗಿ ನಾವು ಕೊಡುವ ಒಂದೊಂದು ಹನಿ ರಕ್ತಕ್ಕೂ ಬೆಲೆಕಟ್ಟಲಾಗದು ಎಂದು ಲಯನ್ ಜಿಲ್ಲಾ ರಾಜ್ಯಪಾಲ ಸತ್ಯನಾರಾಯಣರಾಜು ತಿಳಿಸಿದರು.
ಇಲ್ಲಿನ ಶ್ರೀ ದೇವರಾಜ ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯ ಮತ್ತು ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್, ಲಯನ್ಸ್ ಚಾರಿಟೀಸ್ ಟ್ರಸ್ಟ್, ಶಾಂತಿನಗರ ಲಯನ್ಸ್ ಸಂಸ್ಥೆ, ಲಯನ್ಸ್ ರಕ್ತನಿಧಿ, ಆರ್.ಎಲ್.ಜಾಲಪ್ಪ ಆಸ್ಪತ್ರೆ ರಕ್ತನಿಧಿಗಳ ಸಹಯೋಗದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಕ್ತದಾನ ಮಾಡಿದ ಕಡಿಮೆ ಅವಧಿಯಲ್ಲೇ ರಕ್ತ ಮರುಪೂರಣವಾಗುತ್ತದೆ. ನಮ್ಮ ದೇಹದ ರಕ್ತವನ್ನು ದಾನ ಮಾಡುವ ಮೂಲಕ ನಾವು ಮತ್ತೊಬ್ಬರಿಗೆ ಬದುಕನ್ನು ಕೊಡಬಹುದು. 18 ವರ್ಷ ಮೀರಿದ ಆರೋಗ್ಯವಂತರೆಲ್ಲರೂ ರಕ್ತದಾನ ಮಾಡಬಹುದು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಎಸ್ಡಿಯುಇಟಿ ಟ್ರಸ್ಟಿ ಎನ್.ಅರವಿಂದ್ ಮಾತನಾಡಿ, ಅನಿವಾರ್ಯ ಸಂದರ್ಭಗಳಲ್ಲಿ ಜನರ ಪ್ರಾಣ ರಕ್ಷ ಣೆಗೆ ಮತ್ತು ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ನಾವು ಕೊಡುವ ರಕ್ತದ ಮಹತ್ವ ಗಣನೀಯವೆನಿಸುತ್ತದೆ ಎಂದರು……