SHARE......LIKE......COMMENT......
ಮಸಾಲೆ ಚಾಟ್ ಗೆ ಬೇಕಾಗುವ ಸಾಮಾಗ್ರಿಗಳು….
- ಕಡಲೆಕಾಯಿ ಬೀಜ- 1 ಬಟ್ಟಲು
- ಎಣ್ಣೆ- 2 ಚಮಚ
- ಕರಿಬೇವು ಎಲೆ – ಸ್ವಲ್ಪ
- ಅರಿಶಿನ ಪುಡಿ – ಅರ್ಧ ಚಮಚ
- ಅಚ್ಚ ಖಾರದ ಪುಡಿ – ಮುಕ್ಕಾಲು ಚಮಚ
- ಇಂಗು- ಸ್ವಲ್ಪ
- ಕಾಳು ಮೆಣಸು- ತರಿತರಿಯಾಗಿ ಕುಟ್ಟಿಕೊಂಡಿದ್ದು 3-4 ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
- ಈರುಳ್ಳಿ – ಸಣ್ಣಗೆ ಹೆಚ್ಚಿದ್ದು 1-2 ಚಮಚ
- ಟೊಮೆಟೋ- ಸಣ್ಣಗೆ ಹೆಚ್ಚಿದ್ದು 1-2 ಚಮಚ
- ಕ್ಯಾರೆಟ್ ತುರಿ- 1-2 ಚಮಚ
- ಕೊತ್ತಂಬರಿ ಸೊಪ್ಪು- – ಸಣ್ಣಗೆ ಹೆಚ್ಚಿದ್ದು ಸ್ವಲ್ಪ
- ನಿಂಬೆಹಣ್ಣಿನ ರಸ- 1 ಚಮಚ
ಮಾಡುವ ಸುಲಭ ವಿಧಾನ…
- ಕಡಲೆಕಾಯಿ ಬೀಜವನ್ನು ಚೆನ್ನಾಗಿ ಹುರಿದುಕೊಂಡು, ಸಂಪೂರ್ಣವಾಗಿ ತಣ್ಣಗಾದ ಬಳಿಕ ಸಿಪ್ಪೆಯನ್ನು ತೆಗೆದಿಟ್ಟುಕೊಳ್ಳಬೇಕು.
- ನಂತರ ಬಾಣಲೆಗೆ 1 ಚಮಚ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಕರಿಬೇವು ಹಾಕಿ ಕೆಂಪಗೆ ಹುರಿದುಕೊಳ್ಳಬೇಕು. ಬಳಿಕ ಅರಿಶಿಣದ ಪುಡಿ, ಅಚ್ಚ ಖಾರದ ಪುಡಿ, ಕಾಳು ಮೆಣಸಿನ ಪುಡಿ ಹಾಕಿ ಕೆಂಪಗೆ ಹುರಿದುಕೊಂಡು, ಇದಕ್ಕೆ ಹುರಿದಿಟ್ಟುಕೊಂಡ ಕಡಲೆಕಾಯಿ ಬೀಜ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
- ನಂತರ ಅದನ್ನು ಒಂದು ಪಾತ್ರೆಗೆ ಹಾಕಿ ಈರುಳ್ಳಿ, ಟೊಮೆಟೋ, ಕ್ಯಾರೆಟ್ ತುರಿ, ಕೊತ್ತಂಬರಿ ಸೊಪ್ಪು, ನಿಂಬೆ ರಸ ಹಾಗೂ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿದರೆ, ರುಚಿಕರವಾದ ಮಸಾಲೆ ಕಡಲೆಕಾಯಿ ಬೀಜದ ಚಾಟ್ ಸವಿಯಲು ಸಿದ್ಧ.