ಬೆಂಗಳೂರು:
ದುನಿಯಾ ವಿಜಿ ಮನೆಗೆ ನುಗ್ಗಿ ಕೀರ್ತಿಗೌಡ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮೊದಲ ಪತ್ನಿ ನಾಗರತ್ನಗೆ ಗಿರಿನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ದುನಿಯಾ ವಿಜಿ ಜೈಲಿನಲ್ಲಿದ್ದಾಗ ಸೆಪ್ಟೆಂಬರ್ 23ರಂದು ಕೀರ್ತಿಗೌಡ ಮೇಲೆ ನಾಗರತ್ನ ಹಲ್ಲೆ ಮಾಡಿದ್ದರು. ಈ ಕುರಿತು ಗಿರಿನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ತಲೆಮರೆಸಿಕೊಂಡಿರುವ ನಾಗರತ್ನಗಾಗಿ ಪೊಲೀಸ್ರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ನಿನ್ನೆಯಿಂದ ನಾಗರತ್ನ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಸಿಡಿಆರ್ ಹಾಕಿ ಪೊಲೀಸರು ಶೋಧ ಮಾಡ್ತಿದ್ದಾರೆ. ನಾಗರತ್ನ ಮೇಲೆ ಕೊಲೆ ಯತ್ನ, ಜೀವ ಬೆದರಿಕೆಯಂತಹ ಗಂಭೀರ ಪ್ರಕರಣಗಳನ್ನು ಹಾಕಲಾಗಿದೆ. ಹಾಗಾಗಿ ನಾಗರತ್ನ ಬಂಧನ ಸಾಧ್ಯತೆ ಹೆಚ್ಚಾಗಿದೆ ಇತ್ತ ನಾಗರತ್ನ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ವಕೀಲರ ಮೂಲಕ ಪ್ರಯತ್ನ ನಡೆಸುತ್ತಿದ್ದಾರೆ……