Breaking News

ವಿಜಯ್ ದೇವರಕೊಂಡ ಹೊಸ ಸಿನಿಮಾಗೆ ಮೂವರು ನಾಯಕಿಯರು..!

ಅ.18 ಮುಹೂರ್ತ ಫಿಕ್ಸ್..?

SHARE......LIKE......COMMENT......

ಟಾಲಿವುಡ್:

‘ಅರ್ಜುನ್ ರೆಡ್ಡಿ’ ಮತ್ತು ‘ಗೀತ ಗೋವಿಂದಂ’ ಸಿನಿಮಾಗಳ ನಂತರ  ಟ ವಿಜಯ್ ದೇವರಕೊಂಡ ಅವರಿಗೆ ಬಳಿಕ ಬೇಡಿಕೆ ಹೆಚ್ಚಿದೆ. ಚಿತ್ರದಿಂದ ಚಿತ್ರಕ್ಕೆ ಭಿನ್ನತೆ ಕಾಪಾಡಿಕೊಳ್ಳುತ್ತಿರುವ ಅವರು ನಟಿಸಿರುವ ‘ನೋಟಾ’ ಸಿನಿಮಾ ಇತ್ತೀಚೆಗಷ್ಟೇ ತೆರೆಕಂಡಿತ್ತು. ತಮಿಳು ಮತ್ತು ತೆಲುಗಿನಲ್ಲಿ ರಿಲೀಸ್ ಆಗಿದ್ದ ಈ ಚಿತ್ರ ಅಂದುಕೊಂಡ ಮಟ್ಟಕ್ಕೆ ಯಶಸ್ವಿಯಾಗಿಲ್ಲ. ‘ನೋಟಾ’ ಹಿನ್ನಡೆಗೆ ಕಾರಣ ಏನು ಎಂಬುದನ್ನು ಅವಲೋಕಿಸುತ್ತಲೇ ಮುಂದಿನ ಚಿತ್ರಗಳತ್ತ ಗಮನ ಹರಿಸಿದ್ದಾರೆ.

ಟಾಲಿವುಡ್​ನಲ್ಲಿ ಕ್ರಾಂತಿ ಮಾಧವ್ ನಿರ್ದೇಶಿಸಲಿರುವ ಹೊಸ ಚಿತ್ರಕ್ಕೆ ವಿಜಯ್ ನಾಯಕ. ಅಚ್ಚರಿ ಎಂದರೆ ಈ ಸಿನಿಮಾದಲ್ಲಿ ಅವರಿಗೆ ಮೂವರು ನಾಯಕಿಯರು ಇರಲಿದ್ದಾರೆ.

‘ಮಳ್ಳಿ ಮಳ್ಳಿ ಇದೇ ರಾನಿ ರೋಜು’ ಚಿತ್ರದ ಮೂಲಕ ಖ್ಯಾತಿ ಪಡೆದಿದ್ದ ಕ್ರಾಂತಿ ಮಾಧವ್ ಈಗ ವಿಜಯ್ ಅವರಿಗೋಸ್ಕರ ಹೊಸ ಕಥೆ ಸಿದ್ಧ ಮಾಡಿಕೊಂಡಿದ್ದಾರೆ.  ಅವರಿಗೆ ಜತೆಯಾಗಿ ರಾಶಿ ಖನ್ನಾ, ಐಶ್ವರ್ಯಾ ರಾಜೇಶ್ ಮತ್ತು ಇಸಾಬೆಲ್ಲ ದೇ ನಟಿಸಲಿದ್ದಾರೆ. ಈ ಮೂವರು ಹೀರೋಯಿನ್​ಗಳ ಪಾತ್ರ ಹೇಗಿರಲಿದೆ ಎಂಬ ಬಗ್ಗೆ ನಿರ್ದೇಶಕರು ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.

ವಿಜಯ್ ಇದೇ ಮೊದಲ ಬಾರಿಗೆ ಮೂವರು ನಾಯಕಿಯರ ಜತೆ ತೆರೆ ಹಂಚಿಕೊಳ್ಳುತ್ತಿರುವುದರಿಂದ ಚಿತ್ರದ ಬಗ್ಗೆ ಅವರ ಅಭಿಮಾನಿಗಳಲ್ಲಿ ಸಹಜವಾಗಿಯೇ ನಿರೀಕ್ಷೆ ಸೃಷ್ಟಿಯಾಗಿದೆ. ಅಂದಹಾಗೆ, ಈ ಚಿತ್ರಕ್ಕಿನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ದಸರಾ ಹಬ್ಬದ ಶುಭದಿನದಂದು (ಅ.18) ಮುಹೂರ್ತ ನೆರವೇರಿಸಬೇಕೆಂದು ಪ್ಲಾನ್ ರೂಪಿಸಲಾಗಿದೆ…….